ಬೆಂಗಳೂರು: ವಿಶಿಷ್ಟ ಗುರುತಿನ (ಆಧಾರ್) ಸಂಖ್ಯೆಗಳನ್ನು ಬ್ಯಾಂಕ್ ಖಾತೆಗಳೊಂದಿಗೆ ಜೋಡಿಸುವ ಪ್ರಕ್ರಿಯೆ ಈಗ ಇನ್ನಷ್ಟು ಸರಳಗೊಂಡಿದೆ. ಗ್ರಾಹಕರು ಎಟಿಎಂ ಕಿಯೊಸ್ಕ್ಗಳ ಮೂಲಕ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ (ಯುಐಡಿಎಐ) ಸಹಾಯಕ ಪ್ರಧಾನ ನಿರ್ದೇಶಕ ಸುರೇಂದ್ರ ಬಾಬು, ‘ದೇಶದಾದ್ಯಂತ 60 ಬ್ಯಾಂಕ್ಗಳು ಈ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದು, ಇದರಿಂದ ಆಧಾರ್ ಸಂಖ್ಯೆಗಳನ್ನು ಬ್ಯಾಂಕ್ ಖಾತೆಗೆ ಜೋಡಿಸುವ ಕೆಲಸ ಸುಲಭವಾಗಿದೆ’ ಎಂದು ವಿವರಿಸಿದರು.

‘ಎಟಿಎಂ ಕಿಯೊಸ್ಕ್ಗಳಲ್ಲಿ ಗೌಪ್ಯ ಸಂಖ್ಯೆ (ಪಿನ್) ಮೂಲಕ ಗ್ರಾಹಕರ ಖಾತೆಗೆ ಪ್ರವೇಶ ಪಡೆದು (ಹಣ ತೆಗೆಯುವ ವಿಧಾನದಂತೆ), ಆಧಾರ್ ಸಂಖ್ಯೆಯನ್ನು ದಾಖಲಿಸಬಹುದು. ಪರಿಶೀಲನೆ ಬಳಿಕ ಆ ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಆಗುತ್ತದೆ’ ಎಂದು ಮಾಹಿತಿ ನೀಡಿದರು.

‘ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆ (ರಾಜ್ಯದಲ್ಲಿ ಕನ್ನಡ) ಎರಡರಲ್ಲೂ ಮಾಹಿತಿ ನೀಡಲು ಅವಕಾಶ ಒದಗಿಸಲಾಗಿದೆ. ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ಮಾತ್ರಕ್ಕೆ ಖಾತೆಯಲ್ಲಿನ ಮಾಹಿತಿ ಸೋರಿಕೆ ಆಗುತ್ತದೆ ಎಂಬ ಭಯ ಬೇಡ. ಹಿರಿಯ ಅಧಿಕಾರಿಗಳು ಮಾತ್ರ ಈ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಿದ್ದು, ಖಾತೆಯ ಯಾವ ರಹಸ್ಯವೂ ಬಯಲಿಗೆ ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರಾಧಿಕಾರದ ದಾಖಲೆಗಳ ಜತೆ ಹೋಲಿಸಿ ನೋಡಿದ ಮೇಲೆ ಆಧಾರ್ ಸಂಖ್ಯೆ ಜೋಡಣೆಗೆ ಅನುಮತಿ ನೀಡಲಾಗುತ್ತದೆ. ಹೀಗಾಗಿ ಖಾತೆಗಳ ಜೋಡಣೆಯಲ್ಲಿ ಯಾವ ತೊಂದರೆಯೂ ಎದುರಾಗುವುದಿಲ್ಲ’ ಎಂದು ಹೇಳಿದರು. ‘ವ್ಯಕ್ತಿಯಿಂದ ಶೇಖರಿಸಿದ ಜೈವಿಕ ವಿವರಗಳು ಗೌಪ್ಯವಾಗಿರಲಿದ್ದು, ಯಾರೂ ಅವುಗಳನ್ನು ವೀಕ್ಷಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

‘ಎಟಿಎಂ ಕಿಯೊಸ್ಕ್ಗಳಲ್ಲಿ ಈ ಸೌಲಭ್ಯ ಒದಗಿಸಿದ್ದರಿಂದ ಗ್ರಾಹಕರು ಸಂತಸಗೊಂಡಿದ್ದು, ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇಂಟರ್ನೆಟ್, ಕಾಲ್ ಸೆಂಟರ್ ಹಾಗೂ ಎಸ್ಎಂಎಸ್ ಮೂಲಕವೂ ಆಧಾರ್ ಸಂಖ್ಯೆ ಜೋಡಣೆಗೆ ಅವಕಾಶ ನೀಡಲಾಗಿದೆ’ ಎಂದು ಕೆನರಾ ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅಡುಗೆ ಅನಿಲ ಸಿಲಿಂಡರ್ಗಳ (ಎಲ್ಪಿಜಿ) ಮೇಲಿನ ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಿದ್ದೂ ‘ಗ್ರಾಹಕರ ಮೊಬೈಲ್ಗಳಿಗೆ ಸಬ್ಸಿಡಿ ಪಡೆಯಲು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಿಸಬೇಕು’ ಎಂಬ ಸಂದೇಶ ಬರುತ್ತಿದೆ.

‘ಆಧಾರ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದಂತೆ ನಮ್ಮ ಮೊಬೈಲ್ಗಳಿಗೆ ಬರುತ್ತಿರುವ ಸಂದೇಶಗಳು ಗೊಂದಲ ಮೂಡಿಸಿವೆ’ ಎಂದು ಕೆಂಗೇರಿಯ ವಿನಯ್ ಎಂಬ ‘ಇಂಡೇನ್’ ಎಲ್ಪಿಜಿ ಗ್ರಾಹಕರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.