ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀನಿವಾಸಾಯ ಮಂಗಳಂ’

Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಶ್ರಾವಣಮಾಸದಲ್ಲಿ ಬರುವ ಶನಿವಾರಗಳಿಗೂ ತುಂಬ ಮಹತ್ವವಿದೆ. ಅಂದು ಉಪವಾಸ ಮಾಡುವ ಕ್ರಮವೂ ಉಂಟು.
ವಿಶೇಷವಾಗಿ ಈ ದಿವಸ ವೆಂಕಟೇಶ್ವರನನ್ನು ಪೂಜಿಸುವುದುಂಟು. ಶ್ರೀನಿವಾಸನ ಆಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ತಿರುಪತಿಯಲ್ಲಂತೂ ತುಂಬ ಸಂಭ್ರಮದಿಂದ ತಿಮ್ಮಪ್ಪನ ಪೂಜೆ–ಉತ್ಸವಾದಿಗಳು ನಡೆಯಲಿವೆ.

ತಿರುಪತಿಯನ್ನು ಭೂವೈಕುಂಠ ಎಂದೇ ಪುರಾಣಗಳು ಬಣ್ಣಿಸಿವೆ. ಕಲಿಯುಗದ ದೈವ ಎಂದರೇ ಅದು ಶ್ರೀನಿವಸನೇ ಹೌದು ಎಂದೂ ನಂಬಿಕೆಯಿದೆ. ಶನಿವಾರ ವೆಂಕಟೇಶ್ವರಿನಿಗೆ ಮೀಸಲಾದ ವಾರ. ಅಂದು, ಅದರಲ್ಲೂ ಶ್ರಾವಣ ಶನಿವಾರಗಳಂದು ತಿರುಪತಿ ತಿಮ್ಮಪ್ಪನನ್ನು ಪೂಜಿಸುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಆಸ್ತಿಕರದ್ದು. ಶ್ರಾವಣ ಶನಿವಾರಗಳಂದು ಶ್ರೀನಿವಾಸನ ಎಲ್ಲ ಆಲಯಗಳೂ ವೈಕುಂಠಕ್ಕೆ ಸಮವೇ ಆಗಿರುತ್ತದೆ. ಆದ್ದರಿಂದ ಅಂದು ಅವನ ಆಲಯವನ್ನು ಸಂದರ್ಶಿಸುವ ತವಕ ಭಕ್ತರದ್ದು.

ಮನೆ ಮನೆಗೆ ತೆರಳಿ ‘ಶ್ರೀನಿವಾಸಾಯ ಮಂಗಳಂ’ ಎಂದೋ ‘ಗೋವಿಂದ ಗೋವಿಂದ’ ಎಂದೋ ಮನೆಯ ಮುಂದೆ ಕೂಗಿ, ‘ಭಿಕ್ಷೆ’ಯನ್ನು ಬೇಡುವ ವಾಡಿಕೆಯೂ ಕೆಲವು ಮನೆತನಗಳಲ್ಲಿದೆ. ನಮ್ಮ ಅಹಂಕಾರವನ್ನು ಕಳೆದುಕೊಳ್ಳಲು ಇದೊಂದು ಸಾಧನಮಾರ್ಗವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT