‘ಏನ್ ಸಾಮಿ ಯಾವಾಗ ಬಂದಿ? ಏನೇ ನಿನ್ ಮೊಮ್ಮಗ ಬಂದಾನೋಡೆ’, ಎಂದು ನಾನು ಬಂದಿರುವುದನ್ನು ನನ್ನ ಅಜ್ಜಿಗೆ ತಿಳಿಸಿ ಹೇಳುತ್ತಾ, ಬಹಳ ದಿನಗಳ ನಂತರ ಬಂದ ನನ್ಬಗ್ಗೆ ಕಾಳಜಿ ತೋರಿಸುತ್ತಾ ನಮ್ಮ ತಾತ ಮಂಚ ಸರಿ ಮಾಡುತ್ತಿರುವುದನ್ನು ಕಂಡು, ನಾನೇ ಮುಂದೆ ಹೋಗಿ ಬೇಡ ಬಿಡ್ತಾತ, ಕುಂತ್ಕ. ನಿನಗೆ ಮೊದಲೇ ಸರಿಯಿಲ್ಲ ಎಂದು ಹಾಕುತ್ತಿರುವ ಮಂಚವನ್ನು ಸರಿ ಮಾಡುತ್ತಾ ಕುಂತೆ.

ಕಥೆ ಕೇಳಿ: ಮನೆಯೊಳಗಿನ ಬೆಕ್ಕು

ನಮ್ಮಜ್ಜಿ ಬಂದವಳೇ ‘ಏನಪ್ಪಾ ಇಷ್ಟು ದಿವಸ ಆಯ್ತಾ?ಸತ್ತಾರು ಬದುಕ್ಯಾರು ಅಂತಾನೂ ನೋಡಂಗಿಲ್ಲ ಬಿಡು, ಊರಗಿಲ್ದ ನೌಕರಿ ನೀನೇ ಮಾಡ್ತಿ, ನಿಮ್ಮಪ್ಪ ಅಮ್ಮ ನೋಡಿದ್ರೆ ಮದುವೆ ಮದುವೆ ಅಂತ್ಹೇಳಿ ಐಲ್ ಬಂದೊರ್ ದಿನಸ್ ಮಾಡ್ತಾರ್, ನೀನಾ ಊರಿಗೆ ಹೋದರೆ ತಿಂಗಳಾದರೂ ಸರಿ, ಎರಡು ತಿಂಗಳಾದರೂ ಸರಿ ಆ ಕಡೆ. ಏನ್ ಮಾಡ್ಬೇಕ್ ಇಲಿ ನಾವು?’.

‘ಮದುವೆ ಮಾಡಿಕೊಂಬಿಡು ಸಾಮಿ, ಈ ವರ್ಷ ನಾನ್ ಸತ್ತೊಗ್ತಿನಿ ನೋಡು’, ಎಂದು ನಮ್ ತಾತ ಮಧ್ಯದಲ್ಲಿ ಬಾಯಿ ಹಾಕಿದಾಗ ಮನೆಯಲ್ಲಿ ನಡೆದ ಗೊಂದಲ ವಿಚಾರಗಳು ಹೇಳಬೇಕೋ ಬೇಡ್ವೋ ಎಂದು ಮನಸ್ಸಿನಲ್ಲಿ ವಿಚಾರಿಸುತ್ತಾ, ಹ್ಞೂ, ಇದುವರೆಗೆ ಅದೇ ನಡೆದಿತ್ತು ಮನ್ಯಾಗ, ಎಂದು ನನಗೆ ಗೊತ್ತಿಲ್ಲದಂತೆ ವಿಚಾರ ಹೊರಬಂತು.

ಏನಾಯ್ತು?

ಏನ್ ಹೇಳ್ಲಿ ತತ, ಅದೇ ವರ್ಷೆ ಮಾಡ್ಕ್ಯಾ ಆಕೆನೆ ಮಾಡ್ಕ್ಯಾ ಇಲ್ಲಾಂದ್ರೆ ನಮ್ಮನೆಗೆ ಬರಬೇಡ ಅಂದ್ರು.

ಮನಗೆ ಬರಬೇಡಂದ್ರ? ಅಂತಾ ಆಶ್ಚರ್ಯ ಚಕಿತನಾಗಿ ಕೇಳಿದಾಗ, ನಾನು ಹ್ಞೂ ಬರಬೇಡ ಅಂದ್ರು ಆಕೆ ಸೊಸೆಯಾದ್ರೆ ಬರಬೇಕಂತೆ ಇಲ್ಲಾಂದ್ರೆ ಇಲ್ಲಂತೆ.

ಯಾರ ಅಂದ್ರು?

ಅಪ್ಪ ಅಂದ.

ಮಾಮೂಲಿ ಬಿಡಾss, ಅವರದೇನು ಗೊತ್ತಿಲ್ಲೇನು ಈ ಮುದೇನ್ಗೆ, ಈಗ್ಲಾದರೂ ಬುದ್ಧಿ ಬರುವಲ್ದು, ಅವ್ರು ನಿನ್ನ ಮುಂದೆ ಎಷ್ಟ್ಸಾರಿ ಹೇಳಿಲ್ಲ, ಆಕೆ ಬಿಟ್ಟು ಬೇರೆ ಯಾರು ನಮಗೆ ಬ್ಯಾಡ ಅಂತ?

ಏ! ಸುಮ್ನಿರೇ ನಿನಗೇನ್ ಗೊತ್ತಾಗ್ವಾಲ್ದ? ಕೈಗೆ ಬಂದ್ ಮಗನ್ಗಿಂತ ಆಕೆ ಎಚ್ಚಾದ್ಳ ಇವರಿಗೆ?

ನಮ್ಮ ಮಾತುಕತೆಗೆ ಬ್ರೇಕ್ ಎಂಬಂತೆ ನಮ್ಮಕ್ಕ ಟೀ ತಂದು ಕೈಗಿಟ್ಟಾಗ, ಈಗಾಗಲೇ ಮೂರು ಸಾರಿ ಟೀ ಕುಡಿದಿದ್ದ ನನಗೆ, ನಮ್ಮಕ್ಕನ ಟೀ ಬೇಡ ಎನ್ನಲಾಗದೆ ಕೈಗೆತ್ತಿಕೊಂಡು ಕುಡಿಯತೊಡಗಿದೆ.

ಕರೆಕ್ಟ್ ಆಗಿ ಹೇಳ್ ಸಾಮಿ, ನಿನ್ನ ಮನಸ್ಸಿನ್ಯಾಗ ಏನ್ ಐತಿ ಅಂತ.

ನನ್ಗ ಮಾತ್ರ ಎಳ್ಳು ಕಾಳಷ್ಟು ಇಷ್ಟ ಇಲ್ಲ ನೋಡ್ ತತ ಎಂಬ ಉತ್ತರ ನನಗೆ ಗೊತ್ತಿಲ್ಲದಂತೆ ಟೀ ಕುಡಿಯುವುದನ್ನು ನಿಲ್ಲಿಸಿ ಹೇಳಿದಾಗ ಒಂದು ಕ್ಷಣ ದಂಗಾದ ಮುಖಭಾವದೊಂದಿಗೆ ನಮ್ ತಾತ ಮತ್ಯಾಂಗ? ಅಂದ.

ಹ್ಯಾಂಗ್ಂದ್ರೆ ಏನ್ ಹೇಳಿ? ಹೇಳು ನೀನೆ.

ಅಲ್ಲಾ, ಸಾಮಿ ನೀನ್ ಕೆಲಸ ಮಾಡಲ್ಲಿ ಯಾರ್ನರ ನೋಡ್ಕಂಡಿ ಏನು?

ಯಾರ್ನ ನೋಡ್ಕೊತಿನಪ ತಾತ? ಹೋಗ್ಲಿ ಬಿಡು. ಅದು ಬಿಟ್ಟು ಬ್ಯಾರೆ ಮಾತಾಡು ಎಂದು ನಾನು ನನ್ನ ಪಂಜೆಗೆ ಹತ್ತಿದ ಬೆಂಕಿಯನ್ನು ನಂದಿಸಲು ಪ್ರಯತ್ನ ಮಾಡಿ ಯಶಸ್ಸು ಸಾಧಿಸಿದೆ.

ಸಾಮಿ,

ಹೇಳ್ ತಾತ

ಆವಾಗ ನನ್ಗೆ ಇನ್ನು ಹದ್ನೆಂಟು ಇದ್ವೇನೊ, ಏನಾ ಕೆಳಕತ್ತಿಯೇನು?

ಹ್ಞೂ, ತತ ಏಳು, ನನ್ನ ಉತ್ತರಕ್ಕೆ

ನಮ್ಮ ತಾತ ಮುಂದುವರಿಸಿದ.

ಆವಾಗ ಇನ್ನೂ ಬಜಾರ್ದಾಗ ಮನೆಯಿತ್ತು. ಆರು ಎತ್ತುಗಳು ನನ್ನ ಪಾಲಿನ ಗಳೆವ್ಗೆ ಎರಡೆತ್ತು, ಅವುಟ್ರನ ಮೇಸೊದು ಕೂಡಾ ನಂದೇ ಜವಬ್ದಾರಿ, ಆರ್ಸೊತ್ತಿನ ತನ ಗಳೆವ್ ಹೊಡೆದು ಆಮೇಲೆ ಆಕೆ ಬಂದು ಪದಾಡಿ ಹೊತಿದ್ಳು ನಮ್ ವಲ್ದಾಗ.

ಪದ? ನನ್ನ ಮೂರ್ಖ ಪ್ರಶ್ನೆಗೆ

ಹೂನಾ, ಪದ, ಬಾರಮ್ಮ ಮಲ್ಗೋನು ಅಂತ ಇಲ್ಲದ ಪದವನ್ನು ಸೃಷ್ಟಿಸಿ ನನಗೆ ಅರ್ಥ ಮಾಡಿಸಿದ.

ಓಹೋ...! ಅರ್ಥ ಆಯಿತೇಳು,

ಒಂದಿನ ಇಲ್ಲೇ ಮನ್ಯಾಗ ಅವ್ರ ಮನ್ಯಾಗ ರಾತ್ರಿ ಹೋಗ್ ಬಿಟ್ಟೀನಿ,

ಯಾರೋ ಬಂದ್ ಬಿಡಾಕ ...!

ಅವರಪ್ಪಾ ಅನ್ನಿಸ್ತು, ಏನಾಯ್ತಮ್ಮಾ ಅಂತ ಕೇಳಿಬಿಟ್ರೊ, ಸಿಕ್ಕ ಬಿಟ್ವೆ ಅನಕಂಡೆ ಸಾಮಿ, ಆವಾಗ ಆಕೆ ಮ್ಯಾಲಮಾಗೀರೊ ತಟ್ಟಿ ಕಿತ್ತಿ ಎಗರಿಸಿ ಕಳಿಸಿದ್ಲು.

ಹೆಗ್ರೇನ್ ಬಂದ್ಬಿಟ್ಟೆ ಸಾಮಿ, ಆಮೇಲೆ ಗುಡಿಗೆ ಬಂದ್ಲು, ಅಳಕಾಂತ, ನಾನು ಏನೇ ಅಂದೆ. ಅದಕ್ಕ ಅವಳು:

‘ನನಿಗೆ ಸಾಕಾಗೈತಿ ನಡೆ ಯಕಡೆನ ಹೋಗೊಣು’ ಅಂದ್ಲು. ಅವಾಗ ಗರ್ಜಪ್ಪ ಗುಡಿ ದಿನ ಪೂಜಿ ಆಗ್ತಿತ್ತು. ರಾತ್ರಿ ಎಂಟು ಗಂಟೆ ಆಗಿತ್ತೇನೊ, ನಾನು ‘ಸರಿ ನಾಳೆ ಹೋಗಿಬಿಡೊಣು. ನಿಮ್ಮವಲ್ಕ ನಾಳೆ ಬರ್ತ್ತೀನಿ ಅಂತೇಳಿ ಬಂದೆ’.

ಮರ್ದಿನ ಬೆಳಗಾಯ್ತು ಮಳೆಗಾಲೆಲ್ಲ ಮುಗುದಿತ್ತು, ಬೇಸ್ ಜೋಳ ನನ್ನ ಎತ್ರ ಆಯ್ತೆ ಸಾಮಿ, ನಮ್ಮಮ್ಮ ಉಂಚ್ಚಟ್ನೆ ನವಣ್ ನ್ನ ಬುತ್ತಿ ಕಟ್ಟಿದ್ಳು, ಉಂಡು ಎತ್ತುಗಳಿಗೆ ಜೋಳ ದಂಟು ಕಿತ್ತಾಕಿ, ಅಲ್ಲೇ ಕುಂಟಿಗೊಂದು, ಬೆನ್ಗಿಡಕೊಂದು ಕಟ್ಟಿ ನಮಸ್ಕಾರ ಮಾಡಿ ಎದ್ದು ಹೋದೆ.

ಲೇ ಸಾಮಿ ಇಲ್ಲಿಕೇಳು, ಅವರ್ಲ್ದಾಗ ಒಂದು ಗುಡಿಸಲಿತ್ತು. ನನ್ನ ಮೇಲ್ಕೂಗಿ ಗುಡಿಸಿಲಿನಲ್ಲಿ ಹಣಿಕೆ ಹಾಕಿದೆ, ಆ ಸೂಳೆ ಒಳ್ಳಾಗ ಚಟ್ನಿ ಕುಟ್ಟಿಸ್ ಕತ್ತ್ಯಾಳ,

ಥೂ ನಿನ್ನ ಸೂಳೆ ಅಂದಿದ್ದು, ಬಿಟ್ಟು ಬಂದಿದ್ದು, ಅವಾಗ ಇಂದೆ ಬಂದು ‘ಅಯ್ಯಾ ಅಯ್ಯಾ, ಅವನೇ ಬ್ಯಾಡ್ ಬ್ಯಾಡಂದ್ರೂ ಹೊತ್ಕೊಂಡೊಗಿ ಮಾಡಿದ, ಬಾ ಅಯ ಬಾ ಅಯ ಹೋಗೋಣ’ ಅಂದ್ಲು.

ಏ ಮೇಲ್ಮನೆ ಸೂಳೆ ನಾನು ದಿನಾಲಿ ನಿನ್ ಮಿಂಡ್ರನ ಕಾಯಕ ಬರಬೇಕೆನ್? ನನ್ನ ಹೆಂಡ್ತಿನ ಮಾಡ್ತರೇನ್? ನೋಡ್ತಾರೇನ್? ಅಂತಾ ಹಾ..

ಹೋಗಾ ಕತ್ತೆ ಹೋಗ್ ಅಂತೇಳಿ ಅವಳ್ ಕೈಯಾಗ ನನ್ ವಲ್ಲಿನ ಕಸ್ಕಂಡ್ ಜಾಡಿಸ್ಕಾಂತ ಬಂದೆ ಸಾಮಿ.

ನನ್ನ ಮನಸ್ಸು ಕೂಡಲೇ ಹಳೆ ನೆನಪುಗಳ ಕಡೆ ವಾಲುತ್ತಿರುವುದನ್ನು ನಿಯಂತ್ರಿಸಲು ಹಾಗೂ ಈ ರಸವತ್ತತೆ ಬಿಡುವುದನ್ನು ಮನಸ್ಸಿಲ್ಲದೆ ಯಾರ್ ತಾತ ಆಕಿ? ಮೇಲ್ಮನೆ ರೊ? ದೊಡ್ಮನೆ ಪಕ್ಕದ ಮನೆಯವಳೊ? ಅಂದಾಗ...

ಅಲ್ಲಲೊ, ನಿಮ್ಮೊಣ್ಯಾಗ ಪ್ಯಾಂಟಿಗೆ ಇಳಿದ್ರೆ ಮನೆ ಇಲ್ಲೇನು ಅವರ್ ಮನೆಗಿದ್ಳು, ಎಂದು ನಮ್ಮಜ್ಜಿ ಉತ್ತರ ಕೊಟ್ಟಾಗ ನಾನು ಪ್ರೀತಿಗೆ ಕೊಟ್ಟುಕೊಂಡ ವ್ಯಾಖ್ಯಾನ ಅಲ್ಲಿ ಸಾರ್ಥಕತೆ ಪಡೆದದ್ದು ನನ್ನನ್ನು ಅಚ್ಚರಿಗೊಳಿಸಿತು.

ಯಾssರ್ಯಾssರ ಬಂದಾssರ, ಎಂದು ನಮ್ಮ ತಾತ ಮತ್ತೆ ರಾಗ ಧ್ವನಿಯಲ್ಲಿ ಮತ್ತೆ ಗೊಣಗುತ್ತಿದ್ದಾಗ ನೀನ್ ಸಣ್ ಲೆಕ್ಕದಾತಲ್ಲ ತತ ಎಂದೆ.

ಹ್ಞೂ.. ಏನ್ ಮಾಡಿಲೇ, ನಾನಂದ್ರೆ ಇವಾಗ ನೋಡು ಅವ್ ಮೂರು, ಅಲ್ನಾಲ್ಕು ಇಲ್ಲಿ ಒಂದೆರಡು ಅವೂರಗೊಂದು ಓಟ್ ಹತ್ತು ನಿಮ್ಮಜ್ಜಿ ಆತ್ ನ್ಯಾಕೆ ನೋಡು.

ಇವೆಲ್ಲ ಮದುವೆ ಮುಂಚೆ ಏನ್ ತತ ಎಂದು ಕುತೂಹಲ ತಾಳಲಾರದೆ ಪ್ರಶ್ನಿಸಿದೆ.

ಮದುವೆ ಮುಂಚೆ ಆಮೇಲೆ ಎಲ್ಲಾ. ಇನ್ನೊಂದು ಐತೆಪ್ಪೊ,

ರೊಡ್ಡಿಗೆ, ಇನ್ನೊಂದು ರೊಡ್ಡಿಗೆ ನೋಡು, ಹನ್ನೊಂದು ಒಸುಕಲ್ತು ಹನ್ನೊಂದು ನೋಡು ಸಾಮಿ, ನಿಮ್ಮವ್ವ ಹನ್ನೊಂದ್ನ್ಯಾಕೆ ಎಂದು ನಮ್ಮ ತಾತ ತನ್ ಲೆಕ್ಕ ಒಪ್ಸುವಾಗ ನಾನು ನಮ್ಮಜ್ಜಿ ಮುಖ ನೋಡಿದ್ರೆ ನಮ್ಮಜ್ಜಿ ಮಾತ್ರ ಮುಖದ ಮೇಲೆ ಕೂತ ನೊಣ ಒಡಿಯುತ್ತ ಎಲೆ ನಮುಲುತಿತ್ತು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.