ಮಂಗಳವಾರ, ಜುಲೈ 14, 2020
28 °C

ಇಂದಿನ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದಿನ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ

ಬಳ್ಳಾರಿ: ಬಡತನ, ನಿರುದ್ಯೋಗ, ಅಸ್ಪೃಶ್ಯತೆ ಮತ್ತು ಅಜ್ಞಾನ ಅಳಿಸಲು ಹುಟ್ಟಿದ ವಚನ ಸಾಹಿತ್ಯವು 21ನೇ ಶತಮಾನದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲ ಜೀವಶಕ್ತಿಯನ್ನು ತನ್ನಲ್ಲಿ ಅಡಗಿಟ್ಟುಕೊಂಡಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಅಭಿಪ್ರಾಯಪಟ್ಟರು.ನಗರದ ವೀರಶೈವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾಗತೀಕರಣದ ಭರಾಟೆಯಲ್ಲೂ ವಚನ ಸಾಹಿತ್ಯ ವೈಚಾರಿಕ, ನೈತಿಕ ಮೌಲ್ಯಗಳಿಂದ ಭ್ರಷ್ಟರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬಲ್ಲದು ಎಂದು ಅವರು ತಿಳಿಸಿದರು.ಕನ್ನಡಪರ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಜನ ಸಾಮಾನ್ಯರಲ್ಲಿ ಸಾಹಿತ್ಯ-ಸಂಸ್ಕೃತಿಯ ಸದಭಿರುಚಿಯನ್ನುಂಟು ಮಾಡುವ ಇಂಥ ಕಾರ್ಯಕ್ರಮ ಹೆಚ್ಚು ಪ್ರಸ್ತುತ ಎಂದು ಅಲ್ಲಂ ಗುರುಬಸವರಾಜ ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ, ವೀರಶೈವ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕಲ್ಲುಕಂಬ ಮಲ್ಲಿಕಾರ್ಜುನಗೌಡ, ಕೆ.ಎಂ. ಗುರುಸಿದ್ದೇಶ್, ಕಲ್ಲುಕಂಬ ಪಂಪಾಪತಿ, ಅಣ್ಣಾ ವಿರೂಪಾಕ್ಷಪ್ಪ, ಕೆ.ಮಹಾಬಲೇಶ್ವರಪ್ಪ, ಜೆ.ಸಣ್ಣಬಸವರಾಜ, ಎಚ್.ಪಂಪನಗೌಡ, ಮುಂಡಾಸದ ಮಲ್ಲಿಕಾರ್ಜುನ, ನವ ಕರ್ನಾಟಕ ಯುವಶಕ್ತಿ ಸಂಘಟನೆ ಅಧ್ಯಕ್ಷ ಕೇಣಿ ಬಸವರಾಜ, ಕಸಾಪ ಅಧ್ಯಕ್ಷ ನಿಷ್ಠಿರುದ್ರಪ್ಪ, ಡಾ.ಬಸವರಾಜ ಗದಗಿನ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.