ಗುರುವಾರ , ಸೆಪ್ಟೆಂಬರ್ 19, 2019
26 °C

ಅಪಘಾತ: ಅಜರುದ್ದೀನ್ ಪುತ್ರನ ಸ್ಥಿತಿ ಗಂಭೀರ

Published:
Updated:

ಹೈದರಾಬಾದ್ (ಐಎಎನ್‌ಎಸ್): ಮಾಜಿ ಕ್ರಿಕೆಟಿಗ ಹಾಗೂ ಸಂಸದ ಅಜರುದ್ದೀನ್ ಸಂಬಂಧಿ ಅಜ್ಮಲ್ ಉರ್ ರಹಮಾನ್ (16) ನಗರದ ಹೊರವಲಯ ಪ್ರದೇಶದ ಪಪ್ಪಲಗುಡ ಬಳಿಯ ವರ್ತುಲ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.ಬೈಕ್ ಓಡಿಸುತ್ತಿದ್ದ ಅಜರುದ್ದೀನ್ ಪುತ್ರ ಅಯಾಜುದ್ದೀನ್ (19) ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಅವರಿಗೆ ಇಲ್ಲಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭರವಸೆಯ ಕ್ರಿಕೆಟ್ ಪಟುವಾಗಿರುವ ಅಯಾಜುದ್ದೀನ್ ಸ್ಪೋರ್ಟ್ಸ್ ಬೈಕಿನಲ್ಲಿ ಸಂಬಂಧಿಯನ್ನು ಕೂರಿಸಿಕೊಂಡು ಹೋಗುತ್ತಿದ್ದರು. ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.ಲಂಡನ್‌ನಲ್ಲಿರುವ ಅಜರುದ್ದೀನ್ ಸುದ್ದಿ ತಿಳಿದ ಕೂಡಲೇ ಹೈದರಾಬಾದಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.

Post Comments (+)