ಗುರುವಾರ , ಮೇ 26, 2022
22 °C
ಶ್ರೀನಿವಾಸನ್ ಸ್ಮಾರಕ ಕ್ರಿಕೆಟ್ ಟೂರ್ನಿ: ಅಭಿನವ್ ಶತಕ

ಅಧ್ಯಕ್ಷರ ಇಲೆವೆನ್ ಬೃಹತ್ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಭಿನವ್ ಮನೋಹರ್ ಶತಕ (144) ಹಾಗೂ ರೋಹನ್ ಕದಮ್ (81) ಅರ್ಧ ಶತಕದ ನೆರವಿನಿಂದ ಅಧ್ಯಕ್ಷರ ಇಲೆವೆನ್ ತಂಡ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಧಾರವಾಡ ವಲಯ ಎದುರಿನ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಧ್ಯಕ್ಷರ ಇಲೆವೆನ್ 90 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಧಾರವಾಡ ವಲಯ ದಿನದಾಟದ ಅಂತ್ಯಕ್ಕೆ 7.3 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿದೆ.ಸಂಕ್ಷಿಪ್ತ ಸ್ಕೋರ್: ಅಧ್ಯಕ್ಷರ ಇಲೆವೆನ್: 90 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 401 ರನ್ (ಅಭಿನವ್ ಮನೋಹರ್ 144, ರೋಹನ್ ಕದಮ್ 81, ಕೆ.ವಿ.ಸಿದ್ಧಾರ್ಥ್ 53, ಸಾದೀಕ್ ಕಿರ್ಮಾನಿ 34, ಕ್ರಾಂತಿ ಕುಮಾರ್ 29; ಆದಿತ್ಯ ಪಟೇಲ್ 56ಕ್ಕೆ3, ಪರಪ್ಪ ಮಾರ್ಡಿ 73ಕ್ಕೆ 2, ನೀಲೇಶ್ ಪಟೇಲ್ 9ಕ್ಕೆ 2). ಧಾರವಾಡ ವಲಯ: 7.3 ಓವರ್‌ಗಳಲ್ಲಿ 1 ವಿಕೆಟ್‌ಗೆ 35. (ಮುರ್ಡೆಶ್ವರ್ 16)ತುಮಕೂರು ವಲಯ: 75.4 ಓವರ್‌ಗಳಲ್ಲಿ 235. (ಧೀಮಂತ್ ರಾಜ್ 37, ವಿಶ್ವನಾಥ್ 67, ವಾಸೀಂ 25, ಗುಂಡಪ್ಪ 40; ಶಶಿ ಶೇಖರ್ 46ಕ್ಕೆ 4, ಪ್ರತೀಕ್ ಜೈನ್ 43ಕ್ಕೆ 2). ಬೆಂಗಳೂರು ವಲಯ: 33 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 129 ರನ್ (ಮಯಾಂಕ್ ಅಗರ್‌ವಾಲ್ 75, ಸೂರಜ್ ಸಂಪತ್ 35).ಮಂಗಳೂರು ವಲಯ: 82.1 ಓವರ್‌ಗಳಲ್ಲಿ 225. (ನಸ್ರುಲ್ಲಾಹ್ 26, ಸುಹೀಲ್ ಸುಮಿತ್ 62, ಆದಿತ್ಯ ರೈ 28, ಭರತ್ ಧುರಿ 23; ರಾಜುಗಾಲಾ 31ಕ್ಕೆ2, ಶ್ರೇಯಸ್ ಗೋಪಾಲ್ 52ಕ್ಕೆ4).      ಕಾರ್ಯದರ್ಶಿ ಇಲೆವೆನ್: 22 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 45 (ಅನಿಲ್ ಮಹಾಪಾತ್ರ 23; ಆದಿತ್ಯ ರೈ 41ಕ್ಕೆ2).ಮೈಸೂರು ವಲಯ: 65.5 ಓವರ್‌ಗಳಲ್ಲಿ 174. (ವಿನಯ್ ಕೆ.ಆರ್. 24, ಲಕ್ಷ್ಮಣ್ 59; ಪ್ರಭಾಕರ್ ಆರ್. 25ಕ್ಕೆ3, ನಿತೀಶ್ 55ಕ್ಕೆ2, ಹರ್ಡಿಕ್ ಮುನೊತ್ 39ಕ್ಕೆ2, ಉಮಂಗ್ ಸಿ. 36ಕ್ಕೆ2). ಸಂಯುಕ್ತ ನಗರ ಇಲೆವೆನ್: 1 ವಿಕೆಟ್ ನಷ್ಟಕ್ಕೆ 146. (ಕೆ. ಶಶೀಂದ್ರ್ 45, ಲಿಯಾನ್ ಖಾನ್ 62, ಅಬ್ಬಾಸ್ ಕೆ. 28).ರಾಯಚೂರು ವಲಯ: 45 ಓವರ್‌ಗಳಲ್ಲಿ 140. (ಅಬ್ದುಲ್ ನೌಮನ್ 44, ಅವಿನಾಶ್ ಡಿ. 41; ರಾಜೇಶ್ ಸಿಂಗ್ 35ಕ್ಕೆ3, ಪಿ. ಮಗಿಜೆಂದನ್ 31ಕ್ಕೆ 3, ಕೆ.ಸಿ. ಕಾರ್ಯಪ್ಪ 35ಕ್ಕೆ 3). ಉಪಾಧ್ಯಕ್ಷರ ಇಲೆವೆನ್: 53 ಓವರ್‌ಗಳಲ್ಲಿ 4 ವಿಕೆಟ್‌ಗೆ 124. (ನಿಶಾಂತ್ ಶೇಕಾವತ್ ಬ್ಯಾಟಿಂಗ್ 55, ಶ್ರೀಜಿತ್ 23; ಆನಂದ್ ಡಿ. 32ಕ್ಕೆ 2).ಬೆಂಗಳೂರು ನಗರ: 75.1 ಓವರ್‌ಗಳಲ್ಲಿ 281. (ನಿರ್ಮಲ್ ಎಸ್. 32, ಸಂತೋಷ್ ಎಸ್. 27, ಹರೀಶ್ ಕುಮಾರ್ ಆರ್. 30; ರಾಜೇಶ್ 44ಕ್ಕೆ3, ವಿಕ್ರಮ್ ವೆಂಕಟೇಶ್ 62ಕ್ಕೆ2ಕ್ಕೆ, ಕಾರ್ತಿಕೇಯ ಜೆ. 28ಕ್ಕೆ2). ಶಿವಮೊಗ್ಗ ವಲಯ: 25 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 88. (ವಿಕ್ರಮ್ ವೆಂಕಟೇಶ್ 32, ಜೆ. ಕಾರ್ತಿಕೇಯ 28; ಹರೀಶ್ ಕುಮಾರ್ 17ಕ್ಕೆ 3).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.