ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಂದಿಗೆಯೊಳಗಿಂದ

Last Updated 7 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""

ಲೇ: ಬಿ.ಎಂ. ರೋಹಿಣಿ

ಪ್ರ: ಆಕೃತಿ ಆಶಯ ಪಬ್ಲಿಕೇಶನ್ಸ್

ಬೆ: ₹ 300

ಪು: 288

ದೂ: 0824 2443002

ಲೇಖಕಿ ಬಿ.ಎಂ. ರೋಹಿಣಿ ಅವರ ಜೀವನ ಕಥನ ‘ನಾಗಂದಿಗೆಯೊಳಗಿಂದ’. ಇದು ಪುಸ್ತಕ ರೂಪದಲ್ಲಿ ಹೊಸದು. ಆದರೆ ರೋಹಿಣಿ ಅವರ ಜೀವನದ ಕಥೆಯನ್ನು ಅಕ್ಷರ ರೂಪದಲ್ಲಿ ಕನ್ನಡದ ಓದುಗರು ಅಂತರ್ಜಾಲದ ಮೂಲಕ ಈಗಾಗಲೇ ಓದಿರಬಹುದು. ಅತ್ರಿ ಬುಕ್‌ ಸೆಂಟರ್‌ನ ಅಶೋಕವರ್ಧನ ಅವರ ಜಾಲತಾಣದಲ್ಲಿ ಇದು ಈಗಾಗಲೇ ಲಭ್ಯವಿದೆ. ಆದರೆ, ‘ಅಂತರ್ಜಾಲದ ಬಳಿಗೆ ಸುಳಿಯದ ಒಂದು ದೊಡ್ಡ ವರ್ಗ’ಕ್ಕೆ ತಮ್ಮ ಜೀವನದ ಕಥೆಯನ್ನು ತಲುಪಿಸುವ ಉದ್ದೇಶದಿಂದ ರೋಹಿಣಿ ಅವರು ಇದನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಒಟ್ಟು 38 ಅಧ್ಯಾಯಗಳು ಈ ಪುಸ್ತಕದಲ್ಲಿ ಇವೆ. ಲೇಖಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ, ಸ್ತ್ರೀವಾದಿಯಾಗಿ ಗುರುತಿಸಿಕೊಂಡಿರುವ ರೋಹಿಣಿ ಅವರ ಬರಹಗಳು ಹೆಣ್ಣಿನ ಆತ್ಮಸ್ಥೈರ್ಯವನ್ನು ಹೆಚ್ಚಿಸಬಲ್ಲವು. ಆದರೆ, ಅಷ್ಟಕ್ಕೇ ಈ ಬರಹಗಳನ್ನು ಸೀಮಿತಗೊಳಿಸುವುದು ತಪ್ಪಾದೀತು. ಇಲ್ಲಿನ ಬರಹಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬದುಕಿನ ಒಂದು ಮಗ್ಗುಲನ್ನು ತೋರಿಸುವ ಕನ್ನಡಿಯಂತೆಯೂ ಕಾಣಬಹುದು. ಹಾಗೆಯೇ, ಯಾವುದೇ ಸಹೃದಯನ ಮನಸ್ಸನ್ನು ಆರ್ದ್ರಗೊಳಿಸುವ ಬರಹಗಳ ರೂಪದಲ್ಲಿಯೂ ಓದಿಕೊಳ್ಳಬಹುದು. ಅಕಾಡೆಮಿಕ್ ಭಾರ ಇಲ್ಲದ, ಸರಳ ಗದ್ಯ ಶೈಲಿಯು ಈ ಕೃತಿಯ ಹೆಚ್ಚುಗಾರಿಕೆ.

***

ಅರೆ, ಶೌಚಾಲಯದಲ್ಲಿ ತಪಸ್ಸು ಮಾಡುವುದುಂಟೆ? ಹೌದೆನ್ನುತ್ತಾರೆ ಲೇಖಕರು.

ಅವರ ಪಾಲಿಗೆ ಶೌಚವೂ ತಪಸ್ಸೇ. ಉಸಿರಾಡಿದಷ್ಟೇ ಸಹಜವಾಗಿರುವ, ಅದಿಲ್ಲದೆ ಬದುಕಲಾರೆವೆಂಬ ‘ಪ್ರಕೃತಿ ಕರೆ’ಗಳನ್ನು ಮಾತಾಡಲು ಮುಜುಗರ ಪಟ್ಟು ಇಂಗ್ಲಿಷ್ ಪದಗಳ ಮೊರೆ ಹೋಗುವೆಡೆ ಅವುಗಳನ್ನು ಯಾವ ಸಂಕೋಚವೂ ಇಲ್ಲದೆ ವಿವರಿಸಿರುವ ಲೇಖಕರ ಪ್ರಯತ್ನ ವಿಶಿಷ್ಟ.

ಮೇಲ್ನೋಟಕ್ಕೆ ನಗೆಯುಕ್ಕಿಸುವಂತಿರುವ ಇಲ್ಲಿನ‌ ಪ್ರಬಂಧಗಳು ತೆರೆದಿಡುವ ಮತ್ತೊಂದು ಮಗ್ಗುಲು ಓದುಗರನ್ನು ನಿಟ್ಟುಸಿರುಯ್ಯುವಂತೆ ಮಾಡುತ್ತವೆ. ಬಡತನ, ಅಸಹಾಯಕತೆ, ನಿಂದೆ, ಅಪಮಾನಗಳು ವ್ಯಕ್ತಿಯನ್ನು ಹೇಗೆಲ್ಲ ನರಳಿಸಬಲ್ಲವು, ಕೆರಳಿಸಬಲ್ಲವು ಎಂಬುದನ್ನು ತೆರೆದಿಡುತ್ತದೆ ಈ ಹೊತ್ತಿಗೆ.

ನಮ್ಮಲ್ಲೂ ಘಟಿಸಿರಬಹುದಾದ ಘಟನೆಗಳನೇಕ ಕಾಣಸಿಗುತ್ತವೆ ಇಲ್ಲಿ. ಬದಲಾದ ಕಾಲಘಟ್ಟದಲ್ಲಿ ಬಯಲು ಮುಕ್ತ ಶೌಚ ಯೋಜನೆ ಬೇರೆಯದ್ದೇ ಹಾದಿ ಹಿಡಿದಿದೆ. ಅಭಿವೃದ್ಧಿ ಹಾಗೂ ಆಧುನಿಕತೆಗಳು ಹಳ್ಳಿ ಜೀವನವನ್ನು ಇಂಚಿಂಚಾಗಿ ಬಲಿ ಪಡೆಯುತ್ತಿರುವುದರ ಸೂಕ್ಷ್ಮ ಚಿತ್ರಣವೂ ಇಲ್ಲಿದೆ.

***

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT