ಒಂದೇ ಸಮನೆ ಗುಂಯ್ ಗುಡುವ ಆಂಬ್ಯುಲೆನ್ಸ್ ಸದ್ದು. ಶ್ವೇತವಸ್ತ್ರ ತೊಟ್ಟ ನಾಲ್ಕಾರು ಮಂದಿ ಆ ಸದ್ದು ಬಂದೆಡೆಗೆ ವೀಲ್ಚೇರ್ ತಳ್ಳುತ್ತಾ ಓಡಿದರು. ಆಂಬ್ಯುಲೆನ್ಸ್ನಿಂದ ರೋಗಿಯ ವರ್ಗಾವಣೆ, ಅದೇ ವೇಗದಲ್ಲಿ ಐಸಿಯು ಕೊಠಡಿಗೆ...

ಹೀಗೆ ಸದಾ ಆತಂಕದ ವಾತಾವರಣದಲ್ಲೇ ಕಳೆದುಹೋಗುವ ಮಂದಿಗಿಷ್ಟು `ರಿಲಾಕ್ಸ್~ ನೀಡಲೆಂದೇ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಕಳೆದ ನವೆಂಬರ್ ತಿಂಗಳಲ್ಲಿ ಆರಂಭಗೊಂಡ ಈ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಹಾಗೂ ರೋಗಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

`ಇದು ಬೆಂಗಳೂರಿನ ಮಟ್ಟಿಗಂತೂ ಹೊಸತು. ಇಲ್ಲಿನ ಯಾವುದೇ ಆಸ್ಪತ್ರೆಯಲ್ಲಿ ಇಷ್ಟು ವಿಶಾಲವಾದ ಪುಸ್ತಕ ಭಂಡಾರವಿಲ್ಲ. ಗ್ರಂಥಾಲಯದ ನಿರ್ದೇಶಕ ವೆಂಕಟೇಶ್ ವೈಯಕ್ತಿಕ ಕಾರಣಕ್ಕೆ ಆಸ್ಪತ್ರೆಗೆ ಭೇಟಿ ನೀಡಿದಾಗ `ಇಲ್ಲಿಗೆ ನಾನೂ ಏನಾದರೂ ಕೊಡುಗೆ ನೀಡಬೇಕು~ ಎಂದು ಆಶಯ ವ್ಯಕ್ತಪಡಿಸಿದ್ದರು.

ಇಲ್ಲಿ ಯಾಕೆ ಸಾರ್ವಜನಿಕ ಗ್ರಂಥಾಲಯ ತೆರೆಯಬಾರದು ಎಂಬ ಅವರ ಪ್ರಶ್ನೆ ನನಗೂ ಸರಿಯೆನಿಸಿತು. ತಡ ಮಾಡುವುದು ಬೇಡವೆಂದು ಅದೇ ಕ್ಷಣ ಸೂಕ್ತ ಕೊಠಡಿ ಹುಡುಕಲು ಹೊರಟೆವು. ಫುಡ್ಕೋರ್ಟ್ ಎದುರು ಗೋದಾಮಾಗಿದ್ದ ಕೊಠಡಿಯನ್ನು ಖಾಲಿ ಮಾಡಿ ತಿಂಗಳೊಳಗೆ ಪುಸ್ತಕ ಭಂಡಾರವನ್ನಾಗಿಸಿದೆವು~ ಎನ್ನುವಾಗ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕಣ್ಣಲ್ಲಿ ಹೊಳಪು.

`ರಕ್ತಪರೀಕ್ಷೆ, ಸ್ಕ್ಯಾನಿಂಗ್, ಎಕ್ಸ್ರೇ ಮೊದಲಾದ ಪರೀಕ್ಷೆಗಳಿಗೆ ಒಳಪಡುವ ರೋಗಿಗಳು ವರದಿಗಾಗಿ ಕನಿಷ್ಠ ಒಂದೂವರೆ ತಾಸು ಕಾಯಬೇಕಾಗುತ್ತದೆ. ಆಗೆಲ್ಲಾ ಕಾರಿಡಾರ್ನಲ್ಲಿ ಅಡ್ಡಾದಿಡ್ಡಿ ನಿಂತು ಹರಟೆ ಹೊಡೆಯುವುದು ಕಂಡು ಬೇಸರವಾಗುತ್ತಿತ್ತು. ಇದರಿಂದ ಆಸ್ಪತ್ರೆಯ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದೂ ಇದೆ.

ಅದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಗ್ರಂಥಾಲಯ ತೆರೆಯಲು ಅನುಮತಿ ನೀಡಿದೆ. ಹಿಂದೆ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಗ್ರಂಥಾಲಯ ಈಗ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗೆ, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿದೆ.

ಸದಾ ರೋಗಿಯ ಕಾಯಿಲೆ ಮತ್ತು ಅದರ ತೀವ್ರತೆ ಕುರಿತು ಚಿಂತಿಸುವ ಕುಟುಂಬವರ್ಗದವರಿಗೂ ತುಸು ಮಟ್ಟಿನ ಸಾಂತ್ವನ ಸಿಗಲಿ, ಒಂದೇ ಬಗೆಯ ಚಿಂತನೆಯಿಂದ ಹೊರಬರಲಿ ಎಂಬುದಷ್ಟೇ ನಮ್ಮ ಉದ್ದೇಶ~ ಎಂದು ವಿವರಿಸುತ್ತಾರವರು.

ಆರಂಭಗೊಂಡ ಮೂರು ತಿಂಗಳ ಅಂತ್ಯಕ್ಕೆ 181 ಮಂದಿ ಸದಸ್ವತ್ವ ಪಡೆದುಕೊಂಡಿದ್ದಾರೆ. ಪ್ರತಿನಿತ್ಯ 200-300 ಮಂದಿ ದಿನಪತ್ರಿಕೆ, ನಿಯತಕಾಲಿಕಗಳ ಓದಿಗೆ ಭೇಟಿ ನೀಡುತ್ತಾರೆ. ಪ್ರಸ್ತುತ ಇಲ್ಲಿ 6000 ಪುಸ್ತಕಗಳು ಲಭ್ಯವಿದ್ದು ಸಾಯಿಸುತೆ, ರಾಧಾದೇವಿ ಮೊದಲಾದವರ ಪುಸ್ತಕಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಇತ್ತೀಚೆಗೆ ನವಕರ್ನಾಟಕ ಪ್ರಕಾಶನ ಸಂಸ್ಥೆಯು ಆರೋಗ್ಯ, ವೈದ್ಯಶಾಸ್ತ್ರ, ಹೃದಯ ಸಂಬಂಧಿ ಕಾಯಿಲೆ ಹಾಗೂ ಡಯಟ್ ಬಗ್ಗೆ ಮಾಹಿತಿ ನೀಡುವ 175 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಗುಲ್ಬರ್ಗ ಎನ್ಜಿಒ ಮಕ್ಕಳ, ಮಹಿಳೆಯರ ಆರೋಗ್ಯ ಹಾಗೂ ಆಹಾರಪದ್ಧತಿ ಕುರಿತ 170 ಪುಸ್ತಕಗಳನ್ನು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮುಖ್ಯಮಂತ್ರಿ ಚಂದ್ರು 50 ಪುಸ್ತಕಗಳನ್ನು ನೀಡಿದ್ದಾರೆ.

ಪುಸ್ತಕಗಳ ನಿರ್ವಹಣೆ ಹಾಗೂ ದಿನಪತ್ರಿಕೆ ಓದುಗನಿಗೆ ಸಮರ್ಪಕ ಜಾಗ ನೀಡುವುದು ಸಾಧ್ಯವಾಗುತ್ತಿಲ್ಲ. ಅದರೊಂದಿಗೆ ಓದುಗರ ನಿರೀಕ್ಷಣಾ ಪುಸ್ತಕಗಳ ಪಟ್ಟಿಯೂ ಬೆಳೆಯುತ್ತಿದೆ. ಎಂ.ಡಿ. ಓದುವ ವಿದ್ಯಾರ್ಥಿಗಳು ಪ್ರತಿನಿತ್ಯ ಭೇಟಿ ನೀಡಿ ವೈದ್ಯಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ.

ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಓದಲು ಕಾದಂಬರಿ ಪುಸ್ತಕ ಒಯ್ಯುವುದುಂಟು. ಹಳೆ ಪತ್ರಿಕೆ ಸಂಗ್ರಹಿಸಿಡಲು ಇನ್ನೊಂದು ಕೊಠಡಿ ಸಿಕ್ಕರೆ ಅನುಕೂಲ ಎನ್ನುತ್ತಾರೆ ಗ್ರಂಥಾಲಯದ ಸಹಾಯಕಿ.

`ಸಾರ್ವಜನಿಕರಿಗೆ ತಿಳಿದಿಲ್ಲ~
ನಾನು ಇಲ್ಲೇ ಸಮೀಪದ ಬನ್ನೇರುಘಟ್ಟ ನಿವಾಸಿ. ಇಲ್ಲಿ ಗ್ರಂಥಾಲಯ ತೆರೆದ ಮೊದಲ ವಾರದಿಂದಲೇ ನಿಯತವಾಗಿ ಪತ್ರಿಕೆ ಓದಲು ಬರುತ್ತಿದ್ದೇನೆ. ಸ್ವಚ್ಛತೆಗೆ ಮೊದಲ ಆದ್ಯತೆ ಕೊಡುವ ಕಾರಣದಿಂದ ಹೆಚ್ಚಿನ ಮಂದಿ ಇಲ್ಲಿ ಕೂತು ಓದುವುದನ್ನು ಇಷ್ಟಪಡುತ್ತಾರೆ. ಸಾರ್ವಜನಿಕರಲ್ಲಿ ಬಹುತೇಕರಿಗೆ ಹೊಸ ಗ್ರಂಥಾಲಯದ ಬಗ್ಗೆ ಪೂರ್ಣ ಮಾಹಿತಿ ತಿಳಿದಿಲ್ಲ.
-ಲಕ್ಷ್ಮಿನಾರಾಯಣ್ ನಿವೃತ್ತ ಅಧಿಕಾರಿ

`ಎಲ್ಲರಿಗೂ ಉಪಯೋಗಿ~
ಒಮ್ಮೆ ಒಳಬಂದ ರೋಗಿ ಹಾಗೂ ಆತನ ಸಂಬಂಧಿಕನಿಗೆ ಡಿಸ್ಚಾರ್ಜ್ ಆಗುವವರೆಗೆ ಹೊರ ಹೋಗಲು ಸಾಧ್ಯವಿಲ್ಲ. ವ್ಯರ್ಥವಾಗುವ ಆ ಸಮಯವನ್ನು ಪುಸ್ತಕ ಭಂಡಾರದಲ್ಲಿ ಕಳೆಯಲು ಅವಕಾಶ ಮಾಡಿಕೊಡಲಾಗಿದೆ. ಹಿಂದೆ ಕಾರ್ಡಿಯಾಲಜಿಗೆ ಸಂಬಂಧಪಟ್ಟ ಪುಸ್ತಕಗಳಷ್ಟೇ ಸಿಗುತ್ತಿದ್ದವು. ಈಗ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ಕಾದಂಬರಿಗಳೂ ಲಭ್ಯವಿರುವುದು ಸಂತಸ ನೀಡಿದೆ.
-ಎಚ್.ವಿ.ರಾಘವೇಂದ್ರ ಸ್ಟಾಫ್

`ಸಮಯ ಕಳೆಯಲು...~
ಕಳೆದ ವರ್ಷ ಸಂಬಂಧಿಕರೊಂದಿಗೆ ಇಲ್ಲಿಗೆ ಭೇಟಿ ನೀಡಿದ್ದಾಗ ಸಮಯ ಕಳೆಯುವುದೇ ಒಂದು ತಲೆನೋವಾಗಿತ್ತು. ಇಂದು ತಂದೆಯ ಹೃದಯ ಸರ್ಜರಿಗೆಂದು ಬಂದಿದ್ದೆ. ಒಬ್ಬ ನರ್ಸ್ ಮೂಲಕ ಈ ಗ್ರಂಥಾಲಯದ ಮಾಹಿತಿ ಸಿಕ್ಕಿತು. ಹುಡುಕುತ್ತಾ ಬಂದರೆ ಇಲ್ಲಿ ಸಾಕಷ್ಟು ಪುಸ್ತಕಗಳಿವೆ. ಒಂದು ವಾರ ಕಳೆಯಲು ಇಷ್ಟು ಸಾಕು.
-ಪ್ರದೀಪ್ರೋಗಿಯೊಂದಿಗೆ ಬಂದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.