ಪ್ರಜ್ವಲಾ ಭರತನಾಟ್ಯ ರಂಗಪ್ರವೇಶ ಇಂದು

7

ಪ್ರಜ್ವಲಾ ಭರತನಾಟ್ಯ ರಂಗಪ್ರವೇಶ ಇಂದು

Published:
Updated:
Prajavani

ಎನ್.ಕೆ.ಕೃಷ್ಣ ಕೋಟಿ ಹಂದ ಹಾಗೂ ಕೆ.ಶಾರದಾ ದಂಪತಿಯ ಪುತ್ರಿ ಪ್ರಜ್ವಲಾ ಕೆ. ಹಂದ. ನೃತ್ಯದ ಬಗ್ಗೆ ಬಾಲ್ಯದಿಂದಲೂ ಆಸಕ್ತಿ ಹೊಂದಿದ್ದ ಪ್ರಜ್ವಲಾ 6ನೇ ವಯಸ್ಸಿನಲ್ಲಿ ನೃತ್ಯ ಕಲಾವಿದೆ ರೂಪಶ್ರೀ ಅರವಿಂದ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಆರಂಭಿಸಿದವರು.

ರೂಪ ಕಲಾ ನೃತ್ಯ ಶಾಲೆ ಮಾರ್ಗದರ್ಶನದಲ್ಲಿ ಪ್ರಜ್ವಲಾ ಭರತನಾಟ್ಯ ವಿಭಾಗದ ಜೂನಿಯರ್ ಗ್ರೇಡ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಶರ್ಮಾ ಇನ್‌ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್‌ ಸಂಸ್ಥೆಯಲ್ಲೂ ತರಬೇತಿ ಪಡೆದ ಪ್ರಜ್ವಲಾ ಅದೇ ಸಂಸ್ಥೆಯ ವತಿಯಿಂದ ಸಾಕಷ್ಟು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ಗುರುಗಳಾದ ಸುಪರ್ಣಾ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ವಿಭಾಗದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ನೃತ್ಯದ ಜೊತೆ ಜೊತೆಗೆ ಕ್ರೀಡೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಅವರು ಕ್ಲಬ್ ಮಟ್ಟದ ಟೆನ್ನಿಸ್ ಪಂದ್ಯಾವಳಿಗಳು, ಈಜು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಟ್ರೋಫಿ ಗಳಿಸಿದ್ದಾರೆ.

ನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತರ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಸದ್ಯ ಪ್ರಜ್ವಲಾ ಭರತನಾಟ್ಯ ರಂಗಪ್ರವೇಶಕ್ಕೆ ಸಜ್ಜಾಗಿದ್ದು, ಅದರ ಕಾರ್ಯಕ್ರಮವು ನಗರದ ಜೆ.ಎಸ್.ಎಸ್. ಸಭಾಂಗಣದಲ್ಲಿ ಜ.11ರಂದು ನಡೆಯಲಿದೆ.

ಕಾರ್ಯಕ್ರಮ ವಿವರ: ಅತಿಥಿಗಳು–ಎಂ.ಸೂರ್ಯ ಪ್ರಸಾದ್, ಬಾಲ ವಿಶ್ವನಾಥ್. ಆಯೋಜನೆ–ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್. ಸ್ಥಳ: ಜೆ.ಎಸ್‌.ಎಸ್‌ ಸಭಾಂಗಣ, 1ನೇ ಮುಖ್ಯರಸ್ತೆ, ಜಯನಗರ 7ನೇ ಹಂತ. ಸಂಪರ್ಕ: 9591620128

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !