ಶುಕ್ರವಾರ, ಜೂನ್ 25, 2021
26 °C

ಅಂತರ್ಜಲ ಕುಸಿತ: ಕುಡಿಯುವ ನೀರಿಗೆ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೀಸಾವೆ:ಬೇಸಿಗೆ ಪ್ರಾರಂಭವಾಗಿದ್ದು, ಪಟ್ಟಣದ ಕೊಳವೆಬಾವಿಗಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ.500 ಮನೆಗಳಿರುವ ಕುವೆಂಪುನಗರ ಬಡಾವಣೆಗೆ 5 ನೀರು ಒದಗಿಸುವ ಕೊಳವೆ ಬಾವಿಗಳಿವೆ. 3ರಲ್ಲಿ ನೀರಿಲ್ಲ, 2ರಲ್ಲಿ ಸಿಗುವ ನೀರನ್ನು ಎಲ್ಲ ಮನೆಗಳಿಗೆ ಒದಗಿಸಲು ಪಂಚಾಯಿತಿ ಹರಸಾಹಸ ಪಡುತ್ತಿದೆ. ಬಡಾವಣೆಯ ನೀರಿನ ಟ್ಯಾಂಕ್‌ಗಳಿಗೆ ಸಂಪರ್ಕ ಕಡಿತಗೊಳಿಸಿ, ಪಕ್ಕದಲ್ಲಿ ಒಂದು ನಲ್ಲಿಯ ಸೌಲಭ್ಯ ಒದಗಿಸಲಾಗಿದೆ.

 

ಪ್ರತಿ ನಲ್ಲಿಯ ಮುಂದೆ ಹತ್ತಾರು ಮಹಿಳೆಯರು ಮತ್ತು ಮಕ್ಕಳು ಕೊಡಗಳನ್ನು ಹಿಡಿದು ನೀರು ತುಂಬಿಸಲು ಪೈಪೋಟಿ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಅಕ್ಕ-ಪಕ್ಕದ ಮನೆಯವರ ಜಗಳ ಸಹಜವಾಗಿ ಬಿಟ್ಟಿದೆ.

ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ರಾತ್ರಿ ವೇಳೆ ನೀರು ಹಿಡಿಯಬೇಕಿದೆ. ಹಳೆ ಬಡಾವಣೆಗಿಂತ ಹೊಸ ಬಡವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚು.ಈ ಹಿಂದೆ ಮನೆಗಳಿಗೆ, ಹೊಟೇಲ್ ಮತ್ತು ಉದ್ಯಮಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿರುವದು ಸಮಸ್ಯೆ ತೀವ್ರತೆಗೆ ಕಾರಣ ಎಂದು ಬಡವಣೆಯ ಜನರು ದೂರುತ್ತಾರೆ. `ಈ ಭಾಗದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. 2 ಕೊಳವೆ ಬಾವಿ ಕೊರೆಸುವಂತೆ ಪಂಚಾಯಿತಿ ವತಿಯಿಂದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮನೆಗಳಿಗೆ ನೀರಿನ ಸಂಪರ್ಕ ಪಡೆದಿರುವವರು ನೀರ ಪೋಲು ಆಗುವುದನ್ನು ತಡೆಯಬೇಕು~ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ಶ್ರೀಧರ್ ಹೇಳುತ್ತಾರೆ.  ಹಿರೀಸಾವೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ನೀರಿನ ಸಮಸ್ಯೆ ಇರುವ ಕುವೆಂಪುನಗರಕ್ಕೆ ಸಮಪರ್ಕ ನೀರು ಒದಗಿಸಲು ಜನಪ್ರತಿನಿಧಿಗಳು ಮುಂದಾಗ ಬೇಕು ಎಂಬುದು ಸ್ಥಳೀಯರ ಒತ್ತಾಯ.ಶಶಿವಾಳ: ಬತ್ತಿದ ಅಂತರ್ಜಲ

ಅರಸೀಕೆರೆ:  ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಸಂಗ್ರಹಿಸ ತೋಟ, ಜಮೀನುಗಳಿಗೆ ಬಿಂದಿಗೆ ಹಿಡಿದು ಪರದಾಡುವ ಚಿತ್ರಣ ಅನೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ. ತಾಲ್ಲೂಕಿನ ಗಡಿ ಭಾಗದ ಶಶಿವಾಳ ಗ್ರಾಮದಲ್ಲಿ ಜನತೆ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ. ಗ್ರಾಮದಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಮಳೆ ಅಭಾವದಿಂದ ಅಂತರ್ಜಲ ಬತ್ತಿ ಹೋಗಿರು ವುದರಿಂದ ನೀರು ಪೂರೈಕೆ ಗ್ರಾಮದಲ್ಲಿ ಸಾಧ್ಯವಿಲ್ಲದಂತಾಗಿದೆ.ಗ್ರಾಮದಿಂದ ಸುಮಾರು ದೂರದ ಜಮೀನು ಮಾಲೀಕರು ಕೃಷಿಗಾಗಿ ಹಾಕಿಕೊಂಡ ಕೊಳವೆಬಾವಿಗಳಿಂದ ನೀರು ತರುವುದು ಜನತೆಗೆ ಅನಿವಾರ್ಯವಾಗಿದೆ.ಗ್ರಾಮದಲ್ಲಿ ಎರಡು ಕೈಪಂಪ್ ಅಳವಡಿಸಲಾಗಿದ್ದು, ಅವುಗಳಲ್ಲಿ ನೀರು ಬಂದು ವರ್ಷಗಳೇ ಉರುಳಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಸಾಕಷ್ಟು ಬಾರಿ ಕೇಳಿದರು ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.