ಗುರುವಾರ , ಮೇ 6, 2021
25 °C

ಅಜೀಂ ಪ್ರೇಮ್‌ಜೀ ವಿವಿ: ಪ್ರಬಂಧ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು ಶಿಕ್ಷಣದ ತಾತ್ವಿಕತೆ ಕುರಿತು ಸರಣಿ ವಿಚಾರ ಸಂಕಿರಣಗಳನ್ನು ಸಂಘಟಿಸುತ್ತಿದ್ದು, ಈ ಸಂಬಂಧ 400-500 ಶಬ್ದಗಳಿಗೆ ಮೀರದ ಪ್ರಬಂಧಗಳನ್ನು ಆಹ್ವಾನಿಸಿದೆ.ಜೈಪುರ, ಡೆಹ್ರಾಡೂನ್, ಕೋಲ್ಕತ್ತಾ ಹಾಗೂ ಪಾಂಡಿಚೇರಿಗಳಲ್ಲಿ ನಾಲ್ಕು ಪ್ರಾದೇಶಿಕ ಮಟ್ಟದ ವಿಚಾರ ಸಂಕಿರಣಗಳು ಈ ವರ್ಷದ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿವೆ. ಇದೇ ವಿಷಯಕ್ಕೆ ಸಂಬಂಧಿಸಿದ ಒಂದು ಅಂತರರಾಷ್ಟ್ರೀಯ ವಿಚಾರ ಸಂಕಿರಣವು ಬೆಂಗಳೂರಿನಲ್ಲಿ 2013ರ ಜನವರಿ 16ರಿಂದ 18ರವರೆಗೆ ನಡೆಯಲಿದೆ.ವಿಚಾರ ಸಂಕಿರಣದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ವಿದ್ವಾಂಸರು ಶಿಕ್ಷಣದ ತಾತ್ವಿಕತೆಯಲ್ಲಿ ಪ್ರಸ್ತುತ ಸಂಗತಿಗಳ ಕುರಿತು ಪ್ರಬಂಧ ಮಂಡಿಸಲಿದ್ದಾರೆ.

 

ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳಾದ ಪ್ರತಿಭೆಯ ವಿಕಾಸ ಹಾಗೂ ಶಿಕ್ಷಣದಲ್ಲಿ ಕ್ರಮಬದ್ಧವಾದ ಬದಲಾವಣೆಯನ್ನು ತರುವಲ್ಲಿ ಸಹಾಯಕವಾದ ಜ್ಞಾನ ನಿರ್ಮಾಣ ಮೊದಲಾದ ವಿಷಯಗಳ ಮೇಲೆ ಈ ವಿಚಾರ ಸಂಕಿರಣಗಳು ಕೇಂದ್ರಿತವಾಗಲಿವೆ.

 

ಈ ನಿಟ್ಟಿನಲ್ಲಿ ಶಿಕ್ಷಣದಲ್ಲಿ ತಾತ್ವಿಕತೆ ಸರಣಿ ವಿಚಾರ ಸಂಕಿರಣ ಕಾರ್ಯಕ್ರಮವು ದೇಶ ವಿದೇಶಗಳ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಇರುವ ವಿದ್ವಾಂಸರುಗಳನ್ನು ಒಂದುಗೂಡಿಸುವ ಹಾಗೂ ಸಂಪರ್ಕಿಸುವ ಮೊದಲನೆ ಹೆಜ್ಜೆಯಾಗಿದೆ.ಯುವ ವಿದ್ವಾಂಸರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ವಿಚಾರಸಂಕಿರಣಗಳಿಗೆ ಬೆಂಬಲ ಮತ್ತು ಶೈಕ್ಷಣಿಕ ಸಹಾಯ ಒದಗಿಸಲು ವಿಶ್ವವಿದ್ಯಾನಿಲಯವು ಚಿಂತನೆ ನಡೆಸುತ್ತಿದೆ. ದೇಶದಲ್ಲಿ ಉತ್ತಮ ಸಂಶೋಧನಾ ಪ್ರತಿಭೆಗಳ ಕೊರತೆಯಿದೆ. ವಿಶೇಷವಾಗಿ ಶಿಕ್ಷಣದ ತಾತ್ವಿಕತೆ ವಿಷಯದಲ್ಲಿ ಈ ಕೊರತೆ ಕಂಡುಬರುತ್ತಿದೆ. ಹಾಗಾಗಿ ಈ ಕಾರ್ಯವು ತುಂಬ ಪ್ರಮುಖ ಅಂಶವಾಗಿದೆ.ಪರಿಕಲ್ಪನಾ ಟಿಪ್ಪಣಿಗಳು ಹಾಗೂ ವಿಚಾರಸಂಕಿರಣದ ವಿಷಯಗಳು ಮತ್ತು ಹೆಚ್ಚಿನ ವಿವರಗಳಿಗೆ www.azimpremjiuniversity.edu.in/PoE

ಪ್ರಬಂಧಗಳನ್ನು ಕಳುಹಿಸಬೇಕಾದ ವಿಳಾಸ poe.seminar@apu.edu.in. ಪ್ರಾದೇಶಿಕ ವಿಚಾರ ಸಂಕಿರಣಗಳಿಗೆ ಪ್ರಬಂಧ ಸಲ್ಲಿಸಲು ಏಪ್ರಿಲ್ 15 ಹಾಗೂ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಿಗೆ ಜುಲೈ 31, 2012 ಕೊನೆ ದಿನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.