ತಿರುವನಂತಪುರ (ಪಿಟಿಐ): ತಾಳೆ ಎಣ್ಣೆ ಆಮದು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಪ್ರಶ್ನಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆಗೆ ವಿಶೇಷ ಜಾಗೃತ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.

ಪ್ರಕರಣದಲ್ಲಿ ತನಿಖಾ ವ್ಯಾಪ್ತಿಗೆ ಉಮ್ಮನ್ ಚಾಂಡಿ ಅವರನ್ನು ಒಳಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರಾಸಿಕ್ಯೂಷನ್ ವಿಶೇಷ ಜಾಗೃತ ಕೋರ್ಟ್ಗೆ ಮನವಿ ಮಾಡಿತ್ತು. ಇದರ ಅನುಸಾರ ಕೋರ್ಟ್ ಈ ನಿರ್ದೇಶನ ನೀಡಿದೆ. ಈ ಕುರಿತ ವರದಿಯನ್ನು ಮೂರು ತಿಂಗಳ ಒಳಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಇದರಿಂದಾಗಿ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಕೋರ್ಟ್ನ ನ್ಯಾಯಾಧೀಶ ಎಸ್.ಜಗದೀಶ್ ಅವರು, ಹೆಚ್ಚಿನ ತನಿಖಾ ವ್ಯಾಪ್ತಿ ಹೊಂದಲು ಪ್ರಾಸಿಕ್ಯೂಷ್ನಗೆ ಎಲ್ಲ ರೀತಿಯ ಹಕ್ಕು ಇದೆ ಎಂದು ಅಭಿಪ್ರಾಯಪಟ್ಟರು.ಏಪ್ರಿಲ್ 13ರಂದು ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆಗಳು ಜರುಗುತ್ತಿದ್ದು, ಚಾಂಡಿ ಅವರನ್ನು ಯುಡಿಎಫ್ ಮೈತ್ರಿಕೂಟದ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿದೆ. ಈ ಸಂದರ್ಭದಲ್ಲಿಯೇ ಇಂತಹ ಆದೇಶ ಹೊರಬಿದ್ದಿರುವುದರಿಂದ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಈಗಾಗಲೇ ಈ ಪ್ರಕರಣದಲ್ಲಿ ಕೇಂದ್ರ ಜಾಗೃತ ಆಯೋಗದ ಮಾಜಿ ಆಯುಕ್ತ ಪಿ.ಜೆ.ಥಾಮಸ್ ಮತ್ತು ಕೇರಳದ ಮಾಜಿ ಆಹಾರ ಸಚಿವ ಟಿ.ಎಚ್. ಮುಸ್ತಾಫಾ ಅವರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ. ಕಳೆದ ತಿಂಗಳಷ್ಟೇ ಮುಸ್ತಾಫಾ ತಮ್ಮ ಬಿಡುಗಡೆ ಅರ್ಜಿಯಲ್ಲಿ ಚಾಂಡಿ ಅವರ ಹೆಸರನ್ನೂ ಪ್ರಕರಣಕ್ಕೆ ತಳುಕು ಹಾಕಿ ಪ್ರಸ್ತಾಪ ಮಾಡಿದ್ದರು. ‘ಈ ಪ್ರಕರಣದಲ್ಲಿ ಚಾಂಡಿ ಅವರನ್ನು ವಿಚಾರಣೆಯಿಂದ ಕೈ ಬಿಡಲು ತೋರುವ ಉದಾರತೆ ನನಗೇಕಿಲ್ಲ ಎಂದು ಮುಸ್ತಾಫಾ ಪ್ರಶ್ನಿಸಿದ್ದರು. ಇದನ್ನೇ ಊರುಗೋಲು ಮಾಡಿಕೊಂಡ ಎಡಪಕ್ಷಗಳು ಚಾಂಡಿ ವಿರುದ್ಧವೂ ತನಿಖೆ ನಡೆಯಬೇಕೆಂದು ಹಟ ಹಿಡಿದಿದ್ದವು. ಇದರಿಂದಾಗಿ ಈಗ ಚಾಂಡಿ ಅವರನ್ನೂ ತನಿಖಾ ವ್ಯಾಪ್ತಿಗೆ ಒಳಪಡಿಸಲು ಕೋರ್ಟ್ ಅನುಮತಿ ನೀಡಿದಂತಾಗಿದೆ.

ಇನ್ನಷ್ಟು ಆರೋಪಿಗಳು: ಪ್ರಾಸಿಕ್ಯೂಷನ್ ಮನವಿ ಅನುಸಾರ ಇನ್ನೂ ಹಲವು ಪ್ರಮುಖರನ್ನು ಈ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸುವ ಸಾಧ್ಯತೆ ಇದೆ.

ಸಹಕರಿಸುತ್ತೇನೆ: ‘ತನಿಖೆಗೆ ನಾನು ಸಂಪೂರ್ಣವಾಗಿ ಸಹಕರಿಸುತ್ತೇನೆ’ ಎಂದು ಚಾಂಡಿ ಪ್ರತಿಕ್ರಿಯಿಸಿದ್ದಾರೆ.‘ಪ್ರಕರಣ ನಡೆದು 20 ವರ್ಷಗಳಾಗಿವೆ. ಇಲ್ಲಿಯತನಕ ಯಾಕೆ ಎಡಪಕ್ಷಗಳು ನನ್ನನ್ನು ಈ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸುವ ಗೋಜಿಗೆ ಹೋಗಲಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ. ಚುನಾವಣೆ ಹತ್ತಿರ ಬಂದಿರುವುದರಿಂದ ಇಂತಹ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ದಿವಂಗತ ಕೆ.ಕರುಣಾಕರನ್ ಮುಖ್ಯಮಂತ್ರಿ ನೇತೃತ್ವದಲ್ಲಿ 1991ರಲ್ಲಿ ಆಡಳಿತದಲ್ಲಿದ್ದ ಯುಡಿಎಫ್ ಸರ್ಕಾರದಲ್ಲಿ ಉಮ್ಮನ್ ಚಾಂಡಿ ಹಣಕಾಸು ಸಚಿವರಾಗಿದ್ದರು. ಆಗ ಮಲೇಷ್ಯದಿಂದ 30,000 ಟನ್ ತಾಳೆ ಎಣ್ಣೆಯನ್ನು ಕೇರಳ ಆಮದು ಮಾಡಿಕೊಂಡಿತ್ತು. ಇದರಲ್ಲಿ ಸರ್ಕಾರದ ಬೊಕ್ಕಸಕ್ಕೆ 2.32 ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.