ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಭಿವೃದ್ಧಿಪಡಿಸಿದ ಸಂಪೂರ್ಣ ದೇಶಿ ತಂತ್ರಜ್ಞಾನದ ರಿಸ್ಯಾಟ್-1 ಉಪಗ್ರಹ ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ. ಶ್ರೀಹರಿಕೋಟಾದ ನೆಲೆಯಿಂದ ಉಡಾವಣೆಯಾದ 20ನೇ ಉಪಗ್ರಹವಿದು. ಇಸ್ರೊ ವಿಜ್ಞಾನಿಗಳ ಹತ್ತು ವರ್ಷಗಳ ಸಂಶೋಧನೆ ಮತ್ತು ಪರಿಶ್ರಮದ ದುಡಿಮೆಯ ಫಲ.

ಈ ಸಾಧನೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳ ಕಿರೀಟಕ್ಕೆ ಸೇರ್ಪಡೆಯಾದ ಯಶಸ್ಸಿನ ಹೊಸ ಗರಿ. ರಿಸ್ಯಾಟ್-1 ಉಪಗ್ರಹ ಯೋಜನೆಯ ಮುಖ್ಯಸ್ಥರಾಗಿ ದುಡಿದವರು ತಮಿಳುನಾಡು ಮೂಲದ ಮಹಿಳಾ ವಿಜ್ಞಾನಿ ಡಾ.ವಿ.ವಲರ್ಮತಿ. ಒಟ್ಟಾರೆ ಇದು ಇಸ್ರೊ ವಿಜ್ಞಾನಿಗಳ ಬಹುದೊಡ್ಡ ಸಾಧನೆ.

ಅದಕ್ಕಾಗಿ ಅವರು ದೇಶದ ಜನರ ಅಭಿನಂದನೆಗೆ ಪಾತ್ರರು. ಇಸ್ರೊ ವಿಜ್ಞಾನಿಗಳು ಈಗ ಜಗತ್ತಿನ ಗಮನ ಸೆಳೆದಿದ್ದಾರೆ. 1858 ಕಿಲೋಗ್ರಾಂ ತೂಕದ ನಲವತ್ತನಾಲ್ಕು ಮೀಟರ್ ಉದ್ದದ ದೇಶದ ಮೊದಲ ಮೈಕ್ರೊವೇವ್ ರಿಮೋಟ್ ಸೆನ್ಸಿಂಗ್ ಉಪಗ್ರಹ ಎಂಥದೇ ಪ್ರತಿಕೂಲ ಹವಾಮಾನದಲ್ಲೂ ಭೂಮಿಯ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಪಡೆದಿದೆ. ಎಲ್ಲ ಬಗೆಯ ಹವಾಮಾನದ ಮುನ್ಸೂಚನೆಗಳ ಸುಳಿವುಗಳನ್ನು ಸೆರೆ ಹಿಡಿಯುತ್ತದೆ.

ಇದುವರೆಗೆ ಭಾರತ ಇದಕ್ಕಾಗಿ ಕೆನಡಾದ ಉಪಗ್ರಹದ ನೆರವು ಪಡೆಯುತ್ತಿತ್ತು. ಕೆನಡಾ ಉಪಗ್ರಹಕ್ಕೆ ಮೋಡಕವಿದ ವಾತಾವರಣದಲ್ಲಿ ಭೂಮಿಯ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಇರಲಿಲ್ಲ. ರಿಸ್ಯಾಟ್ -1 ಉಪಗ್ರಹ ದೇಶದ ಗಡಿಗಳಲ್ಲಿ ನಡೆಯುವ ದೇಶ ವಿರೋಧಿ ಚಟುವಟಿಕೆಗಳ ಮೇಲೆ ಕಣ್ಣಿಡುವ ಗುಪ್ತಚಾರನಾಗಿಯೂ ಕಾರ್ಯ ನಿರ್ವಹಿಸಲಿದೆ. ಇಂತಹ ಉಪಗ್ರಹವನ್ನು ಹೊಂದಿದ ಇಸ್ರೇಲ್, ರಷ್ಯ, ಅಮೆರಿಕಾ ದೇಶಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಿವೆ. ಬರ, ಅತಿವೃಷ್ಟಿಗಳಿಂದ ಕೃಷಿ ಉತ್ಪಾದನೆ ಕುಂಠಿತವಾಗಿದೆ. ರಿಸ್ಯಾಟ್-1 ಉಪಗ್ರಹದ ಸೇವೆಯನ್ನು ಬಳಸಿಕೊಂಡು ಪ್ರಕೃತಿ ವಿಕೋಪಗಳ ಸುಳಿವನ್ನು ಮೊದಲೇ ಗ್ರಹಿಸಿ ದೇಶದ ರೈತರಿಗೆ ಸಕಾಲದಲ್ಲಿ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯಿಂದ ಕೃಷಿ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯಕವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ದೇಶದ ಗಡಿಗಳ ಕಾವಲಿಗೆ ಈಗ ಮಾನವ ಶಕ್ತಿ ಬಳಕೆಯಾಗುತ್ತಿದೆ. ಉಪಗ್ರಹದ ಮೂಲಕ ಗಡಿಗಳ ಮೇಲೆ ಕಣ್ಣಿಡುವ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿ. ತುರ್ತಾಗಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಅದರಿಂದ ಸಹಾಯವಾದೀತು. ಒಟ್ಟಾರೆ ರಿಸ್ಯಾಟ್-1 ಉಪಗ್ರಹದಿಂದ ದೇಶಕ್ಕೆ ಹೆಚ್ಚಿನ ಪ್ರಯೋಜನವಿದೆ. ಎಸ್ -ಬ್ಯಾಂಡ್ ತರಂಗಾಂತರ ಹಂಚಿಕೆ ಹಿನ್ನೆಲೆಯಲ್ಲಿ ಇಸ್ರೊ ವಿಜ್ಞಾನಿಗಳ ವಿಶ್ವಾಸಾರ್ಹತೆಯನ್ನು ಜನರು ಅನುಮಾನದಿಂದ ನೋಡುವಂತಾಗಿತ್ತು.

ಈ ಉಪಗ್ರಹದ ಯಶಸ್ಸು ದೇಶದ ಮತ್ತು ಇಸ್ರೊ ವಿಜ್ಞಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಬಾಹ್ಯಾಕಾಶ ಸಂಶೋಧನೆಗೆ ಸರ್ಕಾರ ಭಾರಿ ಮೊತ್ತದ ಹಣ ಖರ್ಚು ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಇಸ್ರೊ ವಿಜ್ಞಾನಿಗಳು ದೇಶದ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ.

ಅವರ ಸಾಧನೆ ಜಗತ್ತಿನ ಮುಂದುವರಿದ ದೇಶಗಳಿಗೆ ಕಡಿಮೆ ಇಲ್ಲ. ವಿದೇಶಿ ಉಪಗ್ರಹಗಳ ಉಡಾವಣೆಗೆ ಶ್ರೀಹರಿಕೋಟಾದ ನೆಲೆ ಬಳಕೆಯಾಗುತ್ತಿದೆ. ಇದರಿಂದ ದೇಶಕ್ಕೆ ಆದಾಯವೂ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಸ್ರೊ ವಿಜ್ಞಾನಿಗಳ ಆವಿಷ್ಕಾರ ದೇಶವನ್ನು ಮುಂಚೂಣಿಗೆ ಒಯ್ಯಬಹುದು. ಅದೇನೇ ಇರಲಿ ಇಸ್ರೊದ ಎಲ್ಲ ಆವಿಷ್ಕಾರಗಳು ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.