ಬುಧವಾರ, ಜೂನ್ 29, 2022
24 °C

ಪುಸ್ತಕ ವಿಮರ್ಶೆ: ಹರಿಲಾಲರ ದುರಂತ ಬದುಕಿನ ಚಿತ್ರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಜರಾತಿ ಭಾಷೆಯಲ್ಲಿರುವ  ದಿನಕರ್‌ ಜೋಶಿಯವರ ‘ಮಹಾತ್ಮಾ ವರ್ಸಸ್‌ ಗಾಂಧಿ’ ಕಾದಂಬರಿ, ಅಲ್ಲಿಂದ ಹಿಂದಿಗೆ ಅನುವಾದಗೊಂಡು, ಇದೀಗ ಕನ್ನಡದ ತಾವನ್ನೂ ಹುಡುಕಿಕೊಂಡು ಬಂದಿದೆ.

ಗಾಂಧೀಜಿಯವರ ಬಗ್ಗೆ ಅನೇಕ ಕೃತಿಗಳು ಬಂದಿದ್ದರೂ, ಈ ಕೃತಿ ವಿಶೇಷ ವಸ್ತುವನ್ನು ಹೊಂದಿದೆ. ಈ ಕಾದಂಬರಿಯಲ್ಲಿ ಅವರ ಜ್ಯೇಷ್ಠ ಪುತ್ರ ಹರಿಲಾಲರ ವ್ಯಕ್ತಿತ್ವ ಮತ್ತು ಬದುಕಿನ ದುರಂತ ಚಿತ್ರಣವಿದೆ. ಜೊತೆಗೆ ಗಾಂಧೀಜಿಯವರ ಜೀವನದ ಮಾರ್ಮಿಕ ಮತ್ತು ಕರುಣಾಜನಕ ಮಗ್ಗಲನ್ನೂ ಈ ಕಾದಂಬರಿ ಬಿಂಬಿಸಿದೆ. ದಿನಕರ ಜೋಶಿ ಅವರು ಬರೆದಿದ್ದ ಮೂಲ ಕಾದಂಬರಿ ಗುಜರಾತಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಡಿ.ಎನ್‌. ಶ್ರೀನಾಥ್‌ ಅವರು ಅನುವಾದಿಸಿದ ಈ ಕಾದಂಬರಿ ‘ಬೆಳಕಿನ ನೆರಳು’ ಎಂಬ ಶೀರ್ಷಿಕೆಯಡಿ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

‘ಇಂದು ಹರಿಲಾಲರ ಹೆಸರು ಯಾರಿಗಾದರೂ ನೆನಪಿದ್ದರೆ ಅದು ಬಹುಶಃ ಅವರ ಅದೃಷ್ಟವೇ ಸರಿ! ರಾಜಾಜಿ ಮತ್ತು ಕಿಶೋರಿಲಾಲರ ಮಾತಿರಲಿ, ಜನ ಬಾಪೂರವರನ್ನೂ ಮರೆತಿದ್ದಾರೆ’ ಎಂದು ದಿನಕರ್‌ ಜೋಶಿಯವರು ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. ‘ಹರಿಲಾಲರ ಬಗ್ಗೆ ಗ್ರಂಥಗಳಲ್ಲಿ ಅಥವಾ ಬೇರೆ ಕಡೆಗಳಿಂದ ಸಿಕ್ಕ ಸಾಮಾಗ್ರಿಗಳಲ್ಲಿ ನಿರಂತರತೆಯ ಕೊರತೆಯಿದೆ. ಎಲ್ಲ ವಿವರಗಳೂ ಅಸ್ತವ್ಯವಸ್ತವಾದಂತಿವೆ. ಅನೇಕ ಸ್ಥಳಗಳಲ್ಲಿ ವಿರೋಧಾಭಾಸವೂ ಇದೆ’ ಎನ್ನುತ್ತಾ, ಇವನ್ನೆಲ್ಲ ಕಾದಂಬರಿ ಮಿತಿಯೊಳಗೆ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ಜೋಶಿ.

ಮೂವತ್ತೆಂಟು ಅಧ್ಯಾಯದಲ್ಲಿ ತೆರೆದುಕೊಳ್ಳುವ ಕೃತಿ, ಮಹಾತ್ಮನ ಕುಟುಂಬದ ಚರಿತ್ರೆಯ ಪುಟಗಳನ್ನು ಕಣ್ಮುಂದೆ ತರುತ್ತಾ ಹೋಗುತ್ತದೆ. ಶ್ರೀನಾಥ್‌ ಅವರ ಭಾಷಾಂತರದ ಸರಳ ಭಾಷೆ ಓದಿಗೆ ಪೂರಕವಾಗಿದೆ.

ಮಹಾತ್ಮಾ ವರ್ಸಸ್‌ ಗಾಂಧಿ

ಮೂಲ: ದಿನಕರ್‌ ಜೋಶಿ

ಕನ್ನಡಕ್ಕೆ: ಡಿ.ಎನ್‌. ಶ್ರೀನಾಥ್‌

ಪ್ರ: ವಂಶಿ ಪಬ್ಲಿಕೇಷನ್ಸ್‌, ಬೆಂಗಳೂರು

ಸಂ: 9916595916

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು