ಸೋಮವಾರ, ಜನವರಿ 20, 2020
17 °C

ಎಲ್‌ಪಿಜಿಗೆ ‘ಆಧಾರ್‌’ ಕಡ್ಡಾಯವಲ್ಲ-:ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗ್ಯಾಸ್ ಏಜೆನ್ಸಿಗಳು ಆಧಾರ್ ಕಾರ್ಡ್ ಇಲ್ಲದ ಗ್ರಾಹಕರಿಗೂ  ಅಡುಗೆ ಅನಿಲ  ಪೂರೈಸಬೇಕು’ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ತಾಕೀತು ಮಾಡಿದರು. ಭಾರತೀಯ ವಾಣಿಜ್ಯ ಒಕ್ಕೂಟಗಳು ಸೆಂಟ್ರಲ್ ಕಾಲೇ ಜಿನಲ್ಲಿ ಶನಿವಾರ ಆಯೋಜಿ­ಸಿದ್ದ ಅಖಿಲ ಭಾರತ ವಾಣಿಜ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ, ‘ಸಾರ್ವಜ ನಿಕರ ಹಿತದೃಷ್ಟಿಯಿಂದ ಆಧಾರ್  ಕಾರ್ಡ್ ಕಡ್ಡಾಯ ಮಾಡ­ಲಾಗಿತ್ತು. ಸುಪ್ರೀಂಕೋರ್ಟ್ ಆದೇಶದ ನಂತರ ಇದನ್ನು ಬದ ಲಾಯಿಸಲಾಗಿದೆ. ಹಾಗಾಗಿ ಎಲ್‌ಪಿಜಿ ಪೂರೈಕೆಗೆ ಆಧಾರ್‌ ಕಾರ್ಡ್ ಅವಶ್ಯಕತೆ ಇಲ್ಲ’ ಎಂದರು.‘ದೇಶದಲ್ಲಿ 14 ಕೋಟಿಗೂ ಹೆಚ್ಚು ಮಂದಿ ಎಲ್‌ಪಿಜಿ ಸಂಪರ್ಕ ಪಡೆ­ದಿದ್ದಾ­ರೆ.  3  ಕೋಟಿಗಿಂತ ಹೆಚ್ಚು ಮಂದಿ ನಕಲಿ ದಾಖಲೆ ಸೃಷ್ಟಿಸಿ ಸಂಪರ್ಕ ಪಡೆದಿದ್ದಾರೆ. ಆಧಾರ್ ಕಾರ್ಡ್ ಇದ್ದರೆ, ಅರ್ಹ ಗ್ರಾಹಕರಿಗೆ ಹೆಚ್ಚಿನ ಸಬ್ಸಿಡಿ ದೊರೆಯುತ್ತದೆ. ಗ್ರಾಹಕ­ರ ಹಿತದೃಷ್ಟಿ­ಯಿಂದ ಆಧಾರ್ ಕಾರ್ಡ್ ಇರುವುದು ಒಳಿತು’ ಎಂದು ಪ್ರತಿಪಾದಿಸಿದರು. ‘ದೇಶದ ಇಂಧನ ವ್ಯವಸ್ಥೆ ಯಲ್ಲಿ ಸುಧಾರಣೆಗಳಾಗುತ್ತಿದ್ದು, 2030ರ ವೇಳೆಗೆ ಈ ಕ್ಷೇತ್ರ ದಲ್ಲಿ ಭಾರತ  ಸ್ವಾವ­ಲಂಬನೆ­ಯನ್ನು ಸಾಧಿಸಲಿದೆ’ ಎಂದರು.

ಪ್ರತಿಕ್ರಿಯಿಸಿ (+)