ಬುಧವಾರ, ಏಪ್ರಿಲ್ 14, 2021
23 °C

ಆಗ ಸ್ಯಾಂಡಿ ಈಗ ಅಥೆನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗ ಸ್ಯಾಂಡಿ ಈಗ ಅಥೆನಾ

ನ್ಯೂಯಾರ್ಕ್, ನ್ಯೂಜೆರ್ಸಿಯಲ್ಲಿ ಭಾರಿ ಮಳೆ, 1700 ವಿಮಾನಗಳ ಹಾರಾಟ ರದ್ದು

ನ್ಯೂಯಾರ್ಕ್ (ಪಿಟಿಐ): ಅಧ್ಯಕ್ಷ ಬರಾಕ್ ಒಬಾಮ ಮರು ಆಯ್ಕೆ ವಿಜಯೋತ್ಸವದಲ್ಲಿ ಮುಳುಗೆದ್ದ ಅಮೆರಿಕದ ಜನರಿಗೆ ಇದೀಗ ಇನ್ನೊಂದು ಸಂಕಷ್ಟ ಎದುರಾಗಿದೆ. `ಸ್ಯಾಂಡಿ~ಯ ಅಬ್ಬರದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಹಂತದಲ್ಲಿಯೇ ಇನ್ನೊಂದು ಚಂಡಮಾರುತ `ಅಥೆನಾ~ ಆರ್ಭಟಿಸುತ್ತಿದೆ.ಇದರ ಪರಿಣಾಮವಾಗಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸಂಪರ್ಕ ವ್ಯವಸ್ಥೆ ಹದಗೆಟ್ಟಿದ್ದು, 1700ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.`ಅಥೆನಾ~ ಪೂರ್ವ ಕರಾವಳಿಯಿಂದ ಉತ್ತರದೆಡೆಗೆ ಚಲಿಸುತ್ತಿರುವ ಕಾರಣ ಮಧ್ಯ ಅಟ್ಲಾಂಟಿಕ್ ಹಾಗೂ ಈಶಾನ್ಯ ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ತೀರದಲ್ಲಿ ಗಂಟೆಗೆ 60 ಮೈಲು ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು ಮುಂದಿನ ಎರಡು ದಿನಗಳಲ್ಲಿ ನ್ಯೂ ಇಂಗ್ಲೆಂಡ್ ಪ್ರಾಂತ್ಯದಲ್ಲಿ 6-10 ಇಂಚು ಮಂಜು ಬೀಳುವ ಸಾಧ್ಯತೆ ಇದೆ. ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ಕರಾವಳಿ ತೀರದಲ್ಲಿ ಪ್ರವಾಹ ಸಾಧ್ಯತೆಯೂ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ನ್ಯೂಜೆರ್ಸಿ, ಕನೆಕ್ಟಿಕಟ್, ಪೆನ್ಸಿಲ್ವೇನಿಯಾ ಮತ್ತು ಮೆಸಾಚುಸೆಟ್ಸ್‌ನಲ್ಲಿ ಮಳೆ ಹಾಗೂ ಮಂಜು ಸುರಿಯುತ್ತಿದ್ದು, ವಿಮಾನ ಹಾರಾಟವನ್ನು ರದ್ದುಪಡಿಸಲಾಗಿದೆ. ಇವುಗಳಲ್ಲಿ ನ್ಯೂಜೆರ್ಸಿಯ ನೆವಾರ್ಕ್, ನ್ಯೂಯಾರ್ಕ್‌ನ ಲಾಗಾರ್ಡಿಯಾ ಮತ್ತು ಜೆಎಫ್‌ಕೆ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳು ರದ್ದಾಗಿವೆ.`ಸ್ಯಾಂಡಿ~ಯಿಂದಾಗಿ ಇನ್ನೂ 1,81,000 ಗ್ರಾಹಕರು ಕತ್ತಲೆಯಲ್ಲಿಯೇ ಕಾಲ ಕಳೆಯುತ್ತಿದ್ದು ಇದೀಗ ಈ ಸಂಖ್ಯೆ 60,000ಕ್ಕೆ ಏರಲಿದೆ ಎಂದು ನ್ಯೂಜೆರ್ಸಿಯ ಸಾರ್ವಜನಿಕ ಸೇವಾ ಸಂಸ್ಥೆಯೊಂದು  ತಿಳಿಸಿದೆ. `ಅಥೆನಾ~ದಿಂದ ಇನ್ನೂ ಹೆಚ್ಚಿನ ಸಂಖ್ಯೆಯ ಜನರು ಕತ್ತಲೆಯಲ್ಲಿಯೇ ಕಾಲ ಕಳೆಯಬೇಕಾಗಬಹುದು ಎಂದು ಗವರ್ನರ್ ಕ್ರಿಸ್ ಕ್ರಿಸ್ಟಿ ಎಚ್ಚರಿಕೆ ನೀಡಿದ್ದಾರೆ.ಅಮೆರಿಕದ ಪೂರ್ವ ಕರಾವಳಿಯಲ್ಲಿ ರುದ್ರ ತಾಂಡವವಾಡಿದ್ದ `ಸ್ಯಾಂಡಿ~ಗೆ ಸುಮಾರು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.