ನಾಳೆ ನನ್ನ ಹುಟ್ಟಿದ ಹಬ್ಬ. ನನಗೆ ರಜೆ ಬೇಕು... ಹೀಗೆ ಆ ಹುಡುಗ ಒಂದು ಚೀಟಿಯಲ್ಲಿ ಬರೆದು ಕೊಟ್ಟ. ಅದನ್ನು ಓದಿದ ವ್ಯಕ್ತಿ ಆತನ ಕೈಕುಲುಕಿ ನಾಳೆ ನಿನಗೆ ರಜೆ ಎಂದು ಸನ್ನೆ ಮಾಡಿಯೇ ಹೇಳಿದ. ಅಲ್ಲಿ ಮಾತು ಇರಲಿಲ್ಲ. ಆದರೆ ಅವರ ಹೃದಯಗಳು ಮಾತನಾಡಿಕೊಂಡಿದ್ದವು.

ಇನ್ನೊಮ್ಮೆ ನನಗೆ ಮಗು ಹುಟ್ಟಿದೆ, ಗಂಡು ಮಗು ಎಂದು ಮತ್ತೊಂದು ಚೀಟಿ ಆ ಕಂಪನಿ ವ್ಯವಸ್ಥಾಪಕರ ಬಳಿ ಬಂತು. ಅದನ್ನು ಓದಿದ ವ್ಯವಸ್ಥಾಪಕ ಚೀಟಿಯನ್ನು ಕೊಟ್ಟ ವ್ಯಕ್ತಿಯನ್ನು ಅಭಿನಂದಿಸಿ ಎಲ್ಲರಿಗೂ ಸಿಹಿ ಹಂಚುವಂತೆ ಸನ್ನೆ ಮಾಡಿದ. ಆತನೂ ಸಂತೋಷದಿಂದಲೇ ಒಪ್ಪಿಕೊಂಡ. ಆಗಲೂ ಅಲ್ಲಿ ಮಾತು ಇರಲಿಲ್ಲ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ವಲಯದಲ್ಲಿರುವ ಆರ್ಇಐ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಇಂಥ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಏಕೆಂದರೆ ಈ ಕಂಪನಿಯಲ್ಲಿ `ಮಾತು ಬಾರದ~ 25ಕ್ಕೂ ಹೆಚ್ಚು ಮಂದಿ ಕೆಲಸಗಾರರಿದ್ದಾರೆ. ಕಳೆದ 10-12 ವರ್ಷಗಳಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಜೋಡಿಸಿ ಕೊಡುವ ಉದ್ಯಮದಲ್ಲಿ ನಿರತವಾಗಿರುವ ಈ ಸಂಸ್ಥೆ ಸದ್ದಿಲ್ಲದೇ ಹೃದಯಗಳನ್ನು ಬೆಸೆಯುವ ಕೆಲಸವನ್ನೂ ಮಾಡುತ್ತಿದೆ.

ವಿಶ್ವದ ಬೇರೆ ಬೇರೆ ಪ್ರತಿಷ್ಠಿತ ಕಂಪನಿಗಳಿಗೆ ಎಲೆಕ್ಟ್ರಾನಿಕ್ಸ್ ಕಾಂಪೋನೆಂಟ್ಗಳನ್ನು ಜೋಡಿಸುವ ಕೆಲಸದಲ್ಲಿ ನಿರತವಾಗಿರುವ ಈ ಕಂಪನಿಯಲ್ಲಿ 350ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಕಿವಿ ಕೇಳದ, ಮಾತನಾಡಲು ಬಾರದ ಹಲವು ಮಂದಿ ಇದ್ದಾರೆ. ದೈಹಿಕ ಅಂಗವೈಕಲ್ಯಕ್ಕೆ ಈಡಾಗಿರುವವರೂ ಇಲ್ಲಿ ದುಡಿಯುತ್ತಿದ್ದಾರೆ. ತಮ್ಮ ಅನ್ನವನ್ನು ತಾವೇ ಸಂಪಾದಿಸಿಕೊಳ್ಳುತ್ತಾ ಹೆತ್ತವರ ಮುಖದಲ್ಲಿ ಮುಗುಳ್ನಗೆ ಮೂಡಿಸಿದ್ದಾರೆ.

ಆರ್ಇಐ ಎಲೆಕ್ಟ್ರಾನಿಕ್ಸ್ ಕಂಪನಿ ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಎಲ್ಇಡಿ ಬಲ್ಬ್ಗಳನ್ನು ಉತ್ಪಾದಿಸುವ ಕೆಲಸದಲ್ಲಿಯೂ ನಿರತವಾಗಿದೆ. ಈ ಕೆಲಸದಲ್ಲಿ ಅಂಗವಿಕಲರು ತೊಡಗಿಸಿಕೊಂಡಿದ್ದಾರೆ. 6 ಮಹಿಳೆಯರೂ ಸೇರಿದಂತೆ 20 ಮಂದಿ ಕಿವಿ ಕೇಳದ ಮತ್ತು ಮಾತು ಬಾರದವರೂ ಇದ್ದಾರೆ.

`ಕೆಲಸದಲ್ಲಿ ಮಾತ್ರ ಇವರು ಇತರೆ ಸಾಮಾನ್ಯ ಕಾರ್ಮಿಕರಿಗಿಂಥ ಯಾವುದೇ ರೀತಿಯಲ್ಲಿಯೂ ಕಡಿಮೆ ಇಲ್ಲ. ಬೇರೆಯವರ ಕೆಲಸದಲ್ಲಿ ನ್ಯೂನತೆ ಹುಡುಕಬಹುದು. ಆದರೆ ಇವರ ಕೆಲಸದಲ್ಲಿ ಯಾವುದೇ ತಪ್ಪು ಹುಡುಕುವುದು ಅಸಾಧ್ಯ. ತಮಗೆ ವಹಿಸಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುವ ಜಾಯಮಾನ ಅವರದ್ದು~ ಎನ್ನುತ್ತಾರೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ರಾಮಸ್ವಾಮಿ.

`ಅಂಗವೈಕಲ್ಯವಿರುವ ವ್ಯಕ್ತಿಗಳಿಗೆ ಕೆಲಸ ಕೊಡಬೇಕು ಎನ್ನುವ ಆಲೋಚನೆ ನಿಮಗೆ ಬಂದಿದ್ದು ಹೇಗೆ?~ ಎಂಬ ಪ್ರಶ್ನೆಯನ್ನು ರಾಮಸ್ವಾಮಿ ಅವರ ಮುಂದಿಟ್ಟರೆ ಬಹಳ ಹಿಂದಿನ ನೆನಪನ್ನು ಅವರು ಹಂಚಿಕೊಳ್ಳುತ್ತಾರೆ.

`ನಮ್ಮ ಸಂಬಂಧಿಯೊಬ್ಬ ಕಿವುಡ-ಮೂಕನಾಗಿದ್ದ. ಆತ ಜಾವಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಆ ಕಂಪನಿ ಮುಚ್ಚಿ ಹೋದ ನಂತರ ಆತನಿಗೆ ಎಲ್ಲಿಯೂ ಕೆಲಸ ಸಿಗಲಿಲ್ಲ. ಅಲ್ಲದೆ ಇದೇ ರೀತಿಯ ತೊಂದರೆ ಇರುವ ಇನ್ನೂ 5-6 ಮಂದಿ ಆತನ ಜೊತೆಗಿದ್ದರು. ಎಲ್ಲರೂ ಜಾವಾ ಕಂಪನಿ ಮುಚ್ಚಿದ ನಂತರ ನಿರುದ್ಯೋಗಿಗಳಾದರು.

ಅವರೆಲ್ಲಾ ನಮ್ಮ ಬಳಿ ಬಂದು ಕೆಲಸ ಕೇಳಿದರು. ಏಕೆ ಇವರಿಗೆ ಕೆಲಸ ನೀಡಬಾರದು ಎಂದುಕೊಂಡೆವು. ಅವರು ಇತರೆ ಕಾರ್ಮಿಕರಂತೆಯೇ ಉತ್ತಮವಾಗಿ ಕೆಲಸ ಮಾಡಿದರು. ಹೀಗೆ ನಮ್ಮಲ್ಲಿ ಬರುವ ಅಂಗವಿಕಲರಿಗೆ ಉದ್ಯೋಗ ನೀಡುವುದನ್ನು ಅಭ್ಯಾಸ ಮಾಡಿಕೊಂಡೆವು. ಇದು ನಮಗೆ ತೃಪ್ತಿಯನ್ನೂ ನೀಡಿತು~ ಎನ್ನುತ್ತಾರೆ.

ರಾಮಸ್ವಾಮಿ ಅವರ ತಂದೆ 1968ರಲ್ಲಿಯೇ ರೇಡಿಯೋ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ (ಆರ್ಇಐ) ಆರಂಭಿಸಿದರು. ಹಲವು ವರ್ಷಗಳ ನಂತರ ಅದರ ವಹಿವಾಟು ಕಡಿಮೆ ಆಯಿತು. 1987ರಲ್ಲಿ ರಾಮಸ್ವಾಮಿ ಅದನ್ನು ವಹಿಸಿಕೊಂಡು ಬೇರೆ ಬೇರೆ ರೀತಿಯ ಉದ್ಯಮಗಳನ್ನು ನಡೆಸಿದರು. ಆದರೆ ಅವರ ಕೈಹಿಡಿದಿದ್ದು ಮಾತ್ರ ಎಲೆಕ್ಟ್ರಾನಿಕ್ಸ್ ಉದ್ಯಮ. 2000ದಲ್ಲಿ ಆರ್ಇಐ ಎಲೆಕ್ಟ್ರಾನಿಕ್ಸ್ ಕಂಪನಿ ಆರಂಭಿಸಿದಾಗಲೂ ಅಂಗವಿಕಲರಿಗೆ ಉದ್ಯೋಗ ಕೊಡುವ ಕಾಯಕ ಬಿಡಲಿಲ್ಲ.

ಎಲ್ಇಡಿ ಬಲ್ಬ್ ತಯಾರಿಕೆಯಲ್ಲಿಯೂ ಅಂಗವಿಕಲರು ಗಣನೀಯ ಕೆಲಸವನ್ನು ಮಾಡುತ್ತಿದ್ದಾರೆ. ಕಂಪನಿಯಲ್ಲಿರುವ ಅಂಗವಿಕಲರು ಇತರ ಎಲ್ಲ ಸಿಬ್ಬಂದಿಗಳ ಜೊತೆ ಸಂತೋಷದಿಂದ ಕೆಲಸ ಮಾಡುತ್ತಾರೆ. ಅಲ್ಲದೆ ಅವರ ತಂದೆ-ತಾಯಿಗೂ ಸಾರ್ಥಕ್ಯದ ಭಾವ ಮೂಡಿಸಿದ್ದಾರೆ. ಆರ್ಇಐ ಎಲೆಕ್ಟ್ರಾನಿಕ್ಸ್ ಕಂಪನಿ ತಯಾರಿಸುವ ಎಲ್ಇಡಿ ಬಲ್ಬ್ಗಳೂ ಕೇವಲ ಬಲ್ಬ್ ಹಾಕಿದ ಮನೆಗಳಲ್ಲಿಯಷ್ಟೇ ಬೆಳಕು ಹೆಚ್ಚಿಸುವುದಿಲ್ಲ. ಹಲವಾರು ಅಂಗವಿಕಲರ ಮನೆಯಲ್ಲಿಯೂ ಬೆಳಕನ್ನು ಮೂಡಿಸಿದೆ.

ಈ ಕಂಪನಿ ಐಎಸ್ಒ 9001-2000 ಪ್ರಮಾಣ ಪತ್ರ ಪಡೆದುಕೊಂಡಿದೆ. ಯುಎಲ್, ಸಿಎಸ್ಎಗಳಿಂದ ಪ್ರಮಾಣೀಕೃತಗೊಂಡಿದೆ. ಸಿ-ಡಿಒಟಿ ಮತ್ತು ಬಿಎಎಲ್ಗಳಿಂದ ಮಾನ್ಯತೆಯನ್ನೂ ಪಡೆದುಕೊಂಡಿದೆ. ಆದರೆ ಈ ಎಲ್ಲ ಮಾನ್ಯತೆಗಳಿಗಿಂತ ಅಂಗವಿಕಲ ಮಕ್ಕಳ ತಂದೆ-ತಾಯಿಯರು ನೀಡಿದ ಮಾನ್ಯತೆಯ ಮೌಲ್ಯವೇ ಹೆಚ್ಚಾಗಿದೆ.

`ನಮ್ಮ ಬಳಿಗೆ ಬಂದ ಎಲ್ಲ ಅಂಗವಿಕಲರಿಗೂ ಕೆಲಸ ನೀಡುವುದು ಅಸಾಧ್ಯ. ಆದರೆ ನಮ್ಮ ಅಗತ್ಯಕ್ಕೆ ತಕ್ಕಂತೆ ಅಂಗವಿಕಲರನ್ನು ತರಬೇತಿಗೊಳಿಸಿ, ಅವರಿಗೂ ಸೂಕ್ತ ವೇತನವನ್ನು ನೀಡಿ ನಮ್ಮ ಕಂಪೆನಿಯ ಅಭಿವೃದ್ಧಿಯಲ್ಲಿ ಅವರೂ ಭಾಗಿಯಾಗುವಂತೆ ಮಾಡಿಕೊಂಡಿದ್ದು ನಮಗೆ ಧನ್ಯತೆಯ ಭಾವ ಮೂಡಿಸಿದೆ.

ವೇತನ ಮತ್ತು ಇತರೆ ಯಾವುದೇ ಸೌಲಭ್ಯದಲ್ಲಿ ಇತರರಿಗೂ ಇವರಿಗೂ ಯಾವುದೇ ವ್ಯತ್ಯಾಸ ಇಲ್ಲ. ತರಬೇತಿ ಕೊಟ್ಟರೆ ಈ ಯುವಕರು ಯಾವುದೇ ಕೆಲಸವನ್ನು ಮಾಡಬಲ್ಲರು ಎನ್ನುವುದಕ್ಕೆ ನಮ್ಮಲ್ಲಿ ಇರುವ ವಿಶೇಷ ನೌಕರರೇ ಸಾಕ್ಷಿ.

ಅಂಗವೈಕಲ್ಯದಿಂದ ತಮ್ಮ ಮಕ್ಕಳು ಸಮಾಜದಲ್ಲಿ ನಿರುಪಯುಕ್ತವಾಗುತ್ತವೆ ಎಂಬ ಭಯವನ್ನು ಹೊಂದಿದ್ದ ಪಾಲಕರು ಈಗ ತಮ್ಮ ಮಕ್ಕಳು ಇತರರಿಗೆ ಸರಿಸಮಾನವಾಗಿ ದುಡಿಯುವುದನ್ನು ಮತ್ತು ಅಷ್ಟೇ ಸಂಬಳ ಪಡೆಯುವುದನ್ನು ನೋಡಿ ಧನ್ಯರಾಗುತ್ತಿದ್ದಾರೆ. ಅಂಥ ಅವಕಾಶ ನಮಗೆ ಸಿಕ್ಕಿದ್ದಕ್ಕೆ ನಾವೂ ಧನ್ಯರಾಗಿದ್ದೇವೆ ಎನ್ನುತ್ತಾ ಕ್ಷಣ ಬಾವುಕರಾದರು ರಾಮಸ್ವಾಮಿ.

ಆರ್ಇಐ ಎಲೆಕ್ಟ್ರಾನಿಕ್ಸ್ ಸಂಸ್ಥೆ ಉತ್ಪಾದಿಸುವ ಎಲ್ಇಡಿ ಬಲ್ಬ್ಗಳು ಬೆಳಕನ್ನು ಮಾತ್ರ ನೀಡುವುದಿಲ್ಲ, ಹಲವರಿಗೆ ದಾರಿದೀಪವೂ ಆಗಿವೆ. ಕಂಪನಿ ವಿಳಾಸ: ಆರ್ಇಐ ಎಲೆಕ್ಟ್ರಾನಿಕ್ಸ್, ನಂ 323/ಬಿ ಹೆಬ್ಬಾಳ ಕೈಗಾರಿಕಾ ವಲಯ, ಹೆಬ್ಬಾಳ, ಮೈಸೂರು-570018.

ದೂರವಾಣಿ 0821-4001800. ಇ-ಮೇಲ್ rei@reielectronics.com

(ಚಿತ್ರಗಳು: ಎಚ್.ಜಿ ಪ್ರಶಾಂತ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.