ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಹೆತ್ತವ್ವನ ನೆನಪಿಸುವ ಬಯೋಗ್ರಫಿ

Last Updated 30 ಜುಲೈ 2022, 19:32 IST
ಅಕ್ಷರ ಗಾತ್ರ

ವೃತ್ತಿಯಲ್ಲಿ ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಸ್ಟೇಷನ್‌ ಸೂಪರಿಂಟೆಂಡೆಂಟ್‌ ಆಗಿರುವ ಲೇಖಕ ಜಯರಾಮಾಚಾರಿ, ತಮ್ಮ ಅಮ್ಮನ ನೆನಪಿನ ಬುತ್ತಿಯನ್ನು ತೆರೆದಿಟ್ಟಿರುವ ಕೃತಿ ‘ನನ್ನವ್ವನ ಬಯೋಗ್ರಫಿ’.

ಹೆತ್ತವ್ವನ ಉಸಿರುನಿಂತ ಗಳಿಗೆಯಿಂದ ಕೃತಿಯನ್ನು ಆರಂಭಿಸಿರುವ ಲೇಖಕರು ಅವ್ವನ ನೆನಪನ್ನು ಕೆದಕುತ್ತಾ ಹೋಗುತ್ತಾರೆ. ಈ ನೆನಪೆಲ್ಲವನ್ನೂ ಒಂದೇ ಗುಕ್ಕಿನಲ್ಲಿ ಬರೆದದ್ದಾಗಿ ಲೇಖಕರು ಉಲ್ಲೇಖಿಸಿದ್ದಾರೆ. ಬರವಣಿಗೆ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಮಕ್ಕಳಿಗೆ ನೀಡುವ ಪ್ರೀತಿ, ಆರೈಕೆ, ಮಮತೆಯಲ್ಲಿ ತಾಯಂದಿರೆಲ್ಲ ಒಂದೇ. ಹೀಗಾಗಿ ಲೇಖಕರು ತಮ್ಮ ಹೆತ್ತವ್ವನ ಕರ್ತವ್ಯ, ಜವಾಬ್ದಾರಿ, ಆಕೆ ಎದುರಿಸಿದ ಸವಾಲು, ಸಂಕಷ್ಟಗಳನ್ನು ವಿವರಿಸುವಾಗ ಓದುಗರಿಗೂ ತಮ್ಮ ತಾಯಿಯೊಮ್ಮೆ ನೆನಪಾದಾರು. ಈ ರೀತಿ ನೆನಪಾದರೆ ಪುಸ್ತಕಕ್ಕೆ ಸಾರ್ಥಕತೆ ಸಿಕ್ಕೀತು ಎಂದೂ ಲೇಖಕರು ಹೇಳಿದ್ದಾರೆ.

ತಾಯಿಯ ನೆನಪುಗಳನ್ನು ಮೆಲುಕು ಹಾಕುತ್ತಾ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ, ನಿರ್ಲಕ್ಷ್ಯವನ್ನೂ ಈ ಕೃತಿ ತೆಳ್ಳಗಾಗಿ ತೆರೆದಿಟ್ಟಿದೆ. ಸಂಬಂಧಗಳ ಗಟ್ಟಿತನವನ್ನೂ ಜೊತೆಗೆ ಪೊಳ್ಳುತನವನ್ನೂ ಲೇಖಕರು ಬಿಚ್ಚಿಟ್ಟಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅಳುಕಿಲ್ಲದೆ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ.

ಕೃತಿ: ನನ್ನವ್ವನ ಬಯೋಗ್ರಫಿ

ಲೇ: ಜಯರಾಮಾಚಾರಿ

ಪ್ರ: ಬಹುರೂಪಿ

ಸಂ: 7019182729

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT