ಮೂರು ಹೆಜ್ಜೆ ಭೂಮಿ (ಕಾದಂಬರಿ)
ಲೇ: ಡಾ. ಬಿ. ಜನಾರ್ದನ ಭಟ್, ಪುಟ: 284, ಬೆಲೆ: ರೂ 250. ಪ್ರಕಾಶನ: ಮನೋಹರ ಗ್ರಂಥಮಾಲಾ, ಧಾರವಾಡ

ಸಾಹಿತಿ ಡಾ. ಬಿ. ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಕಾದಂಬರಿಕಾರರಾಗಿ, ಕತೆಗಾರರಾಗಿ, ವಿಮರ್ಶಕರಾಗಿ, ಅನುವಾದಕರಾಗಿ, ಅಂಕಣಕಾರರಾಗಿ, ಪ್ರಾಧ್ಯಾಪಕರಾಗಿ ಸಂಘಟಕರಾಗಿ ಅವರು ಸೈ ಎನಿಸಿಕೊಂಡಿದ್ದಾರೆ. ಅವರು ನಮ್ಮ ನಡುವಿನ ಅಪರೂಪದ ಸವ್ಯಸಾಚಿ ಲೇಖಕರು.

ಸಾಹಿತ್ಯ ನಿರ್ಮಿತಿ ಹಾಗೂ ಕಟ್ಟುವ ಕೈಂಕರ್ಯದಲ್ಲೂ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿರುವ ಜನಾರ್ದನ ಭಟ್ ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಅವರ ಬರವಣಿಗೆ, ಸಂಪಾದಿತ ಕೃತಿಗಳು ಎಲ್ಲವೂ ಸೇರಿ ಪ್ರಯೋಗ ವೈವಿಧ್ಯವನ್ನು ತೋರುತ್ತವೆ.

ಜನಾರ್ದನ್ ಭಟ್ ಅವರ ಪ್ರಯೋಗಶೀಲತೆ ಕಾದಂಬರಿ ಕ್ಷೇತ್ರದಲ್ಲಿ ಕೂಡ ಮುಂದುವರೆದಿದೆ. ಪ್ರಾದೇಶಿಕ ವಸ್ತು–ಪಾತ್ರಗಳಿಗೆ ಒಟ್ಟುಕೊಟ್ಟು ಕತೆ, ಕಾದಂಬರಿಗಳನ್ನು ರಚಿಸಿರುವ ಅವರು ತಮ್ಮ ಸೃಜನಶೀಲ ಕೃತಿಗಳಲ್ಲಿ ಗ್ರಾಮೀಣ ಜೀವನ ದರ್ಶನವನ್ನು ಸಶಕ್ತವಾಗಿ, ಕಲಾತ್ಮಕವಾಗಿ ದಾಖಲಿಸಿದ್ದಾರೆ. ‘ಉತ್ತರಾಧಿಕಾರ’ ಅವರ ಚೊಚ್ಚಿಲ ಕಾದಂಬರಿ. ಅವರು ಬರೆದ ‘ಹಸ್ತಾಂತರ’ ಹಾಗೂ ‘ಅನಿಕೇತನ’ ಕಾದಂಬರಿಗಳೂ ಓದುಗರ – ವಿಮರ್ಶಕರ ಗಮನ ಸೆಳೆದಿದೆ. ಇದೀಗ ಅವರ ನಾಲ್ಕನೆಯ ಕಾದಂಬರಿ ‘ಮೂರು ಹೆಜ್ಜೆ ಭೂಮಿ’ಯನ್ನು ಧಾರವಾಡದ ಮನೋಹರ ಗ್ರಂಥಮಾಲೆ ಹೊರತಂದಿದೆ.

ಪ್ರಸ್ತುತ ಕಾದಂಬರಿ ‘ಮೂರು ಹೆಜ್ಜೆ ಭೂಮಿ’ಗೆ ಅನೇಕ ಆಯಾಮಗಳಿವೆ. ಈ ಕೃತಿ ರಚನೆಯ ಉದ್ದೇಶ, ಆಶಯ, ಸಂದರ್ಭವನ್ನು ಅವರು ಹೀಗೆ ತೋಡಿಕೊಂಡಿದ್ದಾರೆ. ‘‘ಉತ್ತರಾಧಿಕಾರ, ಹಸ್ತಾಂತರ, ಅನಿಕೇತನ ಎಂಬ ಕಾದಂಬರಿಗಳನ್ನು ಬರೆದ ಮೇಲೆಯೂ ನನ್ನನ್ನು ಒಂದು ಅತೃಪ್ತಿ ಕಾಡುತ್ತಿತ್ತು. ಅದು, ಕಾಲಗರ್ಭಕ್ಕೆ ಸಂದುಹೋಗುತ್ತಿರುವ ನನ್ನ ಪರಿಸರದ ಜನಸಮುದಾಯಗಳ ಒಂದು ಕಾಲದ ಬದುಕು ಮತ್ತು ಆ ಬದುಕಿನ ಮೂಲಕ ಅನಾವರಣವಾದ ಸತ್ಯಗಳನ್ನು ಗ್ರಹಿಸಲು ಬೇಕಾದ ಅಂತರ ಮತ್ತು ಸಾಮೀಪ್ಯ ನನಗೆ ಇರುವ ನಂಬಿಕೆಯಿಂದ ಆ ಅನುಭವಕ್ಕೆ ಸಿಕ್ಕಿದ ಸತ್ಯಗಳನ್ನು ದಾಖಲಿಸಲು ಈ ಕಾದಂಬರಿಯನ್ನು ಬರೆದೆ’’ ಎಂದು ಹೇಳಿಕೊಂಡಿದ್ದಾರೆ.

‘ಮೂರು ಹೆಜ್ಜೆ ಭೂಮಿ’ ಒಂದು ಸಾಮಾಜಿಕ ಕಾದಂಬರಿ. ಮೂರು ಮುಖ್ಯ ಅಧ್ಯಾಯ ಹಾಗೂ ಅನೇಕ ಉಪ ಅಧ್ಯಾಯಗಳಲ್ಲಿ, 274 ಪುಟಗಳಲ್ಲಿ ಈ ಕಾದಂಬರಿ ಬೆಳೆದು ನಿಂತಿದೆ. ದಕ್ಷಿಣ ಕನ್ನಡ ಜಿಲ್ಲೆ ತುಳುನಾಡು, ಪರಶುರಾಮ ಸೃಷ್ಟಿ ಎಂದೇ ಪ್ರಸಿದ್ಧವಾಗಿದೆ. ಇಲ್ಲಿನ ಇನ್ನೊಂದು ನಂಬಿಕೆ ಬಲಿ ಚಕ್ರವರ್ತಿ ಈ ನಾಡನ್ನು ಆಳಿದವನು ಎನ್ನುವುದು. ಪ್ರಸ್ತುತ ಕಾದಂಬರಿ ಶುರುವಾಗುವುದೇ ತುಳುವಿನಲ್ಲಿರುವ ಬಲೀಂದ್ರ ಪಾಡ್ಡನದ ಕೆಲವು ಸಾಲುಗಳ ಪ್ರಸ್ತಾಪದಿಂದ. ಈ ಕಾದಂಬರಿಯಲ್ಲಿ ಬಲಿಯ ಪುರಾಣವನ್ನು ಸಾಂಕೇತಿಕವಾಗಿ, ಅಷ್ಟೇ ಔಚಿತ್ಯಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಈ ಕಾದಂಬರಿಯಲ್ಲಿನ ಗ್ರಾಮವೊಂದರ ಮೂರು ಭಾಗಗಳಾದ ಮಾದಯ ಕುಮೆರಿ, ಗಂಪದ ಬಯಲು ಹಾಗೂ ಕಿರ್ಸನ್ ಪದವುಗಳನ್ನು ಕಂಪೆನಿಯೊಂದು ಮೂರು ತ್ರಿವಿಕ್ರಮ ಹೆಜ್ಜೆಗಳಲ್ಲಿ ವಶಪಡಿಸಿಕೊಳ್ಳಲು ಮುಂದಾಗಿ ವಿಫಲವಾದ ಕಥನವಿಲ್ಲಿದೆ.

ಈ ಕಾದಂಬರಿಯಲ್ಲಿ ತುಳುನಾಡಿನ ಜನರ ಜೀವನ ಕ್ರಮ, ಸಹಬಾಳ್ವೆ ಮತ್ರು ದೈವ–ದೇವರುಗಳ ವೈವಿಧ್ಯಮಯ ಆರಾಧನೆಗಳ ವಿವರವೂ ವಿಸ್ತೃತವಾಗಿ ದಾಖಲಾಗಿದೆ. ಬದುಕಿನ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮಗಳು ಇಲ್ಲಿ ಸೊಗಸಾಗಿ ಪಡಿಮೂಡಿದೆ. ವರ್ಣರಂಜಿತವಾದ ಸ್ಥಳೀಯ ಸಂದರ್ಭಗಳಿಂದ ಚಿಮ್ಮುವ ಕಥಾನಕಗಳಿರುವುದು ಈ ಕಾದಂಬರಿಯ ಧನಾತ್ಮಕ ಅಂಶ.

ಗುಲ್ಲಿಯ ಲೋಕ ಸಂಚಾರ, ತಳವರ್ಗದಿಂದ ಬಂದ ಚುಕುಡನ ಅದಮ್ಯ ಜೀವನೋತ್ಸಾಹ, ಇದ್ದುದನ್ನು ಬಿಟ್ಟು ಹೊರಟ ಕಥಾನಾಯಕ ಆಮಕೃಷ್ಣ, ಕಂಪೆನಿ ಬಂದು ಹೋದ ಕಥಾನಕ– ಹೀಗೆ ಗ್ರಾಮೀಣ ಪರಿಸರ ಮತ್ತು ಜೀವನಕ್ರಮದ ಹತ್ತಾರು ಒಳಸುಳಿಗಳು ಹಾಗೂ ಅವುಗಳ ಸೂಕ್ಷ್ಮಸಂಬಂಧಗಳ ಸಮರ್ಥ ವಿಶ್ಲೇಷಣೆಗಳಿಂದ ಕಾದಂಬರಿ ಸ್ವಾರಸ್ಯಪೂರ್ಣವೂ ವಾಚನೀಯವೂ ಆಗಿದೆ. ದಟ್ಟವಾದ ಅನುಭವ ಸಾಮಗ್ರಿ ಮತ್ತು ವಿಶಿಷ್ಟವಾದ ತಂತ್ರಗಳಿಂದ ಈ ಕಾದಂಬರಿ ಓದುಗರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ತುಳುನಾಡಿನ ವಿಭಿನ್ನ ಬಗೆಯ ಆರಾಧನ ಕ್ರಮಗಳ ಒಂದು ಒಳನೋಟ ಸಾಧ್ಯವಾಗುವಂತೆ ಮಾಡಿರುವುದರಿಂದ ಈ ಕಾದಂಬರಿಗೆ ಹೊಸ ಆಯಾಮವೂ ಪ್ರಾಪ್ತವಾಗಿದೆ.

‘ಮೂರು ಹೆಜ್ಜೆ ಭೂಮಿ’ ಕನ್ನಡದ ಸಶಕ್ತ ಪ್ರಾದೇಶಿಕ ಕಾದಂಬರಿಗಳಲ್ಲಿ ಒಂದು. ಗ್ರಾಮೀಣ ಬದುಕಿನ ಸೊಗಡು ಈ ಕೃತಿಯಲ್ಲಿ ಮಿಂಚಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹು ಸಂಸ್ಕೃತಿ, ಬಹುಭಾಷೆಗಳ ಸಹಬಾಳ್ವೆ, ಸೌಹಾರ್ದದ ಬದುಕು ಈ ಕಾದಂಬರಿಯಲ್ಲಿ ಚೆನ್ನಾಗಿ ಮೈಪಡೆದಿದೆ. ಈ ಕಾದಂಬರಿಗೆ ಸಾಹಿತ್ಯಿಕ ಮೌಲ್ಯದಂತೆ ಸಾಂಸ್ಕೃತಿಕ ಮೌಲ್ಯವೂ ಇದೆ.

ಜನಾರ್ದನ ಭಟ್ರ ಕಾದಂಬರಿ ಒಂದು ವಾಸ್ತವವಾದಿ ಕಾದಂಬರಿಯೂ ಹೌದು. ಪ್ರಸ್ತುತ ಸರ್ಕಾರಗಳು ರೈತರ ಭೂಮಿಯನ್ನು ಎಗ್ಗಿಲ್ಲದೆ ಖರೀದಿಸುತ್ತ, ಒತ್ತಾಯದ ಭೂಮಸೂದೆ ಕಾಯಿದೆಯನ್ನು ಹೇರಲು ಹೊರಟಿರುವ ಸಂಘರ್ಷದ ಈ ಕಾಲಘಟ್ಟದಲ್ಲಿ, ಕಾದಂಬರಿ ವಾಸ್ತವದ ಮೇಲೆ ಬೆಳಕು ಹಾಯಿಸುತ್ತಿದೆ. ಬಂಡವಾಳ ಹೂಡಿಕೆ, ಉದ್ಯಮದ ನೆಪದಲ್ಲಿ ಪ್ರಭಾವಶಾಲಿ ವ್ಯಕ್ತಿಗಳು ಹೇಗೆ ಹಳ್ಳಿ ಹಳ್ಳಿಗಳನ್ನು ಖರೀದಿಸಿ, ಅಲ್ಲಿನ ಜನರನ್ನು ಒಕ್ಕಲೆಬ್ಬಿಸಿ ಪರಿಸರ, ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂಬುದರ ವಿವರಣೆಯೂ ಕಾದಂಬರಿಯಲ್ಲಿದೆ. ಸ್ಥಳೀಯ ಜನಜೀವನದ ಆಗುಹೋಗುಗಳ ಜತೆಗೆ ಸಮಕಾಲೀನ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿದ್ಯಮಾನ, ನಾನಾ ಬಗೆಯ ಸಮಸ್ಯೆಗಳ ಕುರಿತೂ ಕಾದಂಬರಿ ಮಾತನಾಡುತ್ತದೆ. ನಮ್ಮ ಸಮಕಾಲೀನ ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುತ್ತ ವಿಭಿನ್ನ ಸತ್ಯಗಳನ್ನು ಬದುಕಿನ ವಿವರಗಳನ್ನು ಅವುಗಳ ಸಂರ್ಕೀಣತೆಯೊಂದಿಗೆ ನಿರುದ್ವಿಗ್ನವಾಗಿ ಚಿತ್ರಿಸಲು ಸಾಧ್ಯವಾಗಿರುವುದು ಈ ಕಾದಂಬರಿಯ ವಿಶೇಷ.

ಮನುಷ್ಯ ತನ್ನ ಪ್ರಗತಿಗಾಗಿ ಇಟ್ಟ ಪ್ರತಿಯೊಂದು ಹೆಜ್ಜೆಯೂ ಸಂಸ್ಕೃತಿಯ ಭಾಗವೇ ಆಗಿದೆ. ಮನುಷ್ಯ ಸಂಸ್ಕೃತಿಯ ಉತ್ಪಾದಕನೂ ಹೌದು. ಸಂಸ್ಕೃತಿ ಒಂದು ಜನಾಂಗದ ಜೀವಾಳ. ಅದನ್ನು ತೊರೆದು ಜನ ಬದುಕಲಾರರು. ಸಂಸ್ಕೃತಿಯಿಂದಲೇ ಜೀವನಕ್ಕೆ ಚೆಲುವು ಬರುತ್ತದೆ. ಮನುಷ್ಯ ಕಾಡಿನಲ್ಲಿ ಬೇಟೆಯಾಡುವುದನ್ನು ಬಿಟ್ಟು ಒಂದೆಡೆ ನೆಲೆಸಿ ಭೂಮಿಯನ್ನು ಹದಮಾಡಿ ಬೆಳೆಯನ್ನು ತೆಗೆದು ಸಂಸ್ಕೃತಿಯನ್ನು ಬೆಳೆಸಿದ್ದು ಈಗ ಇತಿಹಾಸ.

ಇದೆಲ್ಲ ಸಾಧ್ಯವಾದುದು ಭುವನದ ಭಾಗ್ಯದಿಂದ. ನೆಲದಿಂದ ಸಂಸ್ಕೃತಿ; ನಾಗರೀಕತೆ ಹರಡಿತು. ಸಂಸ್ಕೃತಿ ಭೂಮಿಗೀತವೂ ಹೌದು. ಭೂಮಿಯನ್ನು ಕಳೆದುಕೊಂಡರೆ ಅಸ್ಮಿತೆಗೆ ಧಕ್ಕೆ ತಪ್ಪಿದ್ದಲ್ಲ ಎಂಬ ಸೂಚನೆಯೂ ಇಲ್ಲಿ ಬಂದಿದೆ. ಕಾದಂಬರಿಯ ಆರಂಭದಲ್ಲೇ ಬಂದಿರುವ ತುಳು ಬಲೀಂದ್ರ ಪಾರ್ದನದಲ್ಲಿ ಇದರ ಸೂಚನೆಯಿದೆ. ಬಲೀಂದ್ರನಿಂದ ಭೂಮಿದಾನ ಬೇಡಿದ ಮಾಣಿಗಳು ಅದರ ಉಪಯೋಗದ ಬಗೆಗೆ ಕೊಡುವ ಉತ್ತರ ಬಹು ಮಾರ್ಮಿಕವಾಗಿದೆ. ಆಧುನಿಕ ಶಿಕ್ಷಣ ಪಡೆದು, ಒಲ್ಲದ ಮನಸ್ಸಿನಿಂದ ಪೂಜಾಕೈಂಕರ್ಯದಲ್ಲಿ ನಿರತನಾಗಿರುವ ಈ ಕಥಾನಕದ ಸೂತ್ರಧಾರಿ ರಾಮಕೃಷ್ಣ– ‘ಕಲಿತವನಾದ ತನಗೇಕೆ ಬದುಕನ್ನು ತೀವ್ರವಾಗಿ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಚಡಪಡಿಸುವುದು ಇಂದಿನ ಯುವ ಜನಾಂಗದ ತಲ್ಲಣವೂ ಪ್ರಶ್ನೆಯೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.