ಅದು 1950ನೆ ಇಸ್ವಿ. ಜಪಾನ್ಗೆ ತೆರಳಿದ್ದ ಪ್ರಧಾನಿ ಜವಾಹರ್ಲಾಲ್ ನೆಹರೂ ಅವರಿಗೆ ನೆನಪಿನ ಕಾಣಿಕೆಯಾಗಿ ಆ ದೇಶ ಸಿಟಿಜನ್ ವಾಚ್ ನೀಡಿತು. ವಾಚ್ನ ಮೋಡಿಗೊಳಗಾದ ನೆಹರೂ ಅವರು ಭಾರತದಲ್ಲೂ ಕೈ ಗಡಿಯಾರ ತಯಾರಿಕೆಯ ಕನಸು ಕಂಡರು.

ಪ್ರಧಾನಿಯ ಈ ಕನಸು ಹತ್ತು ವರ್ಷಗಳ ಬಳಿಕ ಎಚ್ಎಂಟಿ (ಹಿಂದೂಸ್ತಾನ್ ಮಷಿನ್ ಟೂಲ್ಸ್ ಲಿಮಿಟೆಡ್) ಕೈ ಗಡಿಯಾರದೊಂದಿಗೆ ನನಸಾಯಿತು. ಈಗ ಈ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಹಲವು ದಾಖಲೆಗಳ ಕಾರ್ಖಾನೆ ಐದೂವರೆ ದಶಕಗಳು ಗತಿಸಿದ ಬಳಿಕ ಕೈಗಡಿಯಾರ ತಯಾರಿಕೆಗೆ ವಿದಾಯ ಹೇಳುತ್ತಿದೆ.

ಎಚ್ಎಂಟಿ ಕೈ ಗಡಿಯಾರ ಮಾತ್ರ ತಯಾರಿಸುತ್ತಿರಲಿಲ್ಲ. ಟ್ರ್ಯಾಕ್ಟರ್ಸ್, ಮಷಿನ್ ಟೂಲ್ಸ್, ಲ್ಯಾಂಪ್ಸ್, ಮುದ್ರಣದ ಯಂತ್ರಗಳ ತಯಾರಿಕೆ ಸಹ ನಡೆಯುತ್ತಿತ್ತು. ನಂತರದಲ್ಲಿ ಇದನ್ನು ಪ್ರತ್ಯೇಕ ಘಟಕಗಳಾಗಿ ವಿಭಜನೆ ಮಾಡಲಾಯಿತು.

ಎಚ್ಎಂಟಿ ವಾಚ್ ಕೇವಲ ಕೈ ಗಡಿಯಾರ ಆಗಿರಲಿಲ್ಲ. ಆತ್ಮಾಭಿಮಾನದ ಸಂಕೇತವೂ ಆಗಿದ್ದ ಕಾಲವೂ ಇತ್ತು. ಅಳಿಯನಿಗೆ ಪ್ರೀತಿಯ ಕಾಣಿಕೆಯಾಗಿ ನೀಡುವುದನ್ನು ದೇಶದ ಜನ ರೂಢಿಸಿಕೊಂಡಿದ್ದರು. ಆದರೆ ಇನ್ನು ಮುಂದೆ ಇಂತಹ ಕೈಗಡಿಯಾರಗಳು ಬರೀ ನೆನಪಾಗಿ ಉಳಿಯಲಿವೆ.

ವಾಚ್ ತಯಾರಿಕೆಯಲ್ಲಿ ಹಲವು ದಾಖಲೆಗಳನ್ನೂ ಎಚ್ಎಂಟಿ ಬರೆದಿದೆ. 1961ರಲ್ಲಿ ಪ್ರಧಾನಿ ನೆಹರೂ ಬೆಂಗಳೂರಿನಲ್ಲಿ ಕೈಗಾರಿಕೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಜಪಾನ್ನ ಸಿಟಿಜನ್ ವಾಚ್ ಕಂಪೆನಿಯ ತಂತ್ರಜ್ಞಾನದ ಸಹಯೋಗದೊಂದಿಗೆ ಮೊದಲ ಸಲ 800 ವಾಚ್ಗಳನ್ನು ತಯಾರಿಸಲಾಗಿತ್ತು. ಇವುಗಳಲ್ಲಿ ಎಚ್ಎಂಟಿ ಜನತಾ ಹೆಸರಿನ 500 ವಾಚ್ಗಳು ಪುರುಷರ ವಾಚ್ಗಳಾಗಿದ್ದವು. ಸುಜಾತಾ ಹೆಸರಿನ 300 ವಾಚ್ ಮಹಿಳೆಯರಿಗಾಗಿ ತಯಾರಾಗಿದ್ದವು. ಉತ್ತುಂಗದ ಸ್ಥಿತಿಯಲ್ಲಿ ತುಮಕೂರು ವಾಚ್ ಘಟಕವೊಂದೇ ವರ್ಷಕ್ಕೆ 20 ಲಕ್ಷ ವಾಚ್ ತಯಾರಿಸಿದ ದಾಖಲೆಯೂ ಇದೆ.

10 ಕೋಟಿಗಳಷ್ಟು ಗ್ರಾಹಕರನ್ನು ಎಚ್ಎಂಟಿ ಹೊಂದಿದೆ. ವಾಚ್ಗಳಿಗೆ ಇನ್ನಿಲ್ಲದಂಥ ಬೇಡಿಕೆ ಬಂದಾಗ ಬೆಂಗಳೂರಿನಲ್ಲೇ ಮತ್ತೊಂದು ಘಟಕ ತೆರೆಯಲಾಯಿತು. ನಂತರ ಮೂರನೇ ಘಟಕವನ್ನು ಕಾಶ್ಮೀರದಲ್ಲಿ ತೆರೆಯಲಾಯಿತು. ಈ ಹಿಂದೆಯೇ ಕಾಶ್ಮೀರದ ಘಟಕ ಮುಚ್ಚಲಾಗಿದೆ. ಇಲ್ಲಿದ್ದ ಕಾರ್ಮಿಕರ ನೆರವಿನಿಂದ ಜಮ್ಮುವಿನಲ್ಲಿ ಚಿನಾರ್ ವಾಚಸ್ ಹೆಸರಿನಲ್ಲಿ ಪ್ರತ್ಯೇಕ ಘಟಕ ಆರಂಭಿಸಲಾಗಿತ್ತು. ಈಗ ಈ ಘಟಕವನ್ನೂ ಮುಚ್ಚಲಾಗುತ್ತಿದೆ. 1978ರಲ್ಲಿ ತುಮಕೂರಿನಲ್ಲಿ ನಾಲ್ಕನೇ ಘಟಕ ತೆರೆಯಲಾಯಿತು. ಈ ಘಟಕದ ಕೆಲಸ, ಕಾರ್ಯವೈಖರಿ, ಲಾಭಕ್ಕೆ ಮಾರುಹೋಗಿ ಉತ್ತರಾಂಚಲದ ರಾಣಿಬಾಗ್ನಲ್ಲಿ ಐದನೇ ಘಟಕವನ್ನು ಆಗಿನ ಕೈಗಾರಿಕಾ ಸಚಿವ ಎನ್.ಡಿ.ತಿವಾರಿ ತೆರೆಯಲು ಕಾರಣವಾದರು.

ಕೊಡಲಿ ಪೆಟ್ಟು ನೀಡಿದ ನೀತಿ
ಜಪಾನ್ ಹೊರತುಪಡಿಸಿ ವಿಶ್ವದ ಬಹುತೇಕ ದೇಶಗಳಿಗೆ ಎಚ್ಎಂಟಿ ವಾಚ್ಗಳು ರಫ್ತಾಗುತ್ತಿದ್ದವು ಎಂದರೆ ಈಗ ಯಾರೂ ನಂಬುವುದಿಲ್ಲ. ಉಚ್ಛಾಯ್ರ ಸ್ಥಿತಿಯಲ್ಲಿದ್ದ ಕಂಪೆನಿಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಮುಳುವಾದವು.

ಖಾಸಗೀಕರಣಕ್ಕೆ ದೇಶ ತೆರೆದುಕೊಂಡ ಕಾರಣ ಖಾಸಗಿ ಕಂಪೆನಿಗಳಿಗೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ಸಿಗತೊಡಗಿತು. ಟೈಟಾನ್ ಸಹಿತ ಹಲವು ಮಾದರಿಯ ವಾಚ್ಗಳು ಮಾರುಕಟ್ಟೆ ಪ್ರವೇಶಿಸಿದವು. ಎಚ್ಎಂಟಿಯಲ್ಲಿದ್ದ ನುರಿತ, ಉನ್ನತ ಹುದ್ದೆಯಲ್ಲಿದ್ದ ಸಾಕಷ್ಟು ಮಂದಿ ಹೆಚ್ಚು ಸಂಬಳದ ಆಕರ್ಷಣೆಗೆ ಒಳಗಾಗಿ ಖಾಸಗಿ ಕಂಪೆನಿಗಳತ್ತ ಮುಖಮಾಡಿದರು. ಮಾನವ ಸಂಪನ್ಮೂಲದ ಕೊರತೆ, ಹೊಸ ಸವಾಲುಗಳಿಗೆ ಸಿದ್ಧತೆ ಮಾಡಿಕೊಳ್ಳದ ‘ಸರ್ಕಾರಿ ಆಲಸ್ಯ’ ಎಚ್ಎಂಟಿ ಎಂಬ ನಾಡದೋಣಿ ನಡುನೀರಿನಲ್ಲಿ ಮುಳುಗಲು ಕಾರಣವಾಯಿತು.

ಗ್ಯಾಟ್ ಒಪ್ಪಂದವು ಮುಳುಗುತ್ತಿದ್ದ ದೋಣಿಗೆ ಮತ್ತೊಂದು ಕಲ್ಲು ಹಾಕಿತು. ವಾಚ್ಗಳಿಗೆ ಬೇಕಾದ ಮಾಡ್ಯೂಲ್ಗಳನ್ನು ಹೊರ ದೇಶಗಳಿಂದ ಅಮದು ಮಾಡಿಕೊಳ್ಳಲು ಖಾಸಗಿ ವಾಚ್ ಕಂಪೆನಿಗಳಿಗೆ ಅವಕಾಶ ನೀಡಿದ ಕೇಂದ್ರ ಸರ್ಕಾರ ಎಚ್ಎಂಟಿಗೆ ನೀಡಲಿಲ್ಲ. ಹೊರದೇಶಗಳಲ್ಲಿ ಕೇವಲ ₹ 40ರಿಂದ ₹ 45 ಕ್ಕೆ ಸಿಗುತ್ತಿದ್ದ ಮಾಡ್ಯೂಲ್ ತಯಾರಿಸಲು ಎಚ್ಎಂಟಿ ₹ 100ರಿಂದ ₹125 ವ್ಯಯಿಸುತ್ತಿತ್ತು. ಇದೇ ವೇಳೆ ಹೊರದೇಶಗಳಿಂದ ಕಡಿಮೆ ಬೆಲೆಗೆ ಮಾಡ್ಯೂಲ್ ತರಿಸಿಕೊಂಡ ಖಾಸಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ದರ ಸಮರ ಸಾರಿದವು. ಆದರೆ ಎಚ್ಎಂಟಿಗೆ ಇದು ಸಾಧ್ಯವಾಗಲಿಲ್ಲ. ಮಾರುಕಟ್ಟೆಯಲ್ಲಿ ಅಸ್ತಿತ್ವ ಕಳೆದುಕೊಂಡ ಬಳಿಕ ಕೇಂದ್ರ ಸರ್ಕಾರ ಮಾಡ್ಯೂಲ್ ಅಮದು ಮಾಡಿಕೊಳ್ಳಲು ಅನುಮತಿ ನೀಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ.

ಖಾಸಗಿ ಕಂಪೆನಿಗಳ ಮಾರುಕಟ್ಟೆ ತಂತ್ರಗಳಿಗೆ ಬದಲಿ ತಂತ್ರ ರೂಪಿಸುವಲ್ಲಿಯೂ ಈ ಸರ್ಕಾರಿ ಸ್ವಾಮ್ಯದ ಉದ್ದಿಮೆ ಸೋತಿತು. ಇಲ್ಲವೇ ಸೋಲುವಂತಹ ನೀತಿ ಕೈಗೊಳ್ಳಲಾಯಿತು. 20 ವಾಚ್ ಮಾರಿದರೆ ಒಂದು ವಾಚ್ ಉಚಿತ ಎಂಬ ಖಾಸಗಿ ಕಂಪೆನಿಗಳ ಮಾರುಕಟ್ಟೆ ತಂತ್ರದ ಮುಂದೆ ಎಚ್ಎಂಟಿ ಮೌನವಾಯಿತು. ಸೌದಿಯಲ್ಲಿ ಮಳಿಗೆ ತೆರೆದರೂ ಅದೂ ಪ್ರಯೋಜನಕ್ಕೆ ಬರಲಿಲ್ಲ.

ಫ್ಯಾಕ್ಟರಿಯ 5 ಘಟಕಗಳಲ್ಲಿ ಸುಮಾರು 10 ಸಾವಿರ ಕಾರ್ಮಿಕರು ದುಡಿಯುತ್ತಿದ್ದರು. ತುಮಕೂರು ಘಟಕದಲ್ಲಿ 2 ಸಾವಿರ ಕಾರ್ಮಿಕರಿದ್ದರು.

ತುಮಕೂರು ಘಟಕ ಆರಂಭದಿಂದ 2005ರವರೆಗೆ ₹ 1,800 ಕೋಟಿಗಳಿಗೂ ಮಿಕ್ಕಿದ ವಹಿವಾಟು ನಡೆಸಿದೆ. ಈ ಘಟಕದ ಲಾಭಾಂಶವನ್ನು ನಷ್ಟದಲ್ಲಿದ್ದ ರಾಣಿಭಾಗ್ ಘಟಕ, ಮಷಿನ್ ಟೂಲ್ಸ್, ಲ್ಯಾಂಪ್ಸ್ ಉಳಿಸಲು ಬಳಸಲಾಯಿತು. ಈಗ ಎಲ್ಲರೂ ಸೇರಿ ಮುಳುಗುತ್ತಿದ್ದೇವೆ ಎನ್ನುತ್ತಿದ್ದಾರೆ ಇಲ್ಲಿನ ಕಾರ್ಮಿಕರು.

2000 ನೇ ಇಸವಿಯಲ್ಲಿ ಎಚ್ಎಂಟಿ ಉಳಿಸುವ ಮೊದಲ ಹೆಜ್ಜೆಯಾಗಿ ಎಚ್ಎಂಟಿ ಉದ್ದಿಮೆಯನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಯಿತು. ಟ್ರ್ಯಾಕ್ಟರ್ಸ್, ಮಷಿನ್ ಟೂಲ್ಸ್, ಲ್ಯಾಂಪ್ಸ್ , ವಾಚ್ಗಳನ್ನು ಬೇರೆ ಬೇರೆ ಮಾಡಲಾಯಿತು. ಇದು ಕೂಡ ತಪ್ಪು ಹೆಜ್ಜೆಯೇ ಆಗಿತ್ತು ಎಂದು ಈಗ ಹೇಳಲಾಗುತ್ತಿದೆ.

ಕಾರ್ಖಾನೆ ಪುನಶ್ಚೇತನಕ್ಕಾಗಿ ಸುಮಾರು ₹ 900 ಕೋಟಿ ಹಣ ನೀಡಲಾಯಿತು. ಆದರೆ ಈ ಹಣವನ್ನು ಸಂಬಳ, ಕಾರ್ಮಿಕರಿಗೆ ವಿಆರ್ಎಸ್ ನೀಡಲು, ಸಾಲ ತೀರಿಸಲು ಬಳಸಲಾಯಿತು. ದುಡಿಯುವ ಬಂಡವಾಳ ಕೊಡಿ ಎಂಬ ಕಾರ್ಮಿಕರ ಕೂಗನ್ನು ಸರ್ಕಾರ ಕೇಳಲೇ ಇಲ್ಲ. ಇಂಥ ನೀತಿಗಳೇ ದೇಶ, ವಿದೇಶದಲ್ಲಿ ಹೆಸರುವಾಸಿಯಾದ ಸರ್ಕಾರಿ ಸ್ವಾಮ್ಯದ ಉದ್ದಿಮೆಯೊಂದು ಒಂದೇ ತಲೆಮಾರಿನಲ್ಲಿ ಕಣ್ಮುಚ್ಚುವಂತೆ ಮಾಡಿದವು.

ತುಮಕೂರಿನ ಘಟಕದಲ್ಲಿ ಈಗ ಕೇವಲ 302 ಕಾರ್ಮಿಕರಿದ್ದಾರೆ. 1992ನೇ ಇಸವಿಯ ವೇತನ ಆಧಾರದಲ್ಲಿ ಇವರಿಗೆ ಸಂಬಳ ನೀಡಲಾಗುತ್ತಿದೆ. ಅದು ಕೂಡ ತಿಂಗಳಿಗೆ ಕೇವಲ 4 ಸಾವಿರ. ಕಳೆದ ಏಪ್ರಿಲ್ನಿಂದಲೂ ಉಳಿಕೆ ಸಂಬಳ ನೀಡಿಲ್ಲ.

120 ಎಕರೆ ವಿಸ್ತೀರ್ಣದಲ್ಲಿರುವ ತುಮಕೂರಿನ ಕಾರ್ಖಾನೆಯು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

‘2 ಮಿಲೇನಿಯಂ ಗೋಲ್’ ಘೋಷ ವಾಕ್ಯದೊಂದಿಗೆ ಆರಂಭವಾದ ಘಟಕ ತನ್ನ ಉತ್ತುಂಗ ಸ್ಥಿತಿಯಲ್ಲಿ ವರ್ಷಕ್ಕೆ 20 ಲಕ್ಷ ವಾಚ್ ತಯಾರಿಸಿ ದಾಖಲೆ ಬರೆದಿತ್ತು.
ಕೊಹಿನೂರ್, ವಿಜಯ್, ಫೈಲಟ್, ಜನತಾ ಹೆಸರಿನ ಮೆಕಾನಿಕ್ ವಾಚ್ಗಳು ಜನಮನ ಗೆದ್ದಿದ್ದವು. ವಾಚ್ಗಾಗಿ ವಾರಗಟ್ಟಲೆ ಕಾಯಬೇಕಾದ ಸ್ಥಿತಿಯೂ ಇತ್ತು. ದೇಶದ ಎಲ್ಲ ಭಾಗಗಳಿಗೂ ವಾಚ್ಗಳು ರವಾನೆಯಾಗುತ್ತಿದ್ದವು. ಹೊರ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿತ್ತು.

ದೇಶದಲ್ಲಿ ಮೊದಲ ಸಲ ಕ್ವಾಟ್ಜ್ ವಾಚಸ್ ತಯಾರಿಕೆ ಆರಂಭವಾಗಿದ್ದು ಇದೇ ಘಟಕದಲ್ಲಿ. ₹ 100 ಕೋಟಿ ಬಂಡವಾಳದಲ್ಲಿ ಇದನ್ನು ಆರಂಭಿಸಲಾಗಿತ್ತು. ಈ ವಾಚ್ಗಳಿಗೂ ಬೇಡಿಕೆ ಹೆಚ್ಚಿದಾಗ ಇಂಥದ್ದೇ ಘಟಕವನ್ನು ರಾಣಿಬಾಗ್ನಲ್ಲೂ ಆರಂಭಿಸಲಾಯಿತು ಎನ್ನುವುದೆಲ್ಲ ಈಗ ನೆನಪು ಮಾತ್ರ.

ತುಮಕೂರಿನ ಎಚ್ಎಂಟಿ ಘಟಕ ಉಳಿಸಿಕೊಳ್ಳಲು ಇಲ್ಲಿನ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಿದವು. ಸಂಭ್ರಮಾಚರಣೆಗಳಿಗೆ ನೆನಪಿನ ಕಾಣಿಕೆ ನೀಡಲು ಎಚ್ಎಂಟಿ ವಾಚ್ಗಳಿಗೆ ಆರ್ಡರ್ ನೀಡಿದರು. ಈಗಲೂ ವಾಚ್ ಉತ್ಪಾದನೆ ಇಲ್ಲಿ ನಡೆಯುತ್ತಿದೆ. ಆದರೆ ಅದು ಕೇವಲ ಒಂದೆರಡು ಸಾವಿರ ಮಾತ್ರವಾಗಿದೆ.

ಬೆಂಗಳೂರು, ತುಮಕೂರು, ಹೈದರಾಬಾದ್, ದೆಹಲಿ ಮುಂತಾದ ಕಡೆ ಇದ್ದ 12ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು 6 ತಿಂಗಳ ಹಿಂದೆಯೇ ಮುಚ್ಚಲಾಗಿತ್ತು.
ಹಳೆ ಯಂತ್ರಗಳನ್ನು ಮಾರಾಟ ಮಾಡಿ ಫ್ಯಾಕ್ಟರಿ ನಡೆಸಲಾಗುತ್ತಿದೆ. ಕೆಲ ತಿಂಗಳ ಹಿಂದೆ ಜಪಾನ್ ದೇಶದ ಕಂಪೆನಿಯೊಂದು 33 ಲಕ್ಷ ಮೌಲ್ಯದ ಹಳೆ ಯಂತ್ರಗಳನ್ನು ಕೊಂಡಿತು. ಹಳೆ ಯಂತ್ರಗಳ ಮಾರಾಟಕ್ಕಾಗಿಯೇ ಕಾರ್ಮಿಕರನ್ನು ಒಳಗೊಂಡ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸಲಾಗಿದೆ. ಇಂಥ ಕಷ್ಟಕಾಲದಲ್ಲೇ ಫ್ಯಾಕ್ಟರಿ ಮುಚ್ಚುವ ನಿರ್ಧಾರ ಕೇಂದ್ರ ಸರ್ಕಾರ ಮಾಡಿದೆ.

ಎಚ್ಎಂಟಿ ದಾಖಲೆಗಳು
ಎಚ್ಎಂಟಿ ಕಾರ್ಖಾನೆ ಹಲವು ದಾಖಲೆಗಳನ್ನು ನಿರ್ಮಿಸಿದೆ. ಮೊದಲ ಬ್ರೈಲ್ ವಾಚ್ ಉತ್ಪಾದನೆ ಇದರ ಅಗ್ಗಳಿಕೆ. ಬೆಂಗಳೂರಿನ ಲಾಲ್ಬಾಗ್ನಲ್ಲಿ ಇರುವ ಉದ್ಯಾನ ಗಡಿಯಾರ, ಆಟೊಮ್ಯಾಟಿಕ್, ಕ್ವಾಟ್ಜ್ ವಾಚ್ಗಳನ್ನು ಮೊದಲು ತಯಾರು ಮಾಡಿದ ಕೀರ್ತಿಯೂ ಇದರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.