ಶನಿವಾರ, ಜನವರಿ 18, 2020
26 °C
ಬಯಲು ರಂಗಮಂದಿರದಲ್ಲಿ ಶಾಲಾಮಟ್ಟದ ಸ್ಪರ್ಧೆ

ಅರಿವಿಗಾಗಿ ವಸ್ತು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ವಸ್ತು ಪ್ರದರ್ಶನವು ಅರಿವು ಮೂಡಿಸುವಲ್ಲಿ ಸಹಕಾರಿ­ಯಾಗಿದೆ ಎಂದು ವಿದ್ಯಾಮಂದಿರದ ಅಧ್ಯಕ್ಷ ವೈ.ಮುರಳೀಧರ ಅವರು ಅಭಿಪ್ರಾಯ ಪಟ್ಟರು.ದೂರವಾಣಿ ನಗರ  ಐಟಿಐ ವಿದ್ಯಾ­ಮಂದಿರವು ಬಯಲು ರಂಗಮಂದಿರ­ದಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಪ್ರೌಢ ಶಾಲೆ ಮಟ್ಟದ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನ ಮತ್ತು ರಸ ಸ್ಫರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಈ ರೀತಿ ವಿಜ್ಞಾನ ವಸ್ತು ಪ್ರದರ್ಶನಗಳನ್ನು ಆಯೋಜಿಸುವು­ದರಿಂದ  ಆಯಾ ಸ್ಥಳೀಯ ವಿದ್ಯಾರ್ಥಿ­ಗಳು ಇತರೆ ವಿದ್ಯಾರ್ಥಿಗಳ ಜೊತೆಯಲ್ಲಿ ಬೆರೆತು ಪರಸ್ಪರ ಮಾರ್ಗದರ್ಶನ ಪಡೆದು­ಕೊಳ್ಳಲು ಸಹಕಾರಿಯಾಗಿದೆ  ಎಂದು ತಿಳಿಸಿದರು.12 ಶಾಲೆಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)