ಸೋಮವಾರ, ಏಪ್ರಿಲ್ 19, 2021
24 °C

ಉಚಿತ ಗ್ಲುಕೊಮಾ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಿ ಆಸ್ಪತ್ರೆ

ವಿಶ್ವ ಗ್ಲೂಕೊಮಾ ಜಾಗೃತಿ ಸಪ್ತಾಹದ ಅಂಗವಾಗಿ ಕೋರಮಂಗಲದ ದೇವಿ ಕಣ್ಣಿನ ಆಸ್ಪತ್ರೆ, ಮಾರ್ಚ್ 11ರ ವರೆಗೆ ಉಚಿತ ಗ್ಲುಕೊಮಾ ತಪಾಸಣೆ ಶಿಬಿರ ನಡೆಸುತ್ತಿದೆ.ಗ್ಲುಕೊಮಾ ಎನ್ನುವುದು ಕಣ್ಣಿನ ಸಮಸ್ಯೆಯಾಗಿದ್ದು, ದೃಷ್ಟಿ ನರದ ಊತದಿಂದ ಬರುತ್ತದೆ. ಇದು ಯಾವುದೇ ವಯೋಮಾನದವರನ್ನು ಆವರಿಸಬಹುದು. ಒಮ್ಮೆ ಸಮಸ್ಯೆ ಆರಂಭವಾದರೆ, ಶಾಶ್ವತವಾಗಿ ದೃಷ್ಟಿಹೀನರಾಗುವ ಸಂಭವ ಅಧಿಕ.ಆದ್ದರಿಂದ 40 ವರ್ಷ ಮೇಲ್ಪಟ್ಟವರು, ಕುಟುಂಬದಲ್ಲಿ ಗ್ಲುಕೊಮಾ ಹೊಂದಿರುವವರು (ಆನುವಂಶೀಯ), ಸ್ಟೀರಾಯ್ಡಿ ಬಳಸುವ ಆಸ್ತಮಾ ರೋಗಿಗಳು, ಈ ಹಿಂದೆ ಕಣ್ಣಿನ ಗಾಯ ಆಗಿದ್ದವರು, ಹೆಚ್ಚಿನ ಮಿಯೊಪಿಯ, ಮಧುಮೇಹ ಮತ್ತು ಹೈಪರ್‌ಟೆನ್ಷನ್ ಇರುವವರು ರೋಗವನ್ನು ನಿರ್ಲಕ್ಷಿಸದೆ ತಕ್ಷಣ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ.ಬಾಲಕೃಷ್ಣ ಶೆಟ್ಟಿ ಹೇಳುತ್ತಾರೆ.ಸ್ಥಳ: ದೇವಿ ಕಣ್ಣಿನ ಆಸ್ಪತ್ರೆ, ಕೋರಮಂಗಲ ಬಸ್ ಡಿಪೊ ಎದುರು. ಬೆಳಿಗ್ಗೆ 9.30 ರಿಂದ ಸಂಜೆ 3.30. ಮಾಹಿತಿ, ನೋಂದಣಿಗೆ: 98805 70094.ಸಂಪ್ರತಿ ಆಸ್ಪತ್ರೆ

ಸಂಪ್ರತಿ ಕಣ್ಣಿನ ಆಸ್ಪತ್ರೆ ಮತ್ತು ಮೆಳ್ಳೆಗಣ್ಣು ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಗ್ಲುಕೊಮಾ ತಪಾಸಣೆ ನಡೆಯಲಿದೆ. ಇದು ಬರುವುದನ್ನು ತಡೆಯಲು ಮುಂಜಾಗ್ರತೆಯೇ ಪರಿಹಾರ. ಆದ್ದರಿಂದ ಜನಜಾಗೃತಿ ಮೂಡಿಸಲು ಈ ಶಿಬಿರ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯಸ್ಥ ಡಾ. ಅರುಣ್ ಸಂಪ್ರತಿ.

ಸ್ಥಳ: 7ನೇ ಅಡ್ಡರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ರೈಲ್ವೆ ಪ್ಯಾರಲಲ್ ರಸ್ತೆ. ನೋಂದಣಿಗೆ 2336 7544, 2336 0099.ನಾರಾಯಣ ನೇತ್ರಾಲಯ

ನಾರಾಯಣ ನೇತ್ರಾಲಯಲ್ಲಿ ಮಾರ್ಚ್ 12ರಂದು ಗ್ಲುಕೊಮಾ ರೋಗಿಗಳು, ಸಂಬಂಧಿಗಳು ಮತ್ತು ಸಾರ್ವಜನಿಕರಿಗೆ ಉಚಿತ ಜಾಗೃತಿ ಕಾರ್ಯಕ್ರಮ. ಈ ಸಪ್ತಾಹದಲ್ಲಿ ಪರೀಕ್ಷೆ ಮಾಡಿಸಿಕೊಂಡವರ ಸಂಬಂಧಿಗಳಿಗೂ ಉಚಿತ ಗ್ಲುಕೊಮಾ ಪರೀಕ್ಷೆ ನಡೆಸಲಾಗುತ್ತದೆ.

ಸ್ಥಳ: ಪಶ್ಚಿಮ ಕಾರ್ಡ್ ರಸ್ತೆ, ಇಸ್ಕಾನ್ ದೇವಸ್ಥಾನ ಪಕ್ಕ. ವಿವರಗಳಿಗೆ: 6612 1301/ 05.ಶಂಕರ

ಶಂಕರ ಆಸ್ಪತ್ರೆಯಲ್ಲಿ ಆರಂಭಿಕ ಹಂತದಲ್ಲಿ ಗ್ಲುಕೊಮಾ ಪತ್ತೆಗಾಗಿ ಮಾರ್ಚ್ 13ರವರೆಗೆ ಉಚಿತ ತಪಾಸಣಾ ಶಿಬಿರ. ಮಾರ್ಚ್ 13ರಂದು ಗ್ಲುಕೊಮಾ ಜಾಗೃತಿ ವಾಕಥಾನ್.

ಸ್ಥಳ: ಕುಂದಲಹಳ್ಳಿ ಗೇಟ್, ಹಳೆಯ ಏರ್‌ಪೋರ್ಟ್ ರಸ್ತೆ. ದೂ: 2854 2727.ಸುನಯನಾ

ಸುನಯನಾ ಆಸ್ಪತ್ರೆಯಲ್ಲಿ ಮಾರ್ಚ್ 12ರ ಮಧ್ಯಾಹ್ನ 3ರಿಂದ ಗ್ಲುಕೊಮಾ ಕುರಿತು ಜಾಗೃತಿ ಮೂಡಿಸಲು ಉಚಿತ ಕಾರ್ಯಾಗಾರ.

ಸ್ಥಳ: ಜಯನಗರ 9ನೇ ಬ್ಲಾಕ್. ನೋಂದಣಿಗೆ 2244 2356/ 2245 3473.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.