ಸೋಮವಾರ, ಜನವರಿ 20, 2020
°C

ಐರನ್‌ಮ್ಯಾನ್, ಸ್ಪೈಡರ್‌ಮ್ಯಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಟ್‌ಫೀಲ್ಡ್‌ನ ಫೋರಂ ವ್ಯಾಲ್ಯೂ ಮಾಲ್‌ನಲ್ಲಿ ಕ್ರಿಸ್ಮಸ್ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಐರನ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ವೇಷಧಾರಿಗಳು ಮಾಲ್‌ನಲ್ಲಿ ಡಿ.25ರವರೆಗೂ ಹಾಜರಿದ್ದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಲಿದ್ದಾರೆ.ಆಟೋಟ, ರಸಪ್ರಶ್ನೆ, ಹಗ್ಗಜಗ್ಗಾಟ, ಕಲೆ ಮತ್ತು ಸವಾಲುಗಳುಳ್ಳ ಇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಈ ಬಾರಿಯ ಹಬ್ಬವನ್ನು ಅವಿಸ್ಮರಣೀಯಗೊಳಿಸುವ ಅವಕಾಶ ಬೆಂಗಳೂರಿನ ಜನರ ಮುಂದಿದೆ.ಇದೇ ಮಾಲ್‌ನಲ್ಲಿ 3000 ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ಶಾಪಿಂಗ್‌ ಮಾಡುವ ಮೂಲಕ ಈ ಚಟುವಟಿಕೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯಬೇಕಾಗುತ್ತದೆ. ಡಿ.25ರಂದು ಸ್ಪೈಡರ್‌ಮ್ಯಾನ್ ಭೇಟಿಯಾಗುವ ಅವಕಾಶವೂ ಇರುತ್ತದೆ. ಜೊತೆಗೆ ಮಾರ್ವೆಲ್ ಸೂಪರ್‌ಹೀರೊ ತರಬೇತಿ ಅಕಾಡೆಮಿಯ ತರಬೇತಿಗಳಲ್ಲಿ ಪಾಲ್ಗೊಳ್ಳುವ ಸೌಲಭ್ಯವೂ ಲಭ್ಯವಾಗಲಿದೆ. ಈ ಬಗ್ಗೆ ಹೆಚಚ್ಚಿನ ಮಾಹಿತಿಗೆ ಕರೆ ಮಾಡಿ:  080 2504 3800

ಪ್ರತಿಕ್ರಿಯಿಸಿ (+)