ಶನಿವಾರ, ಜುಲೈ 2, 2022
27 °C

ಮೊದಲ ಓದು: ಕ್ರೀಡಾಸಕ್ತರಿಗೆ ಉಪಯುಕ್ತ ಕೈಪಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದಲ್ಲಿ ಕ್ರೀಡೆಗೆ ಸಂಬಂಧಿಸಿದ ಕೃತಿಗಳು ಬರುವುದು ವಿರಳ. ವಾಲಿಬಾಲ್‌ ಆಟಗಾರ ಹಾಗೂ ಈ ಆಟದ ಕನ್ನಡ ವೀಕ್ಷಕ ವಿವರಣೆಯಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಎಂ.ಕೆ.ರಂಗಪ್ಪ ಮಾದಲಗೆರೆ (ರಾಜು) ಅವರು ಬರೆದಿರುವ ‘ಕ್ರೀಡಾ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳು’ ಕ್ರೀಡಾಸಕ್ತರಿಗೆ ಉಪಯುಕ್ತ ಕೃತಿ. ಕೈಪಿಡಿಯ ರೀತಿಯಲ್ಲಿದೆ.

ವಿಶ್ವದ ಅಗ್ರಮಾನ್ಯ ಕ್ರೀಡಾಪಟುಗಳ ಸಂಕ್ಷಿಪ್ತ ವಿವರ, ಅವರ ಸಾಧನೆ, ಹಾಕಿ, ಕ್ರಿಕೆಟ್‌, ಫುಟ್‌ಬಾಲ್‌, ಬ್ಯಾಡ್ಮಿಂಟನ್‌ ಸೇರಿ ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಖ್ಯಾತನಾಮ ಆಟಗಾರರು, ಕ್ರೀಡೆಗಳನ್ನು ಕಂಡುಹಿಡಿದವರು, ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ವಿವರಗಳು, ಖೇಲ್‌ ರತ್ನ, ಅರ್ಜುನ, ದ್ರೋಣಾಚಾರ್ಯ, ಏಕಲವ್ಯ ಪ್ರಶಸ್ತಿ ಪುರಸ್ಕೃತರ ಪಟ್ಟಿ, ವಿವಿಧ ದೇಶಗಳ ರಾಷ್ಟ್ರೀಯ ಕ್ರೀಡೆಗಳು... ಹೀಗೆ ಹಲವು ವಿವರಗಳನ್ನು ರಂಗಪ್ಪ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸಮಗ್ರ ವಿವರಗಳನ್ನು ಒಂದೆಡೆ ತರುವ ಲೇಖಕರ ಶ್ರಮ ಶ್ಲಾಘನೀಯ.

ಈ ಕೃತಿಯಲ್ಲಿ ಪದಗಳ ಉಚ್ಚಾರಣೆ, ಕನ್ನಡ, ಇಂಗ್ಲಿಷ್‌ ಪದಗಳ ಅಕ್ಷರ ದೋಷಗಳ ಜತೆಗೆ ಕೆಲ ತಪ್ಪು ಮಾಹಿತಿಗಳೂ ನುಸುಳಿವೆ. ಟೆನಿಸ್‌ ದಂತಕತೆ ಬ್ಯೋನ್‌ ಬೋರ್ಗ್‌ ಅವರು ಸ್ವಿಜರ್ಲೆಂಡ್‌ನವರು ಎಂದು ಉಲ್ಲೇಖವಾಗಿದೆ. ಅವರ ರಾಷ್ಟ್ರೀಯತೆ ಸ್ವೀಡನ್‌. ಒಲಿಂಪಿಕ್ಸ್ ನಡೆದ ವರ್ಷ ವಿಭಾಗದಲ್ಲಿ 1968ರ ಒಲಿಂಪಿಕ್ಸ್‌ ಮೆಕ್ಸಿಕೊ ಸಿಟಿಯಲ್ಲಿ ನಡೆದಿದ್ದು, ದೇಶ ಅಮೆರಿಕ ಎಂದು ಪ್ರಕಟವಾಗಿದೆ. ಅದು ಮೆಕ್ಸಿಕೊ ಆಗಬೇಕಿತ್ತು. ಇವು ಒಂದೆರಡು ಉದಾಹರಣೆಗಳು. ಇಂಥ ದೋಷಗಳನ್ನು ತಪ್ಪಿಸುವಲ್ಲಿ ಲೇಖಕರು ಮುತುವರ್ಜಿ ವಹಿಸಿದ್ದರೆ ಕೃತಿಯ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು