`ಸುಡು ಬಿಸಿಲನ್ನು ಮಕ್ಕಳ ಮೈಗೆ ಸೋಕಿಸಬೇಡಿ. ಮುಂಜಾನೆ, ಮುಸ್ಸಂಜೆಯ ಹೊಂಬಿಸಿಲು ಸೂಕ್ತ. ನಮ್ಮ ಮಕ್ಕಳ ಆರೋಗ್ಯ ನಮ್ಮ ಕೈಯಲ್ಲಿದೆ. ವಿಟಮಿನ್ `ಡಿ~ ಮಗುವಿಗೆ ದೊರೆಯಲೆಂದು ಗಾಢ ಬಿಸಿಲಿನ ಮೊರೆ ಹೋಗದಿರಿ~ ಹೀಗೆಂದು ತುಸು ಬಿಂಕದಿಂದಲೇ ತಾಯಂದಿರಿಗೆ ಸಲಹೆ ಕೊಟ್ಟವರು ಯಾವುದೋ ಆರೋಗ್ಯಾಧಿಕಾರಿಯಲ್ಲ.

ಮಾಡೆಲ್, ಫಿಲ್ಮ್ ಜತೆಗೆ ವೈದ್ಯ ಲೋಕದಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಡಾ. ಅದಿತಿ ಗೋವಿತ್ರಿಕರ್.

ಕ್ಯಾಡ್ಬರಿ ಬೋರ್ನ್ವಿಟಾದ ಹೊಸ ಉತ್ಪನ್ನವಾದ ಮಿಶನ್ ನ್ಯೂಟ್ರಿಶನ್ ಬಿಡುಗಡೆ ಮಾಡಲು ಆಗಮಿಸಿದ್ದ ಅದಿತಿ ತಾಯಂದಿರಿಗೆ ಒಂದಿಷ್ಟು ಟಿಪ್ಸ್ ಹೇಳುತ್ತಲೇ ತಮ್ಮ `ಮಕ್ಕಳ ಕಾಳಜಿ~ಯನ್ನು ತೋರಿಸಿದರು.

`ವಿಟಮಿನ್ `ಡಿ~ ಮಕ್ಕಳಿಗೆ ಅಗತ್ಯವಾದ ಕ್ಯಾಲ್ಸಿಯಂ ಒದಗಿಸುತ್ತದೆ. ಸೂರ್ಯನಿಂದ ಅದು ದೊರಕಿದರೂ, ಹಾಲು, ಬೋರ್ನ್ ವಿಟಾ ಹೀಗೆ ಬೇರೆ ಮೂಲಗಳಿಂದಲೂ ನಾವು ಅವನ್ನು ಪಡೆದುಕೊಳ್ಳಬಹುದು. ಬೆಂಗಳೂರು ಈಗೀಗ ಸುಡು ಬಿಸಿಲಿನಿಂದ ಬೇಯುತ್ತಿದೆ, ಇದರಿಂದ ನಿಮ್ಮ ಮಕ್ಕಳನ್ನು ರಕ್ಷಿಸಿ.

ಇದಕ್ಕೆ ಪೂರಕವಾಗಿ ವಿಟಮಿನ್ `ಡಿ~ಗೆಂದು ಬೋರ್ನ್ವಿಟಾ ಹೊರ ತಂದಿರುವ `ಮಿಶನ್ ನ್ಯೂಟ್ರಿಶನ್ ಬಳಸಿ~ ಎಂದು ಮುಗುಳ್ನಗುತ್ತಾರೆ ಅದಿತಿ.

ಮಕ್ಕಳು ಹೆಚ್ಚು ಇಷ್ಟಪಡುವುದು ಫಾಸ್ಟ್ ಫುಡ್, ಜಂಕ್ ಫುಡ್ಗಳನ್ನೆ. ಇವುಗಳನ್ನ ತಿಂದರೂ ಅದು ಕ್ಯಾಲ್ಸಿಯಂಯುಕ್ತ ಆಹಾರವಾಗಿರಲಿ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದನ್ನು ಖಡ್ಡಾಯ ಮಾಡಿ. ಆಗ ನಿಮ್ಮ ಮಗು ಹೆಲ್ದಿಯಾಗಿರುತ್ತದೆ ಎನ್ನುತ್ತಾ ನಾನು ವೈದ್ಯೆಯಾಗಿ ಹೇಳುತ್ತಿಲ್ಲ; ಇವೆಲ್ಲಾ ಎಲ್ಲಾ ತಾಯಂದಿರೂ ವಹಿಸಬೇಕಾದ ಕಾಳಜಿ ಎಂದು ತಮ್ಮ ಕಾಳಜಿಯನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದರು.

ಮಕ್ಕಳ ಜೊತೆಗೆ ತಾಯಂದಿರಿಗೂ ವಿಟಮಿನ್ `ಡಿ~ ಅಗತ್ಯವಿದೆ. ತಾಯಿ ಮಗುವನ್ನು ಸಾಕುವ ಭರದಲ್ಲಿ ತನ್ನ ಆರೋಗ್ಯವನ್ನೇ ಮರೆಯುತ್ತಿದ್ದಾಳೆ. ಮಕ್ಕಳ ಕಾಳಜಿ ಜೊತೆಗೆ ತಮ್ಮ ಕಾಳಜಿಯೂ ಅಗತ್ಯ ಎನ್ನುತ್ತಲೇ ನನ್ನನ್ನು ನೋಡಿ ಕಲಿಯಿರಿ ಎಂದು ತುಸು ಕಣ್ಣುಮಿಟುಕಿಸುತ್ತಾರೆ ಅದಿತಿ.

ಕ್ಯಾಡ್ಬರಿ ಬೋರ್ನ್ವಿಟಾ 11 ಪ್ರಮುಖ ನಗರಗಳಲ್ಲಿ ಸುಮಾರು ಎರಡು ಸಾವಿರ ತಾಯಂದಿರನ್ನು ಸಂದರ್ಶಿಸಿ ಅವರ ಮಕ್ಕಳಲ್ಲಿ ವಿಟಮಿನ್ `ಡಿ~ ಕೊರತೆ ಇರುವುದನ್ನು ಕಂಡುಕೊಂಡಿದೆ. ಇದಕ್ಕೆ ಸೂಕ್ತವೆಂಬಂತೆ ಕ್ಯಾಡ್ಬರಿ ಬೋರ್ನ್ವಿಟಾ- ಮಿಶನ್ ನ್ಯೂಟ್ರಿಶನ್ನ್ನು ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಮಕ್ಕಳಿಗೆ ಸೂಕ್ತವಾದ ಕ್ಯಾಲ್ಸಿಯಂ ದೊರೆಯುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕ್ಯಾಡ್ಬರಿ ಬೋರ್ನ್ವಿಟಾ ತಾಯಂದಿರಿಗಾಗಿ ಸಹಾಯವಾಣಿಯ ಸೌಲಭ್ಯವನ್ನೂ ಒದಗಿಸುತ್ತಿದೆ. ತಮ್ಮ ಮಕ್ಕಳಿಗೆ ವಿಟಮಿನ್ `ಡಿ~ ದೊರೆಯುವಂತೆ ಇನ್ನಷ್ಟು ಸಲಹೆ ಸೂಚನೆಗಳು ಬೇಕಾದಲ್ಲಿ ಸಹಾಯವಾಣಿಗೆ ಕರೆ ಮಾಡಬಹುದು. ವಾರದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರ ಒಳಗೆ 1800 22 8530ಕ್ಕೆ ರಿಂಗಣಿಸಿ.
ಚಿತ್ರ: ಸತೀಶ್ ಬಡಿಗೇರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.