ಗುರುವಾರ , ಅಕ್ಟೋಬರ್ 29, 2020
20 °C

ಕವಿತೆ: ಅಮೃತವ ಹರಿಯಬಿಡು

ಹೊರೆಯಾಲ ದೊರೆಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಾವುದೂ ಸ್ಥಿರವಲ್ಲ

ಕ್ಷಣಿಕ

ಅಣಕ

ಇತಿಹಾಸವೆಂಬುವುದು

ಬರೀ

ನೆನಪುಗಳ ಕಣಕ

ಸತ್ತ ಘಟನೆಯ ಹೊತ್ತು

ಮರೆಯುತ್ತಿದ್ದಾರೆ ಮಂದಿ

ನಿಂತ ನೆಲದಲ್ಲಿ

ಆರಿಸುತ್ತಿದ್ದಾರೆ

ಅಳಿದುಳಿದ ಚಿಂದಿ

ಇರುವಾಗ

ವಂಚನೆಯ ಲೀಲೆ

ಅದಕ್ಕೆ

ಚಿತ್ತಾರದ

ಸತ್ಯದ ಹೂಮಾಲೆ

ಬಿಡಿಸುತ್ತಿದ್ದಾರೆ

ಸಣ್ಣ ನಗುವಿನ ಹಿಂದೆ

ಮಾಫಿಯಾ ಗ್ಯಾಂಗ್‍ನ

ಕ್ರೌರ್ಯ ನಗೆ

ಹೆಡೆಗಟ್ಟಿದೆ

ಮುಟ್ಟಿದಲ್ಲೆಲ್ಲ ಜೀವಕೊಲ್ಲುವ

ಕಾರ್ಕೋಟದ

ದೈತ್ಯ ವಿಷ

ಹರಿದಾಡುತ್ತಿದೆ

ಆದರೂ

ವಿಷ ಸರ್ಪದಮೇಲೆ

ಹೂಮಳೆಗರೆಯುತ್ತಿದ್ದಾರೆ

ಭಕ್ತಿಯಿಂದಲ್ಲ

ಭಾವದಿಂದಲ್ಲ

ಎಲ್ಲಿಯಾದರೂ

ಹರಿಯುವ ವಿಷ

ತಮ್ಮ ಒಡಲು

ಸೇರಿಬಿಟ್ಟೀತೆಂಬ ಹೆದರಿಕೆಯಿಂದ

ಹೆದರಿಕೆಯಿಲ್ಲದವರು

ಹಾವು ಹಿಡಿಯುತ್ತಾರೆ

ದೂರ ಬಿಡುತ್ತಾರೆ

ಆಗದಿದ್ದರೆ ಕೊನೆಗೆ

ಹಾವು ಕೊಂದು

ವಿಷ ಹರಿಯುವ ನಾಡಿಗಳಲ್ಲಿ

ಅಮೃತವ ಹರಿಯಬಿಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.