ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 21ರಿಂದ ಸಂಗೀತ–ನೃತ್ಯ–ತಾಳವಾದ್ಯ ಪರೀಕ್ಷೆ

ಕೋವಿಡ್‌ನಿಂದಾಗಿ ಮುಂದೂಡಲಾಗಿದ್ದ ಜೂನಿಯರ್‌–ಸೀನಿಯರ್‌–ವಿದ್ವತ್‌ ಪರೀಕ್ಷೆ
Last Updated 6 ನವೆಂಬರ್ 2020, 19:08 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಈಗ ವಾರ್ಷಿಕ ಸಂಗೀತ–ನೃತ್ಯ–ತಾಳವಾದ್ಯ ಪರೀಕ್ಷೆ
ಗಳನ್ನು ನಡೆಸಲು ಸಿದ್ಧತೆ ಆರಂಭಿಸಿದೆ.

ನ. 21ರಿಂದ 10 ದಿನಗಳ ಕಾಲ ರಾಜ್ಯದಾದ್ಯಂತ ಶಾಸ್ತ್ರೀಯ ಸಂಗೀತ (ಕರ್ನಾಟಕಿ, ಹಿಂದೂಸ್ತಾನಿ), ಭರತ ನಾಟ್ಯ, ಕುಚುಪುಡಿ ಮತ್ತು ತಾಳವಾದ್ಯ (ಕರ್ನಾಟಕಿ ಹಾಗೂ ಹಿಂದೂಸ್ತಾನಿ) ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾ ಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ (ಇತರ ಪರೀಕ್ಷೆಗಳು) ಎಂ.ಎಸ್‌. ಪ್ರಸನ್ನಕುಮಾರ್‌ ತಿಳಿಸಿದ್ದಾರೆ.

‘ರಾಜ್ಯದ 62 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಪ್ರವೇಶ ಪತ್ರಿಕೆ ಗಳನ್ನು ನೀಡುವ ಕಾರ್ಯ ಇನ್ನೂ ಪ್ರಗತಿ ಯಲ್ಲಿದೆ. 14,300 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ. 21 ಹಾಗೂ 22ರಂದು ಬರಹ (ಥಿಯರಿ) ಪರೀಕ್ಷೆ ನಡೆಯಲಿದ್ದು, ಉಳಿದ 8 ದಿನಗಳು ಪ್ರಾಕ್ಟಿಕಲ್‌ ಪರೀಕ್ಷೆಗಳಿವೆ’ ಎಂದು ಅವರು ತಿಳಿಸಿದರು.

ಮೇ–ಜೂನ್‌ನಲ್ಲಿ ನಡೆಯಬೇಕಿದ್ದ ಈ ಪರೀಕ್ಷೆಗಳನ್ನು ಕೋವಿಡ್ ಕಾರಣದಿಂದ ಮುಂದಕ್ಕೆ
ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT