ಬೆಂಗಳೂರು: ಬೆಂಗಳೂರಿನ ಚಿನ್ನಾಭರಣ ವ್ಯಾಪಾರಿಗಳ ಸಂಘವು ಆರ್ಟ್ ಆಫ್ ಜುವೆಲರಿ ಸಹಯೋಗದಲ್ಲಿ ನಗರದ ಅರಮನೆ ಮೈದಾನದಲ್ಲಿ ಇದೇ 15ರಿಂದ 18ರವರೆಗೆ ಆಭರಣಗಳ ಪ್ರದರ್ಶನ ಮೇಳ ಆಯೋಜಿಸಿದೆ.

ಬೆಸ್ಟ್ ಆಫ್ ಇಂಡಿಯಾ ಜುವೆಲರಿ ಷೋ (ಬಿಐಜೆಎಸ್) ಆಯೋಜಿಸಿರುವ ಈ ಮೊದಲ ಪ್ರದರ್ಶನದಲ್ಲಿ ಸ್ಥಳೀಯ ಮತ್ತು ಹೊರ ರಾಜ್ಯಗಳ 75 ಪ್ರದರ್ಶಕರು ಭಾಗವಹಿಸಲಿದ್ದಾರೆ. ಪ್ರದರ್ಶನದಲ್ಲಿ ಇರುವ ಒಟ್ಟು 120 ಮಳಿಗೆಗಳಲ್ಲಿನ ಆಕರ್ಷಕ ಮತ್ತು ವೈವಿಧ್ಯಮಯ ಚಿನ್ನಾಭರಣಗಳು ಖಂಡಿತವಾಗಿಯೂ ಗ್ರಾಹಕರ ಮನಗೆಲ್ಲುವ ವಿಶ್ವಾಸ ನಮಗೆ ಇದೆ ಎಂದು ಜುವೆಲರಿ ಅಸೋಸಿಯೇಷನ್ ಆಫ್ ಬೆಂಗಳೂರಿನ (ಜೆಎಬಿ) ಅಧ್ಯಕ್ಷ ಮಹೇಶ್ ಪಾಥಿ ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇಳದ ಪ್ರಚಾರ ರಾಯಭಾರಿಯಾಗಿರುವ ಚಿತ್ರ ನಟಿ ರಮ್ಯಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನ ಪ್ರಮುಖ ಚಿನ್ನಾಭರಣ ಮಾರಾಟ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಜೈಪುರ, ಮುಂಬೈ, ಕೇರಳ ಮತ್ತಿತರ ರಾಜ್ಯಗಳ ಸಂಸ್ಥೆಗಳೂ ಮಳಿಗೆ ತೆರೆಯಲಿವೆ. ಗುಣಮಟ್ಟದ ಆಭರಣಗಳನ್ನು ಖರೀದಿಸಲು ಮತ್ತು ಮೇ 6ರಂದು ಆಚರಿಸಲಾಗುವ ಅಕ್ಷಯ ತೃತೀಯ ಸಂದರ್ಭದಲ್ಲಿ ಖರೀದಿಸಲು ವಿಶಿಷ್ಟ ವಿನ್ಯಾಸದ ಮಾದರಿಗಳ ಮುಂಗಡ ಕಾದಿರಿಸಲು ಈ ಮೇಳವು ಅತ್ಯುತ್ತಮ ಅವಕಾಶ ಕಲ್ಪಿಸಲಿದೆ. ಮೇಳದ ಸಂದರ್ಭದಲ್ಲಿ ಒಟ್ಟಾರೆ ರೂ 50ರಿಂದ ರೂ 60 ಕೋಟಿಗಳಷ್ಟು ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.