ಮಂಗಳವಾರ, ಮಾರ್ಚ್ 31, 2020
19 °C

ಹೊಸ ಪುಸ್ತಕ: ‘ಮಹಾಮಾರಿ ಕೊರೊನಾ’ ಆಯುರ್ವೇದ ಚಿಕಿತ್ಸಾ ವಿಧಾನ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ಕೊರೊನಾ ವೈರಾಣು ಕುರಿತ ಭೀತಿ, ಆತಂಕಗಳು ನಾಗರಿಕರನ್ನು ಕಂಗೆಡಿಸಿರುವುದು ನಿಜ. ಆದರೆ ಭಾರತೀಯ ಜನಸಮುದಾಯಗಳು ಶತಶತಮಾನದಿಂದ ಇಂಥ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ’ ಎಂದು ಮುನ್ನುಡಿಯೊಂದಿಗೆ ಪುಸ್ತಕದ ಓದು ಆರಂಭವಾಗುತ್ತದೆ.

‘ಅಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕ’ ಎಂಬ ಭರವಸೆ ಬಿತ್ತುವ ಈ ಪುಸ್ತಕದಲ್ಲಿ ಒಟ್ಟು 19 ಅಧ್ಯಾಯಗಳಿವೆ.

ಆಯುರ್ವೇದ ವೈದ್ಯ ಡಾ.ಸತ್ಯನಾರಾಯಣ ಭಟ್ ಅವರು ಈ ಪುಸ್ತಕದ ಮೂಲಕ ತಿಳಿಗನ್ನಡದಲ್ಲಿ ಕೊರೊನಾವೈರಸ್ (ಕೋವಿಡ್–19) ಬಗ್ಗೆ ಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.

‘ಆಗಾಗ ಕೊಬ್ಬರಿ ಎಣ್ಣೆ ಮತ್ತು ತುಪ್ಪವನ್ನು ಸೌಟಿನಲ್ಲಿ ಬಿಸಿ ಮಾಡಿ ನೆತ್ತಿಗೆ ಹೆಚ್ಚಿ. ಐದೇ ನಿಮಿಷದಲ್ಲಿ ತಲೆಗೆ ಸ್ನಾನ ಮಾಡಿದರೆ ರೋಗ ನಿರೋಧಕತೆಗೆ ಒತ್ತು ಸಿಗುತ್ತದೆ. ಎಲ್ಲ ಬಗೆಯ ನೆಗಡಿ ಮತ್ತು ಗಂಟಲು ತೊಂದರೆಗೆ ಇದು ಉತ್ತಮ ವಿಧಾನ’ ಎಂಬುದು ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಸರಳ ಮುನ್ನೆಚ್ಚರಿಕೆ ಕ್ರಮ. ಇಂಥ ಹಲವು ಸಲಹೆಗಳನ್ನು ಈ ಪುಸ್ತಕದಲ್ಲಿ ಗಮನಿಸಬಹುದು.

ಪುಸ್ತಕದ ಹೆಸರು ‘ಮಹಾಮಾರಿ ಕೊರೊನಾ’ ಎಂದು ಇದ್ದರೂ ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಹಲವು ವಿಷಯಗಳು ಮನುಷ್ಯರ ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕ ಕ್ರಮಗಳನ್ನು ಪ್ರಸ್ತಾಪಿಸುತ್ತವೆ. ಹೀಗಾಗಿ ಇದನ್ನು ಕೇವಲ ಕೊರಾನಾಗೆ ಮಾತ್ರವೇ ಸೀಮಿತವಾಗಿ ಪರಿಗಣಿಸಬೇಕಾಗಿಲ್ಲ.

‍ಪುಸ್ತಕದ ಹೆಸರು: ಮಹಾಮಾರಿ ಕೊರೊನಾ (ಕಾರಣ ಮತ್ತು ಆಯುರ್ವೇದ ಚಿಕಿತ್ಸಾ ವಿಧಾನ)
ಲೇಖಕ: ಡಾ.ಸತ್ಯನಾರಾಯಣ ಭಟ್
ಪುಟಗಳು: 95
ಬೆಲೆ: ₹100
ಪ್ರಕಾಶನ: ಸಾಹಿತ್ಯ ಲೋಕ ಪ್ರಕಾಶನ, ನಂ 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು, ಪಿನ್ 560010. ಮೊ– 99459 39436.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು