ರಾಮನಾಥಪುರ: ಬಹು ವರ್ಷಗಳ ಬೇಡಿಕೆಯಾದ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆ ನಾಲೆ ಆಧುನೀಕರಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿರುವುದು ಅಚ್ಚುಕಟ್ಟು ವ್ಯಾಪ್ತಿಯ ರೈತರಲ್ಲಿ ಹರ್ಷ ಮೂಡಿಸಿದೆ.ಈ ಯೋಜನೆಗೆ ಸರ್ಕಾರ ರೂ.121.39 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಈಗಾಗಲೇ ಬೆಂಗಳೂರಿನ ಎಸ್ಎನ್ಸಿ ಪವರ್ ಕಾರ್ಪೊರೇಷನ್ ಲಿ.. ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿದೆ.

ಅಣೆಕಟ್ಟೆ ಎಡದಂಡೆ ನಾಲೆ ಸರಪಳಿ ಪ್ರಾರಂಭದಿಂದ 37 ಕಿ.ಮೀ ಹಾಗೂ ಬಲದಂಡೆ ನಾಲೆಯ 80 ಕಿ.ಮೀ ಮೆಕ್ಯಾನಿಕಲ್ ಪೇವರ್ ಬಳಸಿ ಸಿಮೆಂಟ್ ಕಾಂಕ್ರಿಟ್ ಲೈನಿಂಗ್ ಹಾಕಲಾಗುತ್ತಿದೆ.ನಾಲೆ ಅಕ್ಕಪಕ್ಕದಲ್ಲಿ ಮಣ್ಣು ಸುರಿದು ಏರಿ ಹಾಕಿ ಸಮತಟ್ಟುಗೊಳಿಸಲಾಗುತ್ತಿದೆ. ಹಾಳಾಗಿರುವ ಕಿರು ಸೇತುವೆ, ಅಡ್ಡ ಮೋರಿ ಹಾಗೂ ಸೋಪಾನ ಕಟ್ಟೆಗಳ ದುರಸ್ತಿಗೆ ಕಾಯಕಲ್ಪ ಸಿಕ್ಕಿದೆ.

ಕೊಣನೂರು ಹೋಬಳಿ ಕಟ್ಟೇಪುರ ಬಳಿ ಕಾವೇರಿ ನದಿಗೆ ಪ್ರಥಮವಾಗಿ ಕಟ್ಟಿದ ಕೃಷ್ಣರಾಜ ಅಣೆಕಟ್ಟೆ ಎಡ ಮತ್ತು ಬಲದಂಡೆ ನಾಲೆ ಮೂಲಕ 8770 ಎಕರೆಗೆ ನೀರುಣಿಸುವ ಯೋಜನೆ ಇದಾಗಿದೆ.ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ 3026 ಎಕರೆ ಹಾಗೂ ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ 5744 ಎಕರೆ ಅಚ್ಚುಕಟ್ಟು ಪ್ರದೇಶ ಈ ಅಣೆಕಟ್ಟೆ ವ್ಯಾಪ್ತಿಗೆ ಒಳಪಡುತ್ತದೆ.

ಅಣೆಕಟ್ಟೆಯ ಬಲದಂಡೆ ನಾಲೆ 83.60 ಕಿ.ಮೀ. ಉದ್ದವಿದ್ದು 321 ಕ್ಯೂಸೆಕ್ ನೀರು ಹರಿವಿನ ಸಾಮರ್ಥ್ಯ ಹೊಂದಿದೆ. 6425 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವಿದೆ. ಇದರಲ್ಲಿ ಅರಕಲಗೂಡು ತಾಲ್ಲೂಕಿನ 2345 ಎಕರೆ ಹಾಗೂ ಕೆ.ಆರ್. ನಗರ ತಾಲ್ಲೂಕಿನ 5179 ಎಕರೆಗೆ ನೀರುಣಿಸುತ್ತಿದೆ. 37.00 ಮೀ. ಉದ್ದವಿರುವ ಎಡದಂಡೆ ನಾಲೆ 124 ಕ್ಯೂಸೆಕ್ ನೀರು ಹರಿವಿನ ಸಾಮರ್ಥ್ಯ ಹೊಂದಿದ್ದು, 2345 ಎಕರೆ ಅಚ್ಚುಕಟ್ಟು ಪ್ರದೇಶ ನೀರಾವರಿಗೆ ಒಳಪಟ್ಟಿದೆ. ಇದರಲ್ಲಿ ಅರಕಲಗೂಡು ತಾಲ್ಲೂಕಿನ 1780 ಎಕರೆ ಹಾಗೂ ಕೆ.ಆರ್. ನಗರ ತಾಲ್ಲೂಕಿನ 565 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುತ್ತಿದೆ.

ಶಿಥಿಲಗೊಂಡು ಹದಗೆಟ್ಟದ್ದ ಈ ನಾಲೆಗಳಲ್ಲಿ ಸಮರ್ಪಕವಾಗಿ ನೀರು ಹರಿಯದೇ ಸಾಕಷ್ಟು ಕಡೆ ಏರಿ ಒಡೆದು ಗದ್ದೆಗಳ ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿತ್ತು. ಮಳೆಗಾಲದಲ್ಲಿ ನಾಲೆಗಳಲ್ಲಿ ನೀರು ತುಂಬಿ ಮುಂದೆ ಸರಾಗವಾಗಿ ಹರಿಯದೇ ಏರಿ ಮೇಲೆಯೇ ನುಗ್ಗುವುದಲ್ಲದೇ ಸೂಕ್ತ ನಿರ್ವಹಣೆಯಿಲ್ಲದೇ ನೀರು ಪೋಲಾಗುತಿತ್ತು. ಏರಿ ಮೇಲಿನ ರಸ್ತೆ ಸಂಚಾರಕ್ಕೆ ಸಂಚಕಾರ ತರುವಂತಿತ್ತು. ಈಗ ನಾಲೆ ಆಧುನೀಕರಣ ಕಾಮಗಾರಿ ಆರಭಗೊಂಡಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.