ಬೆಂಗಳೂರು: ದೂಳಿಲ್ಲದ, ಬಿಸಿಲಿಲ್ಲದ ಗೊಂದಲಗಳಿಗೆ ಆಸ್ಪದವಿಲ್ಲದ ಪುಸ್ತಕ ಮಾರಾಟ ಮಳಿಗೆಗಳನ್ನು ನೋಡಬೇಕೆ? ಹಾಗಿದ್ದರೆ ನಗರದಲ್ಲಿ ನಡೆಯಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ. ಹಿಂದಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಡೆಯದ ಅಚ್ಚುಕಟ್ಟಾದ ಪುಸ್ತಕ ಪ್ರದರ್ಶನಕ್ಕೆ ಈ ಬಾರಿ ಅವಕಾಶವಿದೆ.

ಒಟ್ಟು ನಾನೂರು ಮಳಿಗೆಗಳಿರುವ ಪುಸ್ತಕ ಪ್ರದರ್ಶನದಲ್ಲಿ 379 ಮಳಿಗೆಗಳನ್ನು ಬುಕ್ ಮಾಡಿಕೊಳ್ಳಲಾಗಿದೆ. ಪ್ರತಿ ಮಳಿಗೆಗೆ ರೂ. 2,000 ರೂಪಾಯಿ ದರ ವಿಧಿಸಲಾಗಿದೆ. ಉಳಿದ ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ವತ್ತು ಮಾರಾಟದ ಸ್ವಾಗತ ಸಮಿತಿ, ಕುಡಿಯುವ ನೀರು ಮಾರಾಟ ಕೇಂದ್ರ ಹಾಗೂ ಹಾಲು ಮಾರಾಟ ಕೇಂದ್ರಗಳಿಗಾಗಿ ಮೀಸಲಿಡಾಗಿದೆ.

ಪ್ರತಿ ಪುಸ್ತಕದಂಗಡಿಗೆ ನಾಲ್ಕು ಟೇಬಲ್ಗಳನ್ನು ಉಚಿತವಾಗಿ ಸಮಿತಿ ಒದಗಿಸುತ್ತಿದ್ದು 2,000 ಪುಸ್ತಕಗಳನ್ನು ಪ್ರದರ್ಶನಕ್ಕಿಡಬಹುದಾದ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪುಸ್ತಕ ಸಂಕೀರ್ಣದಲ್ಲಿ ಮನಬಂದತೆ ಸಂಚಾರಕ್ಕೆ ಕಡಿವಾಣ ಹಾಕಲಾಗಿದೆ. ಶೇ 80ರಷ್ಟು ಹವ್ಯಾಸಿ ಪ್ರಕಾಶಕರು ಹಾಗೂ ಶೇ 20 ರಷ್ಟು ವೃತ್ತಿಪರ ಪ್ರಕಾಶಕರು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ನ್ಯಾಷನಲ್ ಬುಕ್ ಟ್ರಸ್ಟ್, ಬೆಂಗಳೂರು ಪುಸ್ತಕ ಮೇಳಗಳ ಮಾದರಿಯ ಸುಧಾರಿತ ವ್ಯವಸ್ಥೆಯನ್ನು ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಿಕೊಳ್ಳಲಾಗಿದೆ. ಶಾಮಿಯಾನ ಮಾದರಿಯು ವ್ಯವಸ್ಥೆಗೆ ಬದಲಾಗಿ ಮಳೆ ಬಿಸಿಲು ಗಾಳಿಗೆ ಜಗ್ಗದಂತಹ ಛಾವಣಿಯ ಅಡಿ ಪುಸ್ತಕ ಮಳಿಗೆಗಳು ತಲೆ ಎತ್ತಿವೆ.

‘ಈ ಹಿಂದಿನ ಸಮ್ಮೇಳನಗಳಲ್ಲಿ ವಿಪರೀತ ದೂಳಿನಿಂದಾಗಿ ಪುಸ್ತಕ ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿತ್ತು. ದೂಳು ಕುಳಿತು ಹೊಸ ಪುಸ್ತಕಗಳು ಕೂಡ ಹಳೆಯದಾಗಿ ಕಾಣುತ್ತಿದ್ದವು. ಆದರೆ ಈ ಬಾರಿ ಇದನ್ನು ತಡೆಯುವ ಉದ್ದೇಶದಿಂದ ಪುಸ್ತಕ ಪ್ರದರ್ಶನ ಸಂಕೀರ್ಣವನ್ನು ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲಿಡಲಾಗಿದೆ. ಅಲ್ಲದೇ ಸಂಕೀರ್ಣದ ತುಂಬ ನೆಲಹಾಸು ಹಾಕಿ ದೂಳು ಏಳುವುದನ್ನು ತಡೆಯಲಾಗಿದೆ’ ಎನ್ನುತ್ತಾರೆ ಸಮಿತಿಯ ಸದಸ್ಯರಾದ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ.

ಪುಸ್ತಕ ಮಾರಾಟ ಸಂಕೀರ್ಣವನ್ನು ಪ್ರವೇಶ ದ್ವಾರದ ಬಳಿಯೇ ಯಾವ ಪುಸ್ತಕದಂಗಡಿ ಎಲ್ಲಿದೆ ಎಂಬುದನ್ನು ಸೂಚಿಸುವ ಫಲಕವನ್ನು ಅಳವಡಿಸಲಾಗುತ್ತಿದೆ. ಇದರಿಂದ ಪುಸ್ತಕ ಖರೀದಿಗಾಗಿ ಆಗಮಿಸುವವರು ಗೊಂದಲವಿಲ್ಲದೇ ಸುಲಭವಾಗಿ ತಮಗೆ ಅಗತ್ಯವಾದ ಪುಸ್ತಕ ಮಾರಾಟ ಕೇಂದ್ರಗಳಿಗೆ ತೆರಳಬಹುದು.

ಸಂಕೀರ್ಣದಲ್ಲಿ ಯಾವುದೇ ತಿಂಡಿ ತಿನಿಸು, ಬಟ್ಟೆ ಹಾಗೂ ಕರಕುಶಲ ವಸ್ತುಗಳ ಮಾರಾಟ ನಡೆಯುತ್ತಿಲ್ಲ. ಪುಸ್ತಕ ಮತ್ತು ಸಿ.ಡಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ರಿಯಾಯ್ತಿ: ಪ್ರತಿ ಪುಸ್ತಕ ಮಳಿಗೆಗಳು ಕನಿಷ್ಠ ಶೇ 10ರಷ್ಟು ರಿಯಾಯ್ತಿ ನೀಡಲೇ ಬೇಕೆಂಬ ನಿಯಮವನ್ನು ಸಮಿತಿ ಜಾರಿಗೊಳಿಸಿದ್ದು ಪ್ರತಿ ಸಮ್ಮೇಳನದಂತೆ ಈ ಬಾರಿಯೂ ಅರ್ಧಕ್ಕಿಂತಲೂ ಹೆಚ್ಚು ಮಳಿಗೆಗಳು ಶೇ50ರವರೆಗೆ ರಿಯಾಯ್ತಿ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ದರ ಹೆಚ್ಚಲ್ಲ: ಇದೇ ವೇಳೆ ಪುಸ್ತಕ ಮಳಿಗೆಗಳ ದರವನ್ನು 600ರಿಂದ 2.000 ರೂಪಾಯಿಗೆ ಹೆಚ್ಚಿಸಿರುವ ಕುರಿತು ಪ್ರಸ್ತಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ‘ಇಂತಹ ಬೃಹತ್ ಸಮಾವೇಶಗಳಲ್ಲಿ ಪ್ರಕಾಶಕರು ಐದಾರು ಪಟ್ಟು ಹೆಚ್ಚು ಹಣ ನೀಡಿದ ಉದಾಹರಣೆಗಳಿವೆ. ಅಲದ್ಲೇ ಸಮಿತಿಯ ಬಹುಪಾಲು ಸದಸ್ಯರು ಪ್ರಕಾಶಕರಾಗಿದ್ದು ಅವರ ಈ ದರ ನಿಗದಿಗೆ ಅವರ ಸಮ್ಮತಿ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.