ಮೆಟ್ರಿ(ಕಂಪ್ಲಿ): ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿ-29ರ ಸಿಮೆಂಟ್ ರಸ್ತೆ ಕಾಮಗಾರಿ ಪರಿಪೂರ್ಣವಾಗದೆ ಇರುವುದರಿಂದ ಟ್ರಾಫಿಕ್ ಜಾಮ್ ಕಿರಿಕಿರಿ ಮಿತಿಮೀರಿದೆ. ಇದರ ಪರಿಣಾಮ ಗ್ರಾಮಸ್ಥರು ರೋಸಿ ಹೋಗಿದ್ದಾರೆ.

ದಿನದ 24 ತಾಸಿನಲ್ಲಿ ಕನಿಷ್ಠ 10ರಿಂದ 15ಗಂಟೆಯಾದರೂ ಟ್ರಾಫಿಕ್ ಜಾಮ್ ಈ ಗ್ರಾಮದಲ್ಲಿ ಸಾಮಾನ್ಯ. ಟ್ರಾಫಿಕ್ ಜಾಮ್ ಆಗುತ್ತಿದ್ದಂತೆ ಶಬ್ಧ ಮಾಲಿನ್ಯ ಅಧಿಕವಾಗಿ ಗ್ರಾಮದ ವಾಸಿಗಳು ರೋಸಿಹೋಗಿದ್ದಾರೆ. ಈ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗಿದ್ದರೂ ಗುತ್ತಿಗೆದಾರರು ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಸಿಮೆಂಟ್ ರಸ್ತೆ ಕಾಮಗಾರಿ ರಸ್ತೆ ಒಂದು ಭಾಗದಲ್ಲಿ ಮಾತ್ರ ಆಗಿದ್ದು, ಮತ್ತೊಂದು ಭಾಗದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳದೆ ವಿಳಂಬ ಮಾಡಿರುವುದರಿಂದ ರಸ್ತೆ ಪಕ್ಕದ ಸುಮಾರು ಮೂರ್ಮಾಲ್ಕು ವಿದ್ಯುತ್ ಕಂಬಗಳಿಗೆ ಭಾರಿ ಸರಕು ಲಾರಿಗಳು ಹಾನಿ ಮಾಡಿವೆ. ಈ ವಿದ್ಯುತ್ ಕಂಬಗಳು ಸದ್ಯ ಅಪಾಯದ ಸ್ಥಿತಿಯಲ್ಲಿರುವುದರಿಂದ ಆಗಾಗ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ.

ರಸ್ತೆ ಎರಡು ಪಕ್ಕದ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಗುತ್ತಿಗೆದಾರರು ಜೆಸ್ಕಾಂಗೆ ಇನ್ನೂ ಹಣ ತುಂಬಿಲ್ಲ. ಇವರು ಹಣ ತುಂಬದೆ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದೆ. ಈ ಮಧ್ಯೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

ಪ್ರಸ್ತುತ ರಾಜ್ಯ ಹೆದ್ದಾರಿ-29ರಲ್ಲಿ 15ಟನ್ ಭಾರ ಮಿತಿ ಸಾಗಿಸಬಹುದಾಗಿದ್ದು, ಆದರೆ ದೇಶದ ವಿವಿಧ ರಾಜ್ಯಗಳ ನೋಂದಣಿ ಹೊಂದಿದ 50ರಿಂದ 60ಟನ್ ಭಾರ ಹೊತ್ತು ಸಾಗುವ ಲಾರಿಗಳ ಹಾವಳಿ ಅಧಿಕವಾಗಿದ್ದು, ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ. ಮೆಟ್ರಿ ಗ್ರಾಮದಲ್ಲಿ ಕಳೆದ 50-60ದಿನಗಳಿಂದ ಪ್ರಮುಖವಾಗಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಕಿರಿ ಕಿರಿ, ವಿದ್ಯುತ್ ಕಂಬಗಳ ಸ್ಥಳಾಂತರ,ರಸ್ತೆ ಕಾಮಗಾರಿ ವಿಳಂಬ, ಒಂದು ಭಾಗದಲ್ಲಿ ಆಗಿರುವ ರಸ್ತೆಗೆ ಪಾದಾಚಾರಿ ರಸ್ತೆಯೇ ಸಮರ್ಪಕವಾಗಿ ಇಲ್ಲದಿರುವ ಬಗ್ಗೆ ಮತ್ತು ರಸ್ತೆ ಎರಡು ಪಕ್ಕದಲ್ಲಿ ಚರಂಡಿ ನಿರ್ಮಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಶೀಘ್ರ ಕ್ರಮ ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರಳಿ ಲೋಕೇಶ್ ಮತ್ತು ಕರವೇ ಕಂಪ್ಲಿ ಹೋಬಳಿ ಘಟಕ ಅಧ್ಯಕ್ಷ ಜಿ. ದೊಡ್ಡಯರ್ರಿಸ್ವಾಮಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.