ಶನಿವಾರ, ಮಾರ್ಚ್ 6, 2021
28 °C

ಪುಸ್ತಕ ವಿಮರ್ಶೆ: ‘ಅಜ್ಞಾತ’ದ ಮುಸುಕು ಸರಿಸುವ ಪ್ರಶ್ನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜ್ಞಾತ
ಲೇ: ವಿವೇಕಾನಂದ ಕಾಮತ್‌
ಪ್ರ: ವಂಶಿ ಪಬ್ಲಿಕೇಷನ್ಸ್‌

‘ಪ್ರಜಾವಾಣಿ’ ಬಳಗದ ‘ಸುಧಾ’ ಓದುಗರಿಗೆ ವಿವೇಕಾನಂದ ಕಾಮತ್‌ ಅವರ ‘ಅಜ್ಞಾತ’ ಕಾದಂಬರಿಯ ಸ್ಪಷ್ಟ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಈ ಕಾದಂಬರಿ ‘ಸುಧಾ’ದಲ್ಲಿ ಈಗಾಗಲೇ ಧಾರಾವಾಹಿಯಾಗಿ ಪ್ರಕಟವಾಗಿದೆ. ಮನುಷ್ಯನೊಬ್ಬ ಜೀವನದಲ್ಲಿ ಅತಿಯಾಗಿ ನೊಂದಾಗ ಮನಸ್ಸು ಆತ್ಮಶೋಧದತ್ತ ಎಳೆಯುವುದು ಸಾಮಾನ್ಯ. ವೈರಾಗ್ಯಭಾವ ಆವರಿಸಿ, ಅಧ್ಯಾತ್ಮದ ಕಡೆಗೆ ಒಲವೂ ಮೂಡುತ್ತದೆ. ಆ ಬಳಿಕ ನಾವು ಪಡೆಯುವುದಾದರೂ ಏನನ್ನು? ಕೊನೆಗೆ ಮನುಷ್ಯನ ಶಾಶ್ವತ ಆಯ್ಕೆಯಾದರೂ ಯಾವುದಿರಬೇಕು? ದೇಶ–ಕಾಲಾತೀತವಾಗಿ ಎಲ್ಲರನ್ನೂ ಕಾಡಿದ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ‘ಅಜ್ಞಾತ’ದ ಕಾಯಕನಾಥನೂ ಬದುಕಿನ ಹುಡುಕಾಟ ನಡೆಸುತ್ತಾನೆ.

ಬಾಳಿನ ಸೆಳೆತದಲ್ಲಿ ಅಜ್ಞಾತವಾಗಿಯೇ ಉಳಿಯುವ ಹಲವು ಪ್ರಶ್ನೆಗಳನ್ನು ಕಾದಂಬರಿ ಎತ್ತುತ್ತದೆ. ಜತೆಗೆ ಕಾಯಕನಾಥನ ಸಂಯಮವೂ ಕಾಡುತ್ತದೆ. ಧಾರಾವಾಹಿ ರೂಪದಲ್ಲಿ ಕಾದಂಬರಿ ಪ್ರಕಟವಾಗಿದ್ದರಿಂದ ಓದುಗರನ್ನು ಸದಾ ಸೆಳೆಯುವಂತಹ, ಮುಂದಿನ ಭಾಗಕ್ಕಾಗಿ ಕುತೂಹಲದಿಂದ ಕಾಯುವಂತಹ ಅನಿರೀಕ್ಷಿತ ತಿರುವುಗಳನ್ನೂ ಇದು ಒಳಗೊಂಡಿದೆ. 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕೊಟ್ಟಿರುವ ಕಾಮತ್‌ ಅವರು, ‘ಅಜ್ಞಾತ’ದಲ್ಲಿ ಬಳಸಿರುವ ಭಿನ್ನತಂತ್ರ, ನಿರೂಪಣಾಶೈಲಿ ಗಮನ ಸೆಳೆಯುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು