ಬೆಂಗಳೂರು: ಶಿವಮೊಗ್ಗದ ಎನ್.ಎಸ್. ಗಗನ ಇಲ್ಲಿ ಆರಂಭವಾದ ಸುರೇಶ್ ಕುಮಾರ್ ಸ್ಮಾರಕ ಎಐಎಸ್ಎಸ್ ಗ್ಲೋಬಲ್ ತ್ರಿ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನವರ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಶುಭಾರಂಭ ಮಾಡಿದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್ನಲ್ಲಿ ಶನಿವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಗಗನ 21-12, 21-17ರಲ್ಲಿ ಡಬ್ಲ್ಯುಪಿಬಿಎ ಕ್ಲಬ್ನ ಖುಷಿ ಸುನಿಲ್ ಎದುರು ಗೆಲುವು ಪಡೆದು ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.

ಇದೇ ವಿಭಾಗದ ಇತರ ಮೊದಲ ಸುತ್ತಿನ ಪಂದ್ಯಗಳಲ್ಲಿ ರೋಷಿಣಿ ಶ್ರೀನಾಥ್ 15-21, 21-10, 21-16ರಲ್ಲಿ ಎಸ್. ರುತಿಕಾ ಎಸ್. ಮೇಲೂ, ಅರುಷಿ ರಾಜಗೋಪಾಲ್ 21-19, 21-19ರಲ್ಲಿ ಶ್ರೀಸ್ತಿ ವಿರುದ್ಧವೂ, ನೇತ್ರಾ ಮುತ್ತುಕೃಷ್ಣನ್ 21-14, 21-15ರಲ್ಲಿ ಅನುಷಾ ಗಣೇಶ್ ಮೇಲೂ, ಆರ್. ಸಹನಾ 21-3, 21-13ರಲ್ಲಿ ನೇಹಾ ದಿನೇಸ್ ವಿರುದ್ಧವೂ, ತೃಪ್ತಿ ಶೆಣೈ 21-5, 21-8ರಲ್ಲಿ ಸಂಯಕ್ತಾ ಶಂಕರ್ ಮೇಲೂ ಗೆಲುವು ಪಡೆದು ಮುಂದಿನ ಸುತ್ತಿಗೆ ಮುನ್ನಡೆದರು.

ಅನನ್ಯಾಗೆ ಅದೃಷ್ಟ: 13 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ನಲ್ಲಿ ಎನ್ಜಿವಿ ಕ್ಲಬ್ನ ಅನನ್ಯಾ ಪ್ರವೀಣ್ ಅದೃಷ್ಟದ ಬಲದೊಂದಿಗೆ ಎರಡನೇ ಸುತ್ತು ಪ್ರವೇಶಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಈ ಆಟಗಾರ್ತಿ ಡಬ್ಲ್ಯುಪಿಬಿಎ ಕ್ಲಬ್ನ ಶ್ರೀದೇವಿ ಎದುರು ವಾಕ್ಓವರ್ ಪಡೆದರು.

ಇದೇ ವಿಭಾಗದ ಮತ್ತಷ್ಟು ಪಂದ್ಯಗಳಲ್ಲಿ ಲಕ್ಷ್ಮಿಶ್ರೀ ಜಿ. 21-9, 21-8ರಲ್ಲಿ ಸಿಂಧು ಮೇಲೂ, ಮಹಿಮಾ ಆನಂದ್ 21-9, 21-13ರಲ್ಲಿ ಖುಷಿ ಸುನಿಲ್ ವಿರುದ್ಧವೂ, ರೋಷಿಣಿ ವೆಂಕಟ್ 21-5, 21-10ರಲ್ಲಿ ಮೇಘನಾ ಎಸ್. ಮೇಲೂ, ಕೀರ್ತಿ ಭಾರದ್ವಾಜ್ 21-3, 21-3ರಲ್ಲಿ ದಿವ್ಯಾ ಪ್ರಸಾದ್ ವಿರುದ್ಧವೂ, ಮೇಧಾ ಶಶಿಧರನ್ 21-2, 21-3ರಲ್ಲಿ ಕಾವ್ಯಶ್ರೀ ಮೇಲೂ, ನಿಧಿ ಜೋಶಿ ಎಚ್. 21-16, 21-12ರಲ್ಲಿ ಕೆ. ವೈಷ್ಣವಿ ವಿರುದ್ಧವೂ, ರೀಚಾ ಮುಕ್ತಿಭೋಧ 21-2, 21-2ರಲ್ಲಿ ಮಯಾ ಪ್ರಶಾಂತ್ ಮೇಲೂ ಸುಲಭ ಗೆಲುವು ಪಡೆದು ಎರಡನೇ ಸುತ್ತು ಪ್ರವೇಶಿಸಿದರು.

ಬಾಲಕರ 13 ಹಾಗೂ 15 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್ನ ಅರ್ಹತಾ ಹಂತದ ಪಂದ್ಯಗಳು ಶನಿವಾರ ಮುಕ್ತಾಯವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.