ಮಂಗಳವಾರ, ಜೂನ್ 15, 2021
23 °C

ಅತ್ಯಾಚಾರಕ್ಕೊಳಗಾದವರ ಚಿಕಿತ್ಸೆಗೆ ನೂತನ ಮಾರ್ಗದರ್ಶಿ ಸೂತ್ರಗಳು ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಅತ್ಯಾಚಾರಕ್ಕೊಳಗಾದವರ ಚಿಕಿತ್ಸೆಗೆ  ಈ ಹಿಂದೆ ಅನುಸರಿಸುತ್ತಿದ್ದ ’ಟೂ ಫಿಂಗರ್’ ಪರೀಕ್ಷೆಯನ್ನು ನಿಷೇಧಿಸಿ, ನೂತನ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಜಾರಿ ಮಾಡಿದೆ.

ಅತ್ಯಚಾರಕ್ಕೆ ಒಳಗಾದವರ ಚಿಕಿತ್ಸೆಗಾಗಿ ಎಲ್ಲ ಆಸ್ಪತ್ರೆಗಳಲ್ಲೂ ಪ್ರತ್ಯೇಕ  ಕೋಣೆಗಳನ್ನು ತೆರೆಯುವುದು ಹಾಗೂ  ಆಧುನಿಕ ವಿಧಿವಿಜ್ಞಾನ ಮತ್ತು   ವೈಧ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಲಾಗಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್‌ಆರ್‌) ಗಳ ತಜ್ಞರು ಮತ್ತು ನುರಿತ ವೈದ್ಯಾಧಿಕಾರಿಗಳ  ಸಹಯೋಗದೊಂದಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಭಾಯಿಸಲು ಹೊಸ  ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.