ಮುಂಬೈನಲ್ಲಿ ರೂಬರು ಗ್ರೂಪ್ ನಡೆಸಿದ ಪುರುಷರ ಸೌಂದರ್ಯ ಸ್ಪರ್ಧೆಯ 16ನೇ ಆವೃತ್ತಿಯಲ್ಲಿ ಬೆಂಗಳೂರಿನ 24 ವರ್ಷದ ಯುವ ಮಾಡೆಲ್ ಸೈಯದ್ ಝೇನ್ ‘ಮಿಸ್ಟರ್ ಇಂಡಿಯಾ –2019’ ವಿಜೇತರಾಗಿ ಹೊರಹೊಮ್ಮಿದ್ದಾರೆ.

ಮುಂಬೈನ ಅಲ್ಫಾ ವರ್ಲ್ಡ್ ಸಿಟಿಯ ಸೀ ಪ್ರಿನ್ಸಸ್ ಹೋಟೆಲ್ನಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ ನಾನಾ ಮೂಲೆಗಳಿಂದ ಬಂದಿದ್ದ 38 ಸ್ಪರ್ಧಿಗಳು ಭಾಗವಹಿಸಿದ್ದರು. ಆ ಪೈಕಿ ಐವರು ಸ್ಪರ್ಧಿಗಳುಮಾತ್ರ ಅಂತಿಮ ಸುತ್ತಿಗೆ ಪ್ರವೇಶಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರಿನ ಆರಡಿ ಎತ್ತರದ ಸ್ಫುರದ್ರೂಪಿ ಕನ್ನಡಿಗ ಸೈಯದ್ ಝೇನ್‘ಮಿಸ್ಟರ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡರು. ಅಷ್ಟೇ ಅಲ್ಲ ಇದರ ಜತೆಗೆ ‘ಮಿಸ್ಟರ್ ಫೋಟೊಜೆನಿಕ್’ ಎಂಬ ವಿಶೇಷ ಹೆಗ್ಗಳಿಕೆಗೂ ಪಾತ್ರರಾದರು.

ಮಾಡೆಲ್ ಆದ ಎಂಜಿನಿಯರ್!

ಬೆಂಗಳೂರಿನ ಆರ್.ಟಿ. ನಗರದ ಸೈಯದ್ ಓದಿದ್ದು ಎಂಜಿನಿಯರಿಂಗ್ ಪದವಿಯಾದರೂ ಆಯ್ಕೆ ಮಾಡಿಕೊಂಡಿದ್ದು ಮಾಡೆಲಿಂಗ್ ಕ್ಷೇತ್ರವನ್ನು.ಇದಕ್ಕೂ ಮೊದಲು ರೂಬರು ಮಿಸ್ಟರ್ ಸೌತ್ ಇಂಡಿಯಾ ಇಂಟರ್ನ್ಯಾಷನಲ್ 2019 ಸ್ಪರ್ಧೆಯಲ್ಲಿ ಸ್ವಲ್ಪದಲ್ಲಿಯೇ ವಿಜೇತರಾಗುವಅವಕಾಶ ಕಳೆದುಕೊಂಡರು. ಮೊದಲ ರನ್ನರ್ ಆಪ್ ಆಗಿ ಹೊರಹೊಮ್ಮಿದ್ದರು.

‘ಮಿಸ್ಟರ್ ಇಂಡಿಯಾ–2019’ ಸ್ಪರ್ಧೆಗೆ ವರ್ಷದಿಂದ ದೇಹ ಹುರಿಗೊಳಿಸಿ ತಯಾರಿ ನಡೆಸಿದ್ದ ಸೈಯದ್ ಬೆಂಗಳೂರಿನಲ್ಲಿಯೇ ತರಬೇತಿ ಪಡೆದಿದ್ದರು.

ಅಂತಿಮ ಸುತ್ತಿಗೂ ಮುನ್ನ ನಡೆದ ಹೆಲ್ತ್ ಆ್ಯಂಡ್ ಫಿಟ್ನೆಸ್ ರೌಂಡ್, ಸಂವಹನ ಕೌಶಲ, ವ್ಯಕ್ತಿತ್ವ ಪರೀಕ್ಷೆ, ಆತ್ಮವಿಶ್ವಾಸ ಮತ್ತು ಪ್ರಶ್ನೋತ್ತರ ಸೇರಿದಂತೆ ನಾನಾ ಬಗೆಯ ಸುತ್ತುಗಳಲ್ಲಿ ಮುಂಬೈ ಮತ್ತು ಉತ್ತರ ಭಾರತದ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆಯ ನಡುವೆಸೈಯದ್ ಉತ್ತಮ ಸಾಧನೆ ತೋರಿದರು.

ಬ್ರಿಟನ್ನಲ್ಲಿರುವ ಭಾರತ ಮೂಲದ ಜೇಯಾಂಜಲಿ ಸಂಸ್ಥೆ ಜೂನ್ನಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಡಾನ್ಸ್ ಮತ್ತು ಸಾಂಸ್ಕೃತಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೈಯದ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಅಲ್ಲಿಂದ ಹಿಂದಿರುಗಿದ ನಂತರಮಿಸ್ಟರ್ ಇಂಟರ್ನ್ಯಾಷನಲ್ ಸ್ಪರ್ಧೆಗೆ ತರಬೇತಿ ಪಡೆಯಲು ಮುಂಬೈಗೆ ವಾಸ್ತವ್ಯ ಬದಲಿಸುವ ಯೋಜನೆ ಇದೆ ಎಂದು ಸೈಯದ್ ಹೇಳುತ್ತಾರೆ.

ಈಗಾಗಲೇ ಅನೇಕ ಜಾಹೀರಾತುಗಳಲ್ಲಿ ನಟಿಸಿರುವ ಕನ್ನಡಿಗ ಮುಂಬೈನಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಆಹ್ವಾನ ಬಂದರೆ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ನಟನಾಗಿ ಮಿಂಚಬೇಕು ಎಂಬ ಮಹದಾಸೆ ಹೊತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.