ಮಂಗಳವಾರ, ಜೂನ್ 22, 2021
29 °C

ಅಂಗನವಾಡಿ ಕೇಂದ್ರದಿಂದ ಮಗು ಅಪಹರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದುಷ್ಕರ್ಮಿಯೊಬ್ಬ ಅಂಗ­ನ­ವಾಡಿ ಕೇಂದ್ರ­ದ ಬಳಿ ಆಟವಾಡುತ್ತಿದ್ದ ಎರಡು ವರ್ಷದ ಮಗು­ವನ್ನು ಅಪಹರಿ­ಸಿ­ರುವ ಘಟನೆ ಬೈಯಪ್ಪನಹಳ್ಳಿ ಸಮೀ­ಪದ ನಾಗವಾರ ಮುಖ್ಯ­ರಸ್ತೆ­ಯಲ್ಲಿ ಬುಧವಾರ ನಡೆದಿದೆ.ಮಗುವಿನ ಪೋಷಕರು ಆಂಧ್ರ­ಪ್ರದೇಶ ಮೂಲದವರು. ನಾಗವಾರ ಮುಖ್ಯರಸ್ತೆಯಲ್ಲಿ ವಾಸವಾಗಿದ್ದ ಅವರು, ಕೂಲಿ ಕೆಲಸ ಮಾಡುತ್ತಿದ್ದರು.ಪ್ರತಿದಿನ ಕೆಲಸಕ್ಕೆ ಹೋಗುವಾಗ ಮಗು­ವನ್ನು ಸಮೀಪದ ಅಂಗನವಾಡಿಗೆ ಬಿಟ್ಟು ಹೋಗುತ್ತಿದ್ದರು. ಅಂತೆಯೇ ಬುಧ­­­ವಾರ ಸಹ ಮಗುವನ್ನು ಅಂಗನ­ವಾ­ಡಿಗೆ ಬಿಟ್ಟು ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮಧ್ಯಾಹ್ನ ಎರಡು ಗಂಟೆ ಸುಮಾ­ರಿಗೆ ಮಗು ಅಂಗನವಾಡಿ ಬಳಿ ಆಟವಾ­ಡು­­ತ್ತಿತ್ತು. ಈ ವೇಳೆ ಅಲ್ಲಿಗೆ ಬಂದಿರುವ ಅಪರಿ­ಚಿತ ವ್ಯಕ್ತಿಯೊಬ್ಬ ಚಾಕೊಲೇಟ್‌ ಕೊಡಿಸುವುದಾಗಿ ಅಕ್ಷಯ್‌ನನ್ನು ಕರೆ­ದು­ಕೊಂಡು ಹೋಗಿದ್ದಾನೆ.ಆ ವ್ಯಕ್ತಿ ತುಂಬಾ ಹೊತ್ತಾದರೂ ಬಾರದ ಹಿನ್ನೆಲೆ­­ಯಲ್ಲಿ ಗಾಬರಿಗೊಂಡ ಕೇಂದ್ರದ ಸಹಾ­ಯಕಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಘಟನೆ ಸಂಬಂಧ ಅಪಹರಣ ಪ್ರಕ­ರಣ ದಾಖಲಿಸಿ­ಕೊಂಡು ಸಹಾಯ­ಕಿಯ ವಿಚಾ­ರಣೆ ನಡೆಸಲಾಗುತ್ತಿದೆ ಎಂದು ಬೈಯ­ಪ್ಪನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.