ಬುಧವಾರ, ಜೂನ್ 16, 2021
28 °C

ಉಕ್ರೇನ್‌ ಬಿಕ್ಕಟ್ಟು, ಭಾರತದ ಔಷಧ ಉದ್ಯಮಕ್ಕೆ ಪೆಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಉಕ್ರೇನ್‌ನಲ್ಲಿ ತಲೆದೋರಿರುವ ಬಿಕ್ಕಟ್ಟು ದೇಶದ ಔಷಧ ಉದ್ಯಮ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟ (ಫಿಕ್ಕಿ) ಹೇಳಿದೆ.ಬಿಕ್ಕಟ್ಟಿನಿಂದಾಗಿ ಉಕ್ರೇನ್‌ಗೆ ಭಾರತ ದಿಂದ ಔಷಧ ರಫ್ತು ಕಡಿಮೆ­ಯಾಗಲಿದೆ. ಈಗಾಗಲೇ ರಫ್ತಾಗಿರುವ ಔಷಧಗಳಿಗೆ ಬಾಕಿ ಪಾವತಿ ಆಗಬೇಕಿದೆ. ಆದರೆ, ಡಾಲರ್‌ ವಿರುದ್ಧ ಅಲ್ಲಿನ ಸ್ಥಳೀಯ ಕರೆನ್ಸಿ ‘ಹ್ರಿವ್ನಿಯಾ’ ಮೌಲ್ಯ ಶೇ 20 ರಷ್ಟು ಕುಸಿದಿದೆ. ಇದರಿಂದ ರಫ್ತುದಾ­ರ ರಿಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ ಎಂದು ‘ಫಿಕ್ಕಿ’ ಕಳವಳ ವ್ಯಕ್ತಪಡಿಸಿದೆ.ಸ್ವತಂತ್ರ ರಾಷ್ಟ್ರಗಳ ಒಕ್ಕೂಟದಲ್ಲಿ (ಸಿ ಐಎಸ್‌) ರಷ್ಯಾ ನಂತರ ಉಕ್ರೇನ್‌ ಭಾರತದ ಎರಡನೇ ಅತಿ ದೊಡ್ಡ ವಾಣಿಜ್ಯ ಪಾಲುದಾರ ದೇಶ.  2012–13ನೇ ಸಾಲಿನಲ್ಲಿ ಉಕ್ರೇನ್‌ಗೆ 5190 ಕೋಟಿ ಡಾಲರ್‌ (₨3.21 ಲಕ್ಷ ಕೋಟಿ) ಮೊತ್ತದ ಸರಕು ರಫ್ತಾಗಿದೆ. 265 ಕೋಟಿ ಡಾಲರ್‌ (₨16,430 ಕೋಟಿ) ಮೊತ್ತದ ಸರಕು ಆಮದು ಮಾಡಿಕೊಳ್ಳ ಲಾಗಿದೆ.2012–13ನೇ ಸಾಲಿನಲ್ಲಿ ದೇಶ ದಿಂದ 15,400 ಕೋಟಿ ಡಾಲರ್‌ (₨9.54 ಲಕ್ಷ ಕೋಟಿ) ಮೌಲ್ಯದ ಔಷಧಗಳು ಉಕ್ರೇನ್‌ಗೆ ರಫ್ತಾಗಿವೆ. ಭಾರತದ ಔಷಧ ತಯಾರಿಕಾ ಕಂಪೆನಿ­ಗಳ ಶೇ 56ರಷ್ಟು ಸರಕು ಮಾರಾಟ­ವಾಗುವುದು ಈಗಿನ ಗಲಭೆ ಪೀಡಿತ ಕ್ರಿಮಿಯಾದಲ್ಲೇ. ಇತ್ತೀಚಿನ ಬಿಕ್ಕಟ್ಟಿನಿಂದ ಭಾರತೀಯ ಔಷಧ ಕಂಪೆನಿಗಳು ವಿಮಾನದಲ್ಲಿನ ಸಾಗಣೆ ವೆಚ್ಚ, ವಿಮೆ, ತೆರಿಗೆ ಎಲ್ಲವನ್ನೂ ಪಾವತಿಸಿ ಉಕ್ರೇನ್‌ಗೆ ರವಾನಿಸುವ ಸರಕುಗಳಿಗೆ ಬೆಲೆ ತಗ್ಗಿದೆ ಎಂದು ‘ಫಿಕ್ಕಿ’ ಹೇಳಿದೆ.ಬಿಕ್ಕಟ್ಟು ಹೀಗೆಯೇ ಮುಂದುವರಿ­ದರೆ, ರಫ್ತು ವಹಿವಾಟು ನಷ್ಟದ ಜತೆಗೇ ಉಕ್ರೇನ್‌­ನಿಂದ ಆಮದು ಮಾಡಿಕೊ ಳ್ಳುವ ಸರಕುಗಳೂ ತುಟ್ಟಿಯಾಗುವ ಸಾಧ್ಯತೆ ಇದೆ ಎಂದು ‘ಫಿಕ್ಕಿ’ ಅಧ್ಯಯನ ಗಮನ ಸೆಳೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.