ಹುಮನಾಬಾದ್: ಗಣ್ಯ ವ್ಯಕ್ತಿಗಳು ಮತ್ತು ಪ್ರವಾಸಿಗರಿಗೆ ವಿಶ್ರಾಂತಿ ನೀಡಬೇಕಾದ ತಾಲ್ಲೂಕಿನ ಘಾಟಬೋರಾಳ ಪ್ರವಾಸಿ ಮಂದಿರ ಅನೈತಿಕ ಧಂದೆಗಳ ತಾಣವಾಗಿ ಮಾರ್ಪಟ್ಟಿದೆ.

30ನೇ ನವೆಂಬರ್ 1988ರಲ್ಲಿ ಆ ಅವಧಿಯಲ್ಲಿ ಹುಲಸೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಘಾಟಬೋರಾಳ ಗ್ರಾಮದಲ್ಲಿ ಅಂದಿನ ಶಾಸಕಿ ಹಾಗೂ ರಾಜ್ಯ ಸಮಾಜ ಕಲ್ಯಾಣ ಖಾತೆ ಸಚಿವೆ ಆಗಿದ್ದ ಶಿವಕಾಂತಾ ಚತೂರೆ ಅವರು ಪ್ರವಾಸಿ ಮಂದಿರ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಆ ಅವಧಿಯಲ್ಲಿ ಮುರಳಿಧರರರಾವ ಕಾಳೆ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದರು.

ತಾಲ್ಲೂಕಿನ ಪ್ರಮುಖ ಹೋಬಳಿಗಳ ಪೈಕಿ ಒಂದಾದ ಘಾಟಬೋರಾಳ ಗ್ರಾಮದಲ್ಲಿ ~ಪ್ರವಾಸಿ ಮಂದಿರ~ ನಿರ್ಮಾಣ ಪ್ರಸ್ತಾವ ಸಲ್ಲಿಸಲಾಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾದ ಅಂದಾಜು ಅರ್ಧ ಎಕರೆ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಸಂಬಂಧ ಅಗತ್ಯ ಹಣ ಬಿಡುಗಡೆಗೊಂಡ ಬಳಿಕ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು.ಎರಡು ಕೋಣೆ ಏನೋ ನಿರ್ಮಿಸಲಾಗಿದೆ.

ಶೌಚಾಲಯ, ಸ್ನಾನಕೋಣೆ, ಕಿಟಕಿ, ಬಾಗಿಲು ಸೇರಿದಂತೆ ಕಟ್ಟಡಕ್ಕೆ ಯಾವುದೇ ಮೂಲಸೌಕರ್ಯ ಕಲ್ಪಿಸಲಾಗಿಲ್ಲ. ಆದರೇ ಸುತ್ತಲು ತಂತಿಬೇಲಿ ಮಾತ್ರ ಬಿಗಿಯಲಾಗಿದೆ. ಕಟ್ಟಡದ ಎದುರಿಗೆ ಮುಳ್ಳಿನ ಗಿಡಗಂಟೆ ಬೆಳೆದುನಿಂತಿವೆ. ವಿಶ್ರಾಂತಿ ತಾಣ ಆಗಬೇಕಿದ್ದ ಪ್ರವಾಸಿ ಮಂದಿರ ಸ್ಥಳ ರಾತ್ರಿವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ.

ಜೊತೆಗೆ ಸಾರ್ವಜನಿಕರು ಈ ಕಟ್ಟಡವನ್ನು ಶೌಚಾಲಯ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ತಳ್ಳಿ ಹಾಕುವಂತಿಲ್ಲ.

ಘಾಟಬೋರಾಳ ಗ್ರಾಮದ ಹೃದಯ ಭಾಗದಲ್ಲಿ ಇರುವ ಈ ಜಮೀನಿನ ಮೇಲೆ ಈಗ ಉಳ್ಳವರ ಕಣ್ಣು ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಶಿವಕಾಂತಾ ಚತೂರೆ ಅವರ ನಂತರ ಅದೆಷ್ಟೋ ಜನ ಶಾಸಕ, ಸಚಿವರು, ಜಿಲ್ಲಾ ಪಂಚಾಯಿತಿ ಸದಸ್ಯರು ಬಂದು ಹೋಗಿದ್ದಾರೆ. ಆದರೇ ಅಪೂರ್ಣ ಸ್ಥಿತಿಯಿಲ್ಲಿ ಇರುವ ಪ್ರವಾಸಿ ಮಂದಿರ ಮಾತ್ರ ಯಾರೊಬ್ಬರ ಗಮನಕ್ಕೆ ಬಾರದೇ ಇರುವುದು ವಿಷಾದದ ಸಂಗಎನ್ನುವುದು ಗ್ರಾಮಸ್ಥರ ಗಂಭೀರ ಆರೋಪವಿದೆ.

ಹಿಂದೂ- ಮುಸ್ಲಿಂ ಬಾಂಧವರ ಬಾಂಧವ್ಯ ಬೆಸೆಯುವ ಘೋಡವಾಡಿ ದರ್ಗಾಕ್ಕೆ ಈ ಮೂಲಕವೇ ಹೋಗಬೇಕಾದ ಕಾರಣ ನಿವೇಶನ ಭೂಮಾಫಿಯಾಗಳ ಪಾಲಾಗುವ ಮುನ್ನ ಸಂಬಂಧಪಟ್ಟ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಶೀಘ್ರ ಸ್ಥಳಕ್ಕೆ ಭೇಟಿನೀಡಿ, ಅಪೂರ್ಣ ಸ್ಥಿತಿಯಲ್ಲಿ ಉಳಿದುಕೊಂಡ ಪ್ರವಾಸಿ ಮಂದಿರ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ನೀಡಿ, ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಜನತೆಯ ಮನದಲ್ಲಿ ಶಾಶ್ವತ ನೆಲೆನಿಲ್ಲಬೇಕು ಎನ್ನುವುದು ಆ ಭಾಗದ ಪ್ರಜ್ಞಾವಂತ ನಾಗರೀಕರ ಅಂಬೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.