`ಖರೇ ಹೇಳಬೇಕಂದ್ರ ಕನ್ನಡ ಕಲಸಬೇಕು ಅನ್ನು ಹುಕಿ ಹುಟ್ಟಿದ್ದು ಯಾವಾಗಿಂದ ಅಂತ ಹೇಳಾಕ ಆಗೂದಿಲ್ಲ. ಕನ್ನಡ ಬರಲಾರ್ದೊರು ಇದ್ರ ಸಹಾಯ ಮಾಡ್ಬೇಕು ಅಂತ ಅನಿಸಿದ್ದು ಸುಳ್ಳಲ್ಲ.

ನಮ್ಮಪ್ಪಾಜಿ ಸ್ನೇಹಿತರೊಬ್ಬರು ರಾಮಮೂರ್ತಿ ಅಂತ, ಅವರು ಮೊದಲು ಇಂಥದ್ದೊಂದು ತರಬೇತಿಯ ಬಗ್ಗೆ ಕನಸಿನ ಬೀಜ ನೆಟ್ಟರು~.

ಹೀಗೆ ಹೇಳಿದ್ದು ಜಾಹ್ನವಿ ಹಳ್ಳೂರ. ಅನ್ಯ ಭಾಷಿಗರಿಗೆ ಕಳೆದ ಎಂಟು ವರ್ಷಗಳಿಂದ ಕನ್ನಡ ಕಲಿಸುತ್ತಿದ್ದಾರೆ. ಗದಗ ಮೂಲದ ಹುಡುಗಿ. ಹುಟ್ಟಿದ್ದು ಬೆಳೆದದ್ದು ಎಲ್ಲವೂ ಬೆಂಗಳೂರಿನಲ್ಲಿ. ಆದರೆ `ಅತ್ಲಾಕಡೆಯ ಜವಾರಿ ಭಾಷಾ~ ಅಂದ್ರ ಇವರಿಗೆ ಈಗಲೂ ಪ್ರೀತಿ.

ಜಗದೀಶ್ ನಗರದಲ್ಲಿರುವ ತಮ್ಮ ಮನೆಯಲ್ಲಿ ವಲಸಿಗರಿಗೆ ಕನ್ನಡ ಕಲಿಸುತ್ತಾರೆ ಜಾಹ್ನವಿ. ಎಂಟು ವರ್ಷಗಳಿಂದ ಈವರೆಗೆ ನೂರಾರು ಜನರು ಇವರಲ್ಲಿ ಕನ್ನಡ ಕಲಿತಿದ್ದಾರೆ.
ಗದಗ ಜಿಲ್ಲೆಯ ಕೋಳಿವಾಡ ಗ್ರಾಮದ ಗೌಡರ ಮನೆತನ ಇವರದ್ದು. ವಿ.ಡಿ.ಪಾಟೀಲ ಅವರ ಮಗಳು ಜಾಹ್ನವಿ. ಕುಮಾರವ್ಯಾಸನ ವಂಶ ಇವರದ್ದು.

ಮನೆಯಲ್ಲಿ ಸಹಜವಾಗಿಯೇ ಕುಮಾರವ್ಯಾಸ ಭಾರತದ ಪಠಣವಾಗುತ್ತಿತ್ತು. ಪದವಿಯಲ್ಲಿ ಬಿಕಾಂ ಓದಿದರೂ ವ್ಯವಹಾರಕ್ಕಿಂತ ಭಾಷಾ ಸೆಳೆತವೇ ಹೆಚ್ಚಾಯಿತು. ಕನ್ನಡದಲ್ಲಿ ಎಂ.ಎ ಮಾಡಿದರು. ನಂತರ ರಾಮಮೂರ್ತಿ ಅವರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಯ ಮೇಲೆ ಹಿಡಿತ ಇರುವುದರಿಂದ ಅನ್ಯಭಾಷಿಗರಿಗೆ ಕನ್ನಡ ಕಲಿಸುವ ಸಲಹೆ ನೀಡಿದರು. ಆದರೆ ಕನ್ನಡ ಕಲಿಕೆ ಎಲ್ಲಿಂದ ಆರಂಭವಾಗಬೇಕು? ಶುದ್ಧ ಬರಹದೊಂದಿಗೆ, ಓದಿನೊಂದಿಗೆ ಅಥವಾ ಮಾತುಗಳೊಂದಿಗೆ? ಯಾರಿಗೆ ಕಲಿಸಬೇಕು? ಎಷ್ಟು ಕಲಿಸಬೇಕು? ಹೇಗೆ ಆರಂಭಿಸಬೇಕು? ಇಂಥವೇ ಪ್ರಶ್ನೆಗಳು. ಯಾವುದಕ್ಕೂ ಖಚಿತವಾದ ಉತ್ತರಗಳಿರಲಿಲ್ಲ. ಆದರೆ ಎಲ್ಲಕ್ಕೂ ಮಸುಕಾದ ಕೆಲವು ಚಿತ್ರಣಗಳಿದ್ದವು. ಅದಕ್ಕೂ ಸಹಾಯ ಮಾಡಿದ್ದು ರಾಮಮೂರ್ತಿ ಅವರೇ.

ಮದುವೆಯಾಗಿತ್ತು. ಮಗುವಾಗಿತ್ತು. ಸಂಗಾತಿ ಆನಂದ್ ಹಳ್ಳೂರ್ ಸಹ ಈ ಪ್ರಯತ್ನಕ್ಕೆ ಪ್ರೋತ್ಸಾಹಿಸಿದರು.

ಈಗ 75 ಗಂಟೆಗಳ, ನೂರು ಗಂಟೆಗಳ ತರಬೇತಿಯನ್ನು ಆರಂಭಿಸಿದ್ದೇನೆ. ಕನ್ನಡ ಮಾತುಗಾರಿಕೆಯಿಂದ ಆರಂಭವಾದರೂ ಕೊನೆಗೆ ಕನ್ನಡ ಲಿಪಿ, ಓದು ಎರಡನ್ನೂ ಕಲಿಸುವವರೆಗೆ ತರಬೇತಿ ನೀಡಲಾಗುತ್ತದೆ. ಕೊನೆ ಪಕ್ಷ ನಾಮಫಲಕಗಳನ್ನು ಓದುವುದು, ಅರ್ಜಿಗಳನ್ನು ತುಂಬುವುದು ಇಂಥ ಭಾಷಾ ಅಗತ್ಯವನ್ನು ಪೂರೈಸುವಷ್ಟು ಈ ತರಬೇತಿಗಳಲ್ಲಿ ಕಲಿಸಲಾಗುತ್ತದೆ.

ಪಾಠ ಹೇಗೆ? ಉತ್ತರ ಭಾರತೀಯರು ಇಲ್ಲಿ ಐಟಿ ಕ್ಷೇತ್ರಕ್ಕೆ, ಗುಜರಾತಿಗರು ಉದ್ಯಮ ಸ್ಥಾಪನೆಗೆಂದು ಬೆಂಗಳೂರಿಗೆ ಬಂದವರು. ಅವರಿಗೆ ವ್ಯವಹಾರಿಕ ಕನ್ನಡದ ಅಗತ್ಯ ಇರುತ್ತದೆ.

ಬಹುತೇಕ ವಲಸಿಗರಿಗೆ ತಾವು ಹೊರಗಿನವರು ಎಂಬ ಒಂದು ಮಾತು ಚುಚ್ಚುತ್ತಲೇ ಇರುತ್ತದೆ. ಈ ಭಾವದಿಂದ ಹೊರಬರಲು, ಕನ್ನಡಿಗರಂತಾಗಲು ಯತ್ನಿಸುತ್ತಾರೆ. ಕನ್ನಡ ಕಲಿಯಲು ಬಯಸುತ್ತಾರೆ.

ನಮ್ಮಲ್ಲಿ ಬರುವವರಲ್ಲಿ ಸಿಂಹಪಾಲು ಜನ ಕೇಳುವುದು ಆಟೊ ಚಾಲಕರೊಂದಿಗೆ ವ್ಯವಹರಿಸಲು ಕನ್ನಡ ಕಲಿಸಿ ಎಂದು. ಬಸ್ ಬೋರ್ಡ್ ಓದಲು ಲಿಪಿ ಕಲಿಯಲು ಬಂದಿದ್ದಾರೆ. ಅವರಿಗೆಲ್ಲ ಕನ್ನಡದ ಮಾತು ಅಷ್ಟೇ ಅಲ್ಲ, ಸಂವಹನಕ್ಕೆ ಅಗತ್ಯವಿರುವ ಆತ್ಮವಿಶ್ವಾಸವನ್ನೂ ತುಂಬಬೇಕಾಗುತ್ತದೆ. ಅನ್ಯಭಾಷಿಗರು ಎಂದೊಡನೆ ಹೆಚ್ಚು ಹಣ ವಸೂಲಿ ಮಾಡುವವರಿಗೆ ಜೋರು ಮಾಡಲು ಕನ್ನಡ ಬೇಕು ಎನ್ನುತ್ತಾರೆ ಅವರು. ಆಗ `ನಡಿ ಪೊಲೀಸ್ ಸ್ಟೇಷನ್ಗೆ~ ಅನ್ನುವ ಮಟ್ಟಿಗೆ ಕನ್ನಡ ಬೇಕು. ಭಾಷೆಯೊಂದಿಗೆ ಗದರುವ ಭಾವವನ್ನೂ ಹೇಳಿಕೊಡಬೇಕು. ಕನ್ನಡವಷ್ಟೇ ಅಲ್ಲ, ಬಹುತೇಕರಿಗೆ ಕನ್ನಡತನದ ಪರಿಚಯವನ್ನೂ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿಯ ಎಲ್ಲ ಪಾಠಗಳೂ ಪ್ರಾಯೋಗಿಕ ಆಧಾರಿತವಾಗಿವೆ. ಭಾಷೆಯೊಂದಿಗೆ ಧ್ವನಿಸುವ ರೀತಿಯನ್ನೂ ಹೇಳಿಕೊಡಲಾಗುತ್ತದೆ.

ಒಂದೇ ಕೊರತೆ ಎಂದರೆ ಕನ್ನಡ ಕಲಿತವರು ಹೊರಗೆ ಕನ್ನಡ ಬಳಸಲು ಪ್ರಯತ್ನಿಸಿದಾಗ ಪ್ರೋತ್ಸಾಹದಾಯಕ ವಾತಾವರಣವಿಲ್ಲ. ಇವರು ಕನ್ನಡದಲ್ಲಿ ತೊದಲುತ್ತಿದ್ದರೆ, ಕನ್ನಡಿಗರು ಹಿಂದಿಯಲ್ಲಿ ಉತ್ತರಿಸುತ್ತಾರೆ. ಇಂಗ್ಲಿಷ್ನಲ್ಲಿ ಮಾರ್ಗದರ್ಶನ ಮಾಡುತ್ತಾರೆ. ಇದಷ್ಟೇ ಅಲ್ಲ, ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಬೇಕು. ಈಗ ಮೆಡಿಕಲ್ ಶಾಪ್ಗೆ ಔಷಧದ ಅಂಗಡಿ ಎಂದೇ ಬರೆಯಬೇಕು. ನರ್ಸಿಂಗ್ ಹೋಮ್ಗೆ ಆಸ್ಪತ್ರೆ ಎಂದೇ ಬರೆಯಬೇಕು.

ಮಾಲ್ಗಳಲ್ಲಿ ರೈಸ್ ಜೊತೆಗೆ ಅಕ್ಕಿ ಎಂದೂ, ತೂರ್ ದಾಲ್ ಜೊತೆಗೆ ತೊಗರಿ ಬೇಳೆ ಎಂದೂ ಬರೆಯಬೇಕು. ಇಂಥ ಕನ್ನಡತನದ ಸೃಷ್ಟಿಗಾಗಿ ಕನ್ನಡ ಪ್ರಾಧಿಕಾರ, ಕನ್ನಡ ಸಂಸ್ಕೃತಿ ಇಲಾಖೆ ಮುಂದಾಗಬಹುದು ಅಥವಾ ಕನ್ನಡಿಗರೇ ಮುಂದಾದರೂ ಸಾಕು ಎನ್ನುವುದು ಅವರ ಅಭಿಪ್ರಾಯವಾಗಿದೆ.

ಈವರೆಗೆ ತೆಲುಗು, ತಮಿಳು, ಮಲಯಾಳಂ ಮಾತೃಭಾಷೆಯವರು ಕನ್ನಡ ಕಲಿತಿದ್ದಾರೆ. ಉತ್ತರ ಭಾರತೀಯ ರಾಜ್ಯದವರನ್ನು ಹೋಲಿಸಿದ್ದಲ್ಲಿ ತಮಿಳಿಗರು ಭಾಷೆಯನ್ನು ಬಲು ಸುಲಭವಾಗಿ ಗ್ರಹಿಸುತ್ತಾರೆ. ಅವರೆಲ್ಲ ಕನ್ನಡದ ಅಕ್ಷರಗಳನ್ನು ಬರೆದಾಗಲೆಲ್ಲ ಮನದಲ್ಲೇನೋ ಒಂಥರ ಖುಷಿಯಾಗುತ್ತದೆ ಎಂದು ಜಾಹ್ನವಿ ತಮ್ಮ ವಿದ್ಯಾರ್ಥಿಗಳ ಬಗ್ಗೆ ಹೇಳುತ್ತಾರೆ.

ಇನ್ನು ಇಲ್ಲಿ ಕಲಿತವರು ಕೇವಲ ಮಾತನಾಡಲು ಕಲಿತು ಸಾಕೆಂದವರಿಲ್ಲ. ಕೆಲವು ಉತ್ತರ ಭಾರತೀಯರು ಕನ್ನಡದ ಕಾದಂಬರಿಗಳನ್ನು ಓದುವ, ಪತ್ರಿಕೆಗಳನ್ನು ಓದುವ ಆಸಕ್ತಿಯನ್ನೂ ತೋರುತ್ತಾರೆ. ಅಷ್ಟರ ಮಟ್ಟಿಗೆ ಈ ತರಬೇತಿ `ಬರೀ ಮಾತಿಗೆ~ ಸೀಮಿತವಾಗಿಲ್ಲ. ಅನ್ಯರಿಗೆ ಕನ್ನಡ-ಕನ್ನಡತನ ಕಲಿಸುವಲ್ಲಿ ಸಾರ್ಥಕ್ಯ ಕಾಣುತ್ತಿದೆ ಎನ್ನುವುದೇ ಜಾಹ್ನವಿ ಅವರ ಯಶಸ್ಸಾಗಿದೆ. ಹೆಚ್ಚಿನ ಮಾಹಿತಿಗೆ: 2525235759 ಅಥವಾ januhallur@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.