ಎಫ್‌ಕೆಸಿಸಿಐ:ಮಾರಾಟ ಮೇಳ

7

ಎಫ್‌ಕೆಸಿಸಿಐ:ಮಾರಾಟ ಮೇಳ

Published:
Updated:
ಎಫ್‌ಕೆಸಿಸಿಐ:ಮಾರಾಟ ಮೇಳ

ಬೆಂಗಳೂರು: ರಾಜ್ಯದ ಸಣ್ಣ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಆಯೋಜಿಸಿರುವ ಎರಡು ದಿನಗಳ  ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಇಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (ಕೆಎಸ್‌ಡಬ್ಲ್ಯುಡಿಸಿ) ಅಧ್ಯಕ್ಷೆ ಸರೋಜಿನಿ ಭಾರದ್ವಾಜ್  ಚಾಲನೆ ನೀಡಿದರು. ಈ  ಮೇಳ ಅಕ್ಟೋಬರ್ 14 ಮತ್ತು 15ರಂದು ನಡೆಯಲಿದ್ದು, ಸುಮಾರು 40ಕ್ಕೂ ಹೆಚ್ಚು ಮಹಿಳಾ ಉದ್ದಿಮೆದಾರರು ಮಾರಾಟ ಮಳಿಗೆಗಳನ್ನು ತೆರೆದಿದ್ದಾರೆ. `ಕಿರು ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದು ಮತ್ತು ಅವರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಈ ಮೇಳದ ಪ್ರಮುಖ ಉದ್ದೇಶ.   ಎಫ್‌ಕೆಸಿಸಿಐ, ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ  ಜಂಟಿಯಾಗಿ ಈ ಮೇಳ ಆಯೋಜಿಸುತ್ತಿದೆ.ಮುಂಬರುವ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲೂ ಪ್ರತಿ ತಿಂಗಳು ಇಂತಹ ವಸ್ತು ಪ್ರದರ್ಶನ ಮೇಳ ಮತ್ತು ಮಹಿಳಾ ಉದ್ದಿಮೆದಾರರಿಗೆ ತರಬೇತಿ ಶಿಬಿರ ಆಯೋಜಿಸುವ ಯೋಜನೆ ಇದೆ ಎಂದು `ಎಫ್‌ಕೆಸಿಸಿಐ~ ಅಧ್ಯಕ್ಷ ಜೆ.ಆರ್ ಬಂಗೇರಾ ತಿಳಿಸಿದರು. ಎಂದು `ಎಫ್‌ಕೆಸಿಸಿಐ~ ಅಧ್ಯಕ್ಷ ಜೆ.ಆರ್ ಬಂಗೇರಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry