ಶುಕ್ರವಾರ, ಫೆಬ್ರವರಿ 21, 2020
28 °C

ಲಿಬಿಡೊ ಬಿಡುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹಸಿವು, ತೃಷೆ, ನಿದ್ರೆ, ವಿಷಯ, ಮೈಥುನ ಬಯಕೆ ಪಶು, ಪಕ್ಷಿ, ನರರಿಗೆ ಸಮ’ ಎಂದಿದ್ದಾನೆ ಸರ್ವಜ್ಞ. ಇತರ ಜೀವಿಗಳಿಗೆ ಲೈಂಗಿಕ ಆಕರ್ಷಣೆ, ಸಂಭೋಗ ಒಂದು ಜೈವಿಕ ಕ್ರಿಯೆ. ಮನುಷ್ಯನಿಗದು ಅತ್ಯಂತ ಸುಖಾನುಭವದ ಕ್ರೀಡೆ ಎನ್ನುತ್ತಾರೆ ಬಿ.ಆರ್. ಲಕ್ಷ್ಮಣರಾವ್. ಅದು ಇತರ ಕ್ರಿಯೆಗಳಂತೆ ಸಹಜವಷ್ಟೆ. ಆದರೆ ನಮ್ಮಲ್ಲಿ ಮುಕ್ತ ಲೈಂಗಿಕ ಮಾತುಕತೆ, ಚರ್ಚೆ, ಸಮಾಲೋಚನೆ ತೀರಾ ಕಡಿಮೆ. ಅದಕ್ಕೆ ಮಡಿ, ಮೈಲಿಗೆಗಳ ಪರಿಕಲ್ಪನೆ ತೊಡಿಸಿ, ಸಂಪ್ರದಾಯದ ಸೆರಗು ಹೊದಿಸಲಾಗಿದೆ. ಇಂತಹ ಪೂರ್ವಗ್ರಹಗಳ ಮುಸುಕೆಳೆಯುವ ವೈಚಾರಿಕ ಬರಹಗಳ ಸಂಗ್ರಹ ‘ಲಿಬಿಡೊ ಬಿಡುವುದಿಲ್ಲ’.

ವಿಚಾರ, ಒಡನಾಟ, ಮಾತುಕತೆ, ಮುನ್ನುಡಿ ಮತ್ತು ಸ್ಪಂದನ ಎಂಬ ಐದು ಭಾಗಗಳಲ್ಲಿ‌ ಒಟ್ಟು 38 ಬಿಡಿ ಬರಹಗಳಿವೆ ಇಲ್ಲಿ. ಯುವ, ನವ, ಹಿರಿಯ ಕವಿ, ಕವಿತೆ, ಆಶಯ, ಭಾವಾಭಿವ್ಯಕ್ತಿಯ ಪರಿಚಯವೂ ಇಲ್ಲಿದೆ. ತರ್ಕ, ವಾದಗಳ ಪರಿಧಿಯಿಂದ ಆಚೆ ನಿಂತು ಕಂಡುಂಡ ಜೀವಾನಾನುಭವಗಳನ್ನೆ ವಸ್ತುವನ್ನಾಗಿಸಿ ಬರೆದ ಇಲ್ಲಿನ ಬರಹಗಳು ಓದುಗರಿಗೆ ಆಪ್ತವಾಗುವುದರಲ್ಲಿ ಎರಡು ಮಾತಿಲ್ಲ.

=

ಲಿಬಿಡೊ ಬಿಡುವುದಿಲ್ಲ

ಲೇ: ಬಿ.ಆರ್. ಲಕ್ಷ್ಮಣರಾವ್

ಪ್ರ: ಸಪ್ನ ಬುಕ್ ಹೌಸ್

ದೂ: 080–40114455

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)