ಸೋಮವಾರ, ಜೂನ್ 14, 2021
21 °C

ಎಸ್‌ಬಿಎಂಗೆ ನಬಾರ್ಡ್ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌ಬಿಎಂಗೆ ನಬಾರ್ಡ್ ಪ್ರಶಸ್ತಿ

ಬೆಂಗಳೂರು: ಸ್ವ ಸೇವಾ ಗುಂಪುಗಳು ಮತ್ತು ಬ್ಯಾಂಕ್‌ಗಳ ಮಧ್ಯೆ ಸಂಪರ್ಕ ಸೇತುವೆ ಕಾರ್ಯಕ್ರಮ ಜಾರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) 2010-11ನೇ ಸಾಲಿನ ಅತ್ಯುತ್ತಮ ಸಾಧನೆ ಪ್ರಶಸ್ತಿಗೆ ಭಾಜನವಾಗಿದೆ.ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ, ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ಹಂಸಿನಿ ಮೆನನ್ ಮತ್ತು ಜನರಲ್ ಮ್ಯಾನೇಜರ್ ವಿ. ಪಟ್ಟಾಭಿರಾಮನ್ ಅವರು, ಕೃಷಿ ಸಚಿವ ಉಮೇಶ್ ಕತ್ತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ಸ್ವಸಹಾಯ ಗುಂಪುಗಳ ವಹಿವಾಟಿನಲ್ಲಿ `ಎಸ್‌ಬಿಎಂ~ನ ಕಗ್ಗಲಿಪುರ ಶಾಖೆ ಅತ್ಯುತ್ತಮ ಸಾಧನೆಯ ಪ್ರಶಸ್ತಿ ಪಡೆದುಕೊಂಡಿದೆ. `ಎಸ್‌ಬಿಎಂ~ ಪ್ರಾಯೋಜಕತ್ವದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್, ರಾಜ್ಯದಲ್ಲಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿಯೇ ಅತ್ಯುತ್ತಮ ಸಾಧನೆ ಮಾಡಿದ ಪ್ರಶಸ್ತಿಗೂ ಪಾತ್ರವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.