ಶುಕ್ರವಾರ, ಜನವರಿ 17, 2020
21 °C

ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಒಬ್ಬ ಸಾವು, ಐವರು ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಇಲ್ಲಿಗೆ ಬಾಳ ಎಂಆರ್‌ಪಿಎಲ್‌ನ ಸಲ್ಫರ್ ರಿಕವರಿ ಯುನಿಟ್‌ನಲ್ಲಿ ಶನಿವಾರ ಬೆಳಿಗ್ಗೆ 11.30ರ ವೇಳೆಗೆ ಸ್ಫೋಟ ಸಂಭವಿಸಿ ಒಬ್ಬ ಕಾರ್ಮಿಕ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೂಲಿ ಕಾರ್ಮಿಕ ಕುಳಾಯಿಯ ನಾಗೇಶ್ (28) ಮೃತಪಟ್ಟ ದುರ್ದೈವಿ. ಬಶೀರ್ (25), ಸಿರಾಜುದ್ದೀನ್ (24), ಅಶ್ವಿತ್ (23), ಮಹೇಶ್ ಕುಮಾರ್, ಶ್ರೀನಿವಾಸ್ ಗಂಭೀರ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರು ಎನ್‌ಟೆಕ್ ಕಂಪೆನಿಯ ನೌಕರರು, ಒಬ್ಬ ಗಣೇಶ್ ಕನ್‌ಸ್ಟ್ರಕ್ಷನ್, ಒಬ್ಬ ಎಂಆರ್‌ಪಿಎಲ್ ಸಿಬ್ಬಂದಿ.

ಶನಿವಾರ ಬೆಳಿಗ್ಗೆ 11.30ರ ವೇಳೆಗೆ ಘಟಕದಲ್ಲಿ ಸ್ಪಾರ್ಕ್ ಆಗಿ ಈ ದುರ್ಘಟನೆ ಸಂಭವಿಸಿತು. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಪ್ರತಿಕ್ರಿಯಿಸಿ (+)