ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು.ಎಸ್. ಏರ್ ಫೋರ್ಸ್ ಬ್ಯಾಂಡ್‌ಗೆ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ಸಹಯೋಗ

Last Updated 18 ಮಾರ್ಚ್ 2021, 7:50 IST
ಅಕ್ಷರ ಗಾತ್ರ

ಚೆನ್ನೈ: ಹವಾಯಿ ಮೂಲದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ಆಫ್ ದಿ ಪೆಸಿಫಿಕ್ ಭಾರತದ ಅತ್ಯಂತ ಪ್ರಾಚೀನ ತಾಳವಾದ್ಯಗಳಲ್ಲಿ ಒಂದಾದ ಘಟಂ ನುಡಿಸುವ ಖ್ಯಾತ ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ ಅವರ ಸಹಯೋಗದಲ್ಲಿ ಮಾರ್ಚ್ 12 ರಂದು ಅವರ ಸಂಗೀತ ವಿಡಿಯೊಬಿಡುಗಡೆ ಮಾಡಿತು.

ಈ ಸಹಯೋಗವು ಬ್ಯಾಂಡ್‌ನ ಏರೋ ಇಂಡಿಯಾ 2021 ಅನ್ನು ಬೆಂಬಲಿಸುವ ಬದ್ಧತೆಯ ದ್ಯೋತಕವಾಗಿದೆ. ಅಮೆರಿಕ-ಭಾರತ ಪ್ರಮುಖ ರಕ್ಷಣಾ ಸಹಭಾಗಿತ್ವ ಮತ್ತು ಎರಡೂ ದೇಶಗಳ ಜನರ ನಡುವಿನ ಸಂಬಂಧವನ್ನು ವರ್ಧಿಸುವ ಉದ್ದೇಶ ಹೊಂದಿದೆ.

ಯು.ಎಸ್. ಏರ್ ಫೋರ್ಸ್ ಬ್ಯಾಂಡ್ ಆಫ್ ಪೆಸಿಫಿಕ್ ಅನ್ನು ಪ್ರತಿನಿಧಿಸುವ ಸ್ಯಾಕ್ಸೋಫೋನ್ ವಾದಕ ಸ್ಟಾಫ್ ಸಾರ್ಜೆಂಟ್ ಲೂಯಿ ರೋಸಾ ಮೂಲ ಗೀತೆ “ಓಪನ್ ಕ್ಲಸ್ಟರ್ಸ್”ಅನ್ನು ಸಂಯೋಜಿಸಿದ್ದಾರೆ. ಇದು ಭಾರತೀಯ ಮತ್ತು ಪೋರ್ಟೊ ರಿಕನ್ ಸಂಸ್ಕೃತಿ ಹಾಗೂ ಲಯ ಹಿನ್ನೆಲೆಯ ಇಬ್ಬರು ಸಂಗೀತ ದಿಗ್ಗಜರ ಸಮ್ಮಿಲನವಾಗಿದೆ. ಈ ಸಂಯೋಜನೆಯಲ್ಲಿ ಗಿಟಾರ್‌ನಲ್ಲಿ ಸೀನಿಯರ್ ಏರ್‌ಮ್ಯಾನ್ ಗೈ ಜೇಮ್ಸ್, ಬಾಸ್‌ನಲ್ಲಿ ಸ್ಟಾಫ್ ಸಾರ್ಜೆಂಟ್ ಆಂಡ್ರ್ಯೂ ಡೆಟ್ರಾ ಮತ್ತು ತಾಳವಾದ್ಯದಲ್ಲಿ ಟೆಕ್ನಿಕಲ್ ಸಾರ್ಜೆಂಟ್ ವಿಲ್ಫ್ರೆಡೋ ಕ್ರೂಜ್ ಕೂಡ ತಮ್ಮ ಸಂಗೀತ ಧಾರೆ ಎರೆದಿದ್ದಾರೆ.

ಪೆಸಿಫಿಕ್ ಪ್ರಚಾರ ವಿಭಾಗದ ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ ಬ್ಯಾಂಡ್ ನ ಮುಖ್ಯ ತಾಂತ್ರಿಕ ಸಾರ್ಜೆಂಟ್ ವಿಲ್ಫ್ರೆಡೋ ಕ್ರೂಜ್: “ಈ ಸಂಗೀತ ಸೆಲೆಯನ್ನು ಸೃಷ್ಟಿ ಮಾಡಲು ನಮಗೆ ಸಾಧ್ಯವಾದುದಕ್ಕೆ ನಮಗೆ ಹೆಮ್ಮೆ ಇದೆ. ವಿಶ್ವಾದ್ಯಂತ ನಮ್ಮ ಎಲ್ಲ ವೀಕ್ಷಕರಿಗೆ ಈ ಸಂಗೀತಸುಧೆಯನ್ನು ಉಣಬಡಿಸಲು ಸಂತಸವಾಗಿದೆ. ಸಾಂಕ್ರಾಮಿಕ ರೋಗದ ಕಾರಣವಾಗಿ ಏರೋ ಇಂಡಿಯಾದ ಸಮಯದಲ್ಲಿ ಲೈವ್ ಪ್ರದರ್ಶನ ನೀಡಲು ಭಾರತದಲ್ಲಿರಲು ನಮಗೆ ಅವಕಾಶ ಸಿಗಲಿಲ್ಲ, ಆದರೂ ಸಂಗೀತವು ದೂರ ಅಥವಾ ಗಡಿಗಳನ್ನು ಲೆಕ್ಕಿಸದೆ ಎಲ್ಲರನ್ನೂ ಒಂದುಗೂಡಿಸುತ್ತದೆ. ಇಂಡೋ-ಪೆಸಿಫಿಕ್ ಪ್ರದೇಶದ ಮೂಲಕ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ಬಲಪಡಿಸಲು ನಾವು ಸಂಗೀತದ ಶಕ್ತಿಯನ್ನು ಬಳಸುತ್ತಿದ್ದೇವೆ. ಈ ವರ್ಚುವಲ್ ಪ್ರದರ್ಶನವನ್ನು ಸೃಷ್ಟಿಸುವಾಗ ನಮಗೆ ಆದಷ್ಟೇ ಸಂತೋಷ ಇದನ್ನು ಕೇಳುವ ನಿಮಗೂ ಆಗುತ್ತದೆ ಎಂದು ನಂಬಿದ್ದೇವೆ! ” ಎಂದು ಹೇಳಿದರು.

ಅಂತರ-ಸಹಯೋಗದ ಕುರಿತು ಮಾತನಾಡುತ್ತಾ, ಭಾರತೀಯ ತಾಳವಾದ್ಯ ಕಲಾವಿದ ಗಿರಿಧರ್ ಉಡುಪ, “ಅಮೆರಿಕದ ವಾಯುಪಡೆಯ ಬ್ಯಾಂಡ್‌ನ ಉತ್ಕೃಷ್ಟ ಸಂಗೀತಗಾರರೊಂದಿಗೆ ಹೊಸದಾಗಿ ಸಂಯೋಜಿಸಲಾದ ಟ್ರ್ಯಾಕ್ ಬಗ್ಗೆ ನನಗೆ ಬಹಳ ಸಂತೋಷ ಇದೆ. ಈ ಸಂಯೋಜನೆಯು ವಿಶ್ವ ಸಂಗೀತದ ಚೌಕಟ್ಟಿಗೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ” ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT