ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ – ಮೌಲ್ಯಗಳ ನಡುವಿನ ಮೌನ

Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧೀಜಿ ಕುರಿತು ತಾರ್ಕಿಕವಾಗಿಯೂ ಭಾವುಕವಾಗಿಯೂ ಬರೆಯಬಲ್ಲ ಅರವಿಂದ ಚೊಕ್ಕಾಡಿ ಅವರು ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಭಾಗವಾಗಿ ಬರೆದ ಕೃತಿ ಇದು.

ಗಾಂಧೀಜಿ ಬದುಕಿದ್ದುದು 79 ವರ್ಷ. ಹಾಗಾಗಿ ಈ ಪುಸ್ತಕದಲ್ಲಿ 79 ಬಿಡಿ ಲೇಖನಗಳು ಇವೆ ಎಂದು ಚೊಕ್ಕಾಡಿ ಹೇಳಿದ್ದಾರೆ. ಎಷ್ಟು ಓದಿದರೂ ಮುಗಿಯದ ಗಾಂಧೀಜಿಯ ಜೀವನ ಮಾರ್ಗ ಮತ್ತು ಚಿಂತನೆಗಳ ಕೊಲಾಜ್‌ನಂತೆ ಇದೆ ಈ ಕೃತಿ.

ಪ್ರತಿ ಬರಹವೂ ಪುಟ್ಟ ಪುಟ್ಟದ್ದಾಗಿದ್ದು, ಅದು ಕೆಲವೇ ನಿಮಿಷಗಳ ಓದಿನಲ್ಲಿ ಮುಗಿಯುತ್ತದೆ. ಆದರೆ, ಪ್ರತಿ ಬರಹದ ಓದು ಕೂಡ ಒಂದಿಷ್ಟು ಹೊತ್ತು ಚಿಂತನೆಗೆ ಹಚ್ಚುತ್ತದೆ. ಏಕಕಾಲದಲ್ಲಿ ಸರಳವೂ ಗಹನವೂ ಆಗಿರುವ ಬರಹಗಳು ಓದುಗನ ದೃಷ್ಟಿಯನ್ನು ಹಿಡಿದು ಇರಿಸಿಕೊಳ್ಳುತ್ತವೆ. ಗಾಂಧೀಜಿ ಅವರ ಹಾಸ್ಯಪ್ರಜ್ಞೆಯನ್ನು ವಿವರಿಸುವ ಲೇಖನವೊಂದು ಕೊನೆಯಲ್ಲಿ, ‘ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳಬಲ್ಲ ಸಾಮರ್ಥ್ಯವಿರುವವರ ಆತ್ಮಸ್ಥೈರ್ಯವನ್ನು ಯಾರೂ ಕಸಿದುಕೊಳ್ಳಲಾರರು’ ಎಂಬ ಮಾತಿನೊಂದಿಗೆ ಮುಕ್ತಾಯವಾಗುತ್ತದೆ. ಗಾಂಧೀಜಿ ಅವರಲ್ಲಿನ ಗುಣಗಳಿಂದ ಮೌಲ್ಯಗಳನ್ನು ಕಲಿಯುವ ಬಗೆಯಾಗಿಯೂ ಇಲ್ಲಿನ ಬರಹಗಳನ್ನು ಓದಿಕೊಳ್ಳಬಹುದು.

ಗಾಂಧಿ

ಲೇ: ಅರವಿಂದ ಚೊಕ್ಕಾಡಿ

ಪ್ರ: ರೂಪ ಪ್ರಕಾಶನ

ಬೆ: ₹ 150

ಪು: 188

ದೂ: 93422 74331

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT