ಆಫ್ರಿಕಾ ಖಂಡದಅಂಗೋಲ ದೇಶದ ಜನರ ಊರು–ಕೇರಿ, ಸಂಸ್ಕೃತಿಯ ಆತ್ಮವನ್ನು ಲೇಖಕ ಈ ಕೃತಿಯಲ್ಲಿ ಇದಮಿತ್ಥವಾಗಿ ಹಿಡಿದುಕೊಟ್ಟಿದ್ದಾರೆ.

ದಯನೀಯ ಬದುಕನ್ನು ನಡೆಸುತ್ತಿರುವ ಆ ದೇಶದ ಕಥೆಯನ್ನು ಎಳೆಎಳೆಯಾಗಿಯೂ ತೆರೆದಿಟ್ಟಿದ್ದಾರೆ.ಈ ಕೃತಿಯಲ್ಲಿ 30 ಲೇಖನಗಳಿವೆ. ಒಂದು ಪ್ರವಾಸ ಕಥನ ಹೇಗಿರಬೇಕೆನ್ನುವ ಚೌಕಟ್ಟನ್ನು ಈ ಕೃತಿ ತೋರಿಸಿಕೊಡುತ್ತದೆ. ಆದರೆ, ಲೇಖನದಲ್ಲಿರುವ ಸಣ್ಣಸಣ್ಣ ವಿವರವೂ ಓದನ್ನು ಧೀರ್ಘಗೊಳಿಸುತ್ತದೆ.

ಮೊದಲು ಬ್ಲಾಗ್ಗೆ ಬರೆದ ಸುದೀರ್ಘಲೇಖನಗಳು ಇವಾಗಿರುವುದರಿಂದ ಅಲ್ಲಿನ ಓದುಗರಿಗೆ ಬೇಕಾದಂತೆ ಇವೆ. ಅವಧಿ ಬ್ಲಾಗ್ನಲ್ಲಿ ‘ಹಾಯ್ ಅಂಗೋಲಾ’ ಶೀರ್ಷಿಕೆಯಲ್ಲಿ ಇವು ಪ್ರಕಟವಾಗಿವೆ. ಇದನ್ನು ಕೃತಿ ರೂಪಕ್ಕೆ ಇಳಿಸುವಾಗ ಕೊಂಚ ಕತ್ತರಿ ಆಡಿಸಿ ಸಂಕ್ಷಿಪ್ತಗೊಳಿಸಿದ್ದರೆ ಓದಿನ ಸುಖ ಮತ್ತಷ್ಟು ಹೆಚ್ಚುತ್ತಿತ್ತು ಎನಿಸುವುದುಂಟು. ಆದರೂ ಬದುಕನ್ನು ಇಡಿಇಡಿಯಾಗಿ, ಸಾರ್ಥಕವಾಗಿ ಬದುಕಬೇಕೆನ್ನಿಸುವ ಜೀವಂತ ತುಡಿತವನ್ನು ಇಲ್ಲಿನ ಬರಹಗಳು ಉದ್ದೀಪನಗೊಳಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.