ಊರು ಕೇರಿಯ ಜನಮನದಾಟ- ಗಣೇಶ್ ಮೇಷ್ಟ್ರುರವರ ಜೊತೆಯಲ್ಲಿ ನಾನು ಕಳೆದ ಅಮೂಲ್ಯ ಕ್ಷಣವನ್ನು `ಕಾಮನಬಿಲ್ಲು~ ಲೇಖನ ಮತ್ತೆ ನೆನಪಿಸಿದೆ. ನಾನು ಸಾಗರದ ಸ್ಪಂದನ ರಂಗ ತಂಡದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ, ಆಗ ಸ್ಪಂದನ ತಂಡದ ಪ್ರತಿಭಾ ಮೇಡಂ ಅವರಿಂದ ಗಣೇಶ್ ಮೇಷ್ಟ್ರ ಪರಿಚಯವಾಯಿತು.

ಗಣೇಶ್ ಮೇಷ್ಟ್ರು ನಮಗೆ ಯು.ಆರ್.ಅನಂತಮೂರ್ತಿಯವರ ಸೂರ್ಯನ ಕುದುರೆ ಕಥೆಯನ್ನು ನಾಟಕ ಮಾಡಿಸುತ್ತಿದ್ದರು. ಒಂದೂಂದು ದಿನ (ಹೆಚ್ಚಾಗಿ ಭಾನುವಾರ) ದಿನವಿಡಿ ನಾಟಕದ ತಾಲೀಮು ನಡೆಸುತ್ತಿದ್ದರು, ಆಗೊಂದು ದಿನ ಮದ್ಯಾಹ್ನ ಗಣೇಶ್ ಮೇಷ್ಟ್ರು ನನಗೆ ಅವರ ಮನೆಗೆ (ಸಾಗರದಿಂದ-ಹೆಗ್ಗೋಡಿಗೆ) ಕರೆದುಕೊಂಡು ಹೋಗಿದ್ದರು, ಅವರ ಮನೆಯಲ್ಲೇ ಊಟಮಾಡಿಕೊಂಡು ಪುನಃ ತಾಲೀಮಿಗೆ ಬಂದೆವು.

ಆ ದಿನಗಳಿಂದ ಗಣೇಶ್ ಮೇಷ್ಟ್ರು ಹೆಚ್ಚು ಪರಿಚಿತರಾದರು. ಅವರ ಆಲೋಚನೆ, ವಿಚಾರ,ಸ್ನೇಹಪರತೆ ಎಲ್ಲವು ನನಗೆ ಇಷ್ಟವಾಗುತಿತ್ತು. ಈ ಲೇಖನದಿಂದ ನನಗೆ ತಿಳಿದಿರದ ಅವರ ಹಲವು ಹಿನ್ನಲೆಗಳನ್ನು ತಿಳಿಸಿಕೊಟ್ಟಿದೆ, ಧನ್ಯವಾದಗಳು.
ರಿಯಾಜ್, ಹವ್ಯಾಸಿ ಕಲಾವಿದ ಸ್ಪಂದನ ತಂಡ, ಸಾಗರ

ಊರು-ಕೇರಿಯ ಹಲವು ಪ್ರದರ್ಶನಗಳನ್ನು ನಾನು ನೋಡಿದ್ದೇನೆ. ಸಿದ್ಧಲಿಂಗಯ್ಯನವರ ಈ ಆತ್ಮಕಥೆಯ ಅತ್ಯಂತ ದೊಡ್ಡ ಶಕ್ತಿಯೆಂದರೆ ಯಾವುದೇ ಕೀಳರಿಮೆಯಿಲ್ಲದೆ ತನ್ನ ಕಥೆಯನ್ನು ಹೇಳಿಕೊಂಡಿರುವುದು. ಅದನ್ನು ಅಷ್ಟೇ ಯಶಸ್ವಿಯಾಗಿ ರಂಗಕ್ಕೆ ತಂದಿರುವುದು ಗಣೇಶ್ ಅವರ ಹೆಚ್ಚುಗಾರಿಕೆ. ಅಭಿಜಾತ ಪ್ರತಿಭೆಯನ್ನು ಪರಿಚಯಿಸಿದ ಲೇಖಕ ಡಿ.ಕೆ.ರಮೇಶ್ ಹಾಗೂ `ಕಾಮನಬಿಲ್ಲು~ ತಂಡಕ್ಕೆ ಧನ್ಯವಾದಗಳು.
ಎಸ್.ಕೆ. ಬಾಲಕೃಷ್ಣ, ತುಮಕೂರು

`ಕಾಮನಬಿಲ್ಲು~ ಆರಂಭವಾದ ದಿನಗಳಿಂದಲೂ ವಾಹನಗಳ ಬಗೆಗಿನ ಲೇಖನಗಳನ್ನು ಓದುತ್ತಾ ಬಂದಿರುವೆ. ಆಂಗ್ಲ ಪತ್ರಿಕೆಗಳಿಗೆ ಸರಿಸಮನಾಗಿ ನಿಲ್ಲುವಂಥ ವಿವರ ಮತ್ತು ವಿಶ್ಲೇಷಣೆಗಳು ಈ ಲೇಖನಗಳಲ್ಲಿರುತ್ತವೆ. ಎನ್ಕೆ ಅವರು ಬರೆಯುತ್ತಿರುವ ಆಟೋ ಟೆಕ್ ಕನ್ನಡದಲ್ಲಿ ಅಪರೂಪದ್ದೆನಿಸುವ ಮಾಹಿತಿಗಳನ್ನು ನೀಡುತ್ತಿದೆ.
ಮೊಹಮ್ಮದ್ ಆಸಿಫ್, ಬೆಳಗಾವಿ

`ಕಾಮನಬಿಲ್ಲು~ ಕಂಡೊಡನೆ ನಾನು ಓದುವುದು `ನಾನು ಕಂಡ ವಿವೇಕಾನಂದ~ ಇದು ಅಪರೂಪದ್ದೂ, ಸ್ಫೂರ್ತಿದಾಯಕವೂ ಆಗಿರುವ ಅಂಕಣವಾಗಿದೆ. ಈ ವಾರದ `ಮನ್ನಣೆ ಎಂಬ ಹೊನ್ನಶೂಲ~ ತುಂಬ ವಾಸ್ತವಿಕ ಮತ್ತು ಸಾರ್ವಕಾಲಿಕ. ಅಂತೆಯೇ ~ಸೀಳ್ನುಡಿ~ ಅಂಕಣ ಕೂಡ ಸ್ವಾಗತಾರ್ಹವಾದುದು. ಕಾಮನಬಿಲ್ಲು ಹೊಸಬರಿಗಾಗಿ ಒಂದು ಅಂಕಣ ಮೀಸಲಿಡಲು ಸಾಧ್ಯವೇ?
ಜಿ. ಟಿ. ಶ್ರಿಧರ ಶರ್ಮ, ಸಾಗರ.

ಕಾಮನಬಿಲ್ಲು ಪುರವಣಿಯಲ್ಲಿ ಏಪ್ರಿಲ್ 12 ರಂದು ಮೂಡಿಬಂದ `ಪಿಕ್ಚರ್ ಪ್ರಪಂಚದ ಕಾಲುದಾರಿ~ ಲೇಖನ ತುಂಬಾ ಚೆನ್ನಾಗಿದೆ. ಕನ್ನಡ ಸಿನಿಮಾವನ್ನೇ ಮರೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಲೇಖನ ಸಮಯೋಚಿತವಾಗಿದೆ.
-ಎನ್. ಪೂರ್ಣಿಮಾ ವಿಶ್ವನಾಥಚಾರ್, ಗುಬ್ಬಿ.

ಕಾಮನಬಿಲ್ಲು ಸಾಹಿತ್ಯಕವಾಗಿ ಹಲವಾರು ವಿಶೇಷತೆಗಳನ್ನು ನೀಡಿ ಮನರಂಜಿಸುತ್ತಿದೆ.
ಸಾಮಾಜಿಕ, ವೈಜ್ಞಾನಿಕ ಲೇಖನ, ಪ್ರತಿಭಾವಂತರ ಪರಿಚಯ ನೀಡಿ ಸಾಧನೆಗೆ ಪ್ರೇರೇಪಿತವಾಗಿದೆ. ಕಳೆದ ಬಾರಿಯ ಡಿ. ಕೆ. ರಮೇಶ್ ಅವರ ಪಿಕ್ಚರ್ ಪ್ರಪಂಚದ ಕಾಲು ದಾರಿ ಚಿತ್ರಲೇಖನ ತುಂಬಾ ಸೊಗಸಾಗಿತ್ತು.
-ಮಹಾಂತೇಶ ರಾಜಗೋಳಿ, ಬೆಳಗಾವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.