ಭಾನುವಾರ, ಜನವರಿ 19, 2020
26 °C

ಅಣುಕು ನ್ಯಾಯಾಲಯ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕ್ರೈಸ್ಟ್ ವಿಶ್ವ ವಿದ್ಯಾಲಯದ ಕಾನೂನು ಶಾಲೆಯು ವಿ.ವಿ ಸಭಾಂಗಣದಲ್ಲಿ `ಅಣುಕು ನ್ಯಾಯಾಲಯ~ ಸ್ಪರ್ಧೆಯನ್ನು ಜ.19 ರಿಂದ 22 ರ ವರೆಗೆ ಏರ್ಪಡಿಸಿದೆ~ ಎಂದು ಅಣುಕು ನ್ಯಾಯಾಲಯ ಸಮಿ ತಿಯ ಅಧ್ಯಕ್ಷ ಪ್ರಶಾಂತ ಶಿವದಾಸ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ಸ್ಪರ್ಧೆ ಯಲ್ಲಿ ಇಡೀ ಭಾರತದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನವದೆಹಲಿ, ಕೋಲ್ಕತ್ತ, ಚೆನ್ನೈ ನಿಂದ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಇದು ವಿದ್ಯಾರ್ಥಿ ಗಳಿಗೆ ಒಳ್ಳೆಯ ವೇದಿಕೆಯಾ ಗಲಿದೆ~ ಎಂದರು.`ಹೈಕೋರ್ಟ್ ನ್ಯಾಯ ಮೂರ್ತಿ ರಾಮ್‌ಮೋಹನ್ ರೆಡ್ಡಿ, ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಫ್.ಆರ್.ರೆಬೆಲ್ಲೊ ಅತಿಥಿಗಳಾಗಿ ಆಗಮಿಸಲಿದ್ದಾರೆ~ ಎಂದರು.

 

ಪ್ರತಿಕ್ರಿಯಿಸಿ (+)