ಸೋಮವಾರ, ಜೂನ್ 1, 2020
27 °C

ಸಸ್ಯ ಜಗತ್ತಿನ ಸೋಜಿಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇದು ಸಸ್ಯ ಜಗತ್ತಿನ ಸೋಜಿಗಗಳ ವೃತ್ತಿ ಕಥನಗಳನ್ನು ಒಳಗೊಂಡ ಅಪರೂಪದ ಕೃತಿ. ಪತ್ತೆದಾರಿಕೆಯ ಶೈಲಿಯಲ್ಲೇ ಸಸ್ಯ ಲೋಕವನ್ನು ಲೇಖಕರು ಅನಾವರಣಗೊಳಿಸಿದ್ದಾರೆ. ಸಸ್ಯಗಳು ಪಾಪದ ಜೀವಗಳು, ಅವುಗಳಲ್ಲಿ ಹಿಂಸೆ, ಕಾಮ, ಕ್ರೋಧ ಇಲ್ಲವೆಂದೇ ನಾವೆಲ್ಲರೂ ನಂಬಿರುವ ಸಿದ್ಧನಂಬಿಕೆಯನ್ನು ಈ ಕೃತಿ ಹೊಡೆದು ಬಿಸಾಕುತ್ತದೆ.

ಸಸ್ಯ ಪ್ರಪಂಚದಲ್ಲೂ ಕಾಮ, ದ್ವೇಷ, ಸ್ವಾರ್ಥ, ಹಿಂಸೆ ಮುಂತಾದ ನಡೆಗಳು ಪ್ರಾಣಿ ಪ್ರಪಂಚದಲ್ಲಿ ಇರುವಂತೆಯೇ ಇದೆ, ಮನುಷ್ಯ ಪ್ರಪಂಚದಲ್ಲಿ ಇರುವಂತೆ ಕೊಲೆ– ಸುಲಿಗೆಯೂ ಇದೆ ಎನ್ನುವುದನ್ನು ಇಲ್ಲಿನ ಬರಹಗಳು ಸಾಕ್ಷೀಕರಿಸುತ್ತವೆ. ಸಸ್ಯಗಳಿಗೆ ಇರುವೆಗಳೊಂದಿಗೆ ಇರುವ ಅನನ್ಯ ಸಹಜೀವನ ಮತ್ತು ಕಣಜಗಳೊಂದಿಗೆ ಇರುವ ಚೌಕಾಸಿ ವ್ಯವಹಾರದ ಕುತೂಹಲವನ್ನು ಈ ಕೃತಿ ತೆರೆದಿಟ್ಟಿದೆ. ಓದಿನ ಸುಖ ಹೆಚ್ಚಿಸಲು ಹೋಗಿ ಅಲ್ಲಲ್ಲಿ ಸಿನಿಕತನದ ವಿವರಣೆಗಳನ್ನು ತುರುಕಿರುವುದರಿಂದ ಪ್ರಮುಖ ವಿಷಯಗಳೇ ಗೌಣವಾಗಿ ಕಾಣಿಸುವುದು ಉಂಟು. ಇದನ್ನು ಕಾದಂಬರಿಯಂತೆ ಒಂದೇ ಓಘದಲ್ಲಿ ಓದಿಮುಗಿಸಬೇಕಾದ ಉಮೇದು ಎದುರಾಗುವುದಿಲ್ಲ; ಪ್ರಬಂಧಗಳ ಸಂಕಲನದಂತಿರುವುದರಿಂದ ಯಾವುದೇ ಅಧ್ಯಾಯದಿಂದಲೂ ಓದು ಆರಂಭಿಸಬಹುದು. ಸಂಶೋಧನಾ ಕ್ಷೇತ್ರಗಳ ವಿದ್ಯಾರ್ಥಿಗಳಿಗೆ ಈ ಕೃತಿ ಪ್ರೇರಣದಾಯಕವೂ ಆಗಿದೆ. ವಿಜ್ಞಾನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೃತಿ ಬರೆದಿದ್ದರೂ ವಿಜ್ಞಾನಿಯೂ ಸಾಮಾನ್ಯ ಮನುಷ್ಯ, ಆ ಮನುಷ್ಯನ ಬದುಕಿನಲ್ಲೂ ಆಸೆ, ನಿರಾಸೆಗಳು, ಭಾವನೆಗಳು, ವಿಜ್ಞಾನ ರಾಜಕೀಯದ ಚದುರಂಗದಾಟಗಳು, ನೋವು ನಲಿವುಗಳು, ಆತಂಕದ ಕ್ಷಣಗಳು ಇವೆ ಎನ್ನುವುದು ಈ ಕೃತಿ ಓದುವಾಗ ವೇದ್ಯವಾಗುವುದು ಖರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು